ನಿಮಗೆ ಖಾರ ಅಂದ್ರೆ ಇಷ್ಟಾನಾ?? ಹಾಗಿದ್ದರೆ ಟ್ರೈ ಮಾಡಿ ಸ್ಪೆಷಲ್ ಮೆಣಸಿನ ಕಾಯಿ ಪಲ್ಯ. ಎಲ್ಲರೂ ಇಷ್ಟ ಪಟ್ಟು ಮತ್ತೆ ಮತ್ತೆ ಕೇಳಿ ಮಾಡಿಸಿಕೊಳ್ತಾರೆ.

ನಮಸ್ಕಾರ ಸ್ನೇಹಿತರೇ ಖಾರ ಇಷ್ಟವಾಗುವವರಿಗೆ ಈ ಒಂದು ಪಲ್ಯ ಇದ್ರೆ ಸಾಕು ಒಂದು ಹೊತ್ತಿನ ಊಟ ಚಿಂತೆಯಿಲ್ಲದೇ ಆಗಿಬಿಡುತ್ತೆ. ಹಾಗೆಯೇ ಈ ಪಲ್ಯವನ್ನು ಮಾಡಿಕೊಳ್ಳುವುದು ಕೂಡ ಅಷ್ಟೇ ಸುಲಭ. ಹಾಗಾಗಿ ಯಾವಾಗ ಬೇಕಾದರೂ ಈ ಪಲ್ಯವನ್ನು ಧಿಡೀರ್ ಅಂತ ಮಾಡಿಯೇ ಬಿಡಬಹುದು. ಹಸಿಮೆಣಸಿನ ಕಾಯಿ ಪಲ್ಯ ಮಾಡುವ ವಿಧಾನ ನೋಡೋಣ ಬನ್ನಿ.

ಮೆಣಸಿನ ಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು: ೩ ದೊಡ್ಡ ಚಮಚ ಎಣ್ಣೆ, ಹಸಿ ಮೆಣಸಿನಕಾಯಿ – ೧೫ ರಿಂದ ೨೦, ಬೆಳ್ಳುಳ್ಳಿ ೨೦ ಎಸಳುಗಳು, ಹಸಿ ಶುಂಠಿ ಸ್ವಲ್ಪ, ನೆನೆಸಿದ ಹುಣಸೆ ಹಣ್ಣುಒಂದು ನಿಂಬೆ ಗಾತ್ರದ್ದು. ಒಗ್ಗರಣೆಗೆ ಜೀರಿಗೆ ೧ ಚಮಚ, ಕರಿಬೇವಿನ ಎಲೆ ೮-೧೦, ಉದ್ದಿನ ಬೇಳೆ ಒಂದು ಚಮಚ, ಕಡ್ಲೆ ಬೇಳೆ ಒಂದು ಚಮಚ, ಜಜ್ಜಿದ ಬೆಳ್ಳುಳ್ಳಿ ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ ಒಂದು ಬೆಲ್ಲ ಸ್ವಲ್ಪ, ಅರಿಶಿನ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಹಸಿ ಮೆಣಸಿನಕಾಯಿ ಹಾಕಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿದಿತಣಿಯಲು ಬಿಡಿ. ಈಗ ಒಂದು ಮಿಕ್ಸಿ ಜಾರಿಗೆ ಹುರಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು,ಹಸಿ ಶುಂಠಿಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಹುಣಸೆಹಣ್ಣನ್ನು ನೆನೆಸಿ ಅದರ ನೀರನ್ನು ತೆಗೆದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಜೀರಿಗೆ, ಕರಿಬೇವಿನ ಎಲೆ, ಉದ್ದಿನ ಬೇಳೆ, ಕಡ್ಲೆ ಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ. ಒಂದು ನಿಮಿಷದ ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಬೇಕು. ಈರುಳ್ಳಿ ಬೆಂದ ಮೇಲೆ ಇದಕ್ಕೆ ಹುಣಸೆ ಹಣ್ಣಿನ ರಸ, ಮತ್ತು ಬೆಲ್ಲ ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಈಗ ರುಬ್ಬಿದ ಹಸಿ ಮೆಣಸಿನಕಾಯಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷಗಳ ಕಾಲ ಬೇಯಿಸಿ. ಇದೀಗ ರುಚಿಯಾದ ಹಸಿ ಮೆಣಸಿನಕಾಯಿ ಪಲ್ಯ ಸವಿಯಲು ಸಿದ್ಧ. ಇನ್ನು ಈ ಪಲ್ಯವನ್ನು ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿಯ್ಯುಕೊಂಡು ಕೂಡ ಬೇಕಾದಾಗ ಬಳಸಬಹುದು ೨-೩ ದಿನ ಇದು ಹಾಳಾಗುವುದಿಲ್ಲ.