ಕೇವಲ 15 ನಿಮಿಷಗಳಲ್ಲಿ ದಿಡೀರ್ ಎಂದು ಎಲ್ಲರೂ ಹೆಚ್ಚು ತಿನ್ನುವಂತಹ ರವಾ ವಡೆ ಮಾಡುವುದು ಹೇಗೆ ಗೊತ್ತೇ??

ಬೆಳಗಿನ ಉಪಹಾರ ಎಲ್ಲರಿಗೂ ಬಹಳ ಮುಖ್ಯವಾದದ್ದು. ಬೆಳಗ್ಗೆ ತಿನ್ನುವ ತಿಂಡಿ ಚೆನ್ನಾಗಿದ್ದರೆ, ಇಡೀ ದಿನ ವ್ಯಕ್ತಿಯ ಚಿಂತನೆ ಹಾಗು ಮೂಡ್ ಚೆನ್ನಾಗಿರುತ್ತದೆ. ಬೆಳಗ್ಗಿನ ತಿಂಡಿಗಳಲ್ಲಿ ಬಹುತೇಕ ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುವುದು ಇಡ್ಲಿ. ಇದನ್ನು ಬೆಳಗ್ಗಿನ ತಿಂಡಿಗೆ ಹೆಚ್ಚಾಗಿ ಮಾಡುತ್ತಾರೆ, ಇಡ್ಲಿಯಲ್ಲಿ ಹಲವು ವೆರೈಟಿ ಇದೆ, ತಟ್ಟೆ ಇಡ್ಲಿ, ಬಟನ್ ಇಡ್ಲಿ, ಪುಡಿ ಇಡ್ಲಿ, ಮಲ್ಲಿಗೆ ಇಡ್ಲಿ, ಕಾಂಚೀಪುರಂ ಇಡ್ಲಿ ಹೀಗೆ ಬಹಳಷ್ಟು ರೀತಿಗಳಲ್ಲಿ ಇಡ್ಲಿ ಮಾಡುತ್ತಾರೆ. ಇಡ್ಲಿ ಜೊತೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವುದು. ಇಡ್ಲಿ ವಡೆ ಕಾಂಬಿನೇಶನ್ ಅನ್ನು ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಗಳಲ್ಲಿ ಹಲವು ಬಾರಿ ಇಡ್ಲಿ ಮಾಡಿದರೆ, ವಡೆ ಮಾಡಲು ಸಮಯ ಸಾಲುವುದಿಲ್ಲ ಎನ್ನುತ್ತಾರೆ .

ಇಂದು ನಾವು ನಿಮಗೆ ಕೇವಲ 15 ನಿಮಿಷದಲ್ಲಿ ವಿಭಿನ್ನವಾದ ಇಡ್ಲಿ ಮಾಡಲು ತಿಳಿಸಿಕೊಡುತ್ತೇವೆ. ಇದು ಉದ್ದಿನವಡೆ ಅಲ್ಲ, ಬದಲಾಗಿ ರವೆ ವಡೆ ಆಗಿದೆ, ಇದನ್ನು ಬಹಳ ಸುಲಭವಾಗಿ ಮಾಡಬಹುದು. ಸುಲಭವಾಗಿ ಮಾಡುವ ಈ ವಡೆಯ ರೆಸಿಪಿಯನ್ನು ಈಗ ತಿಳಿಸುತ್ತೇವೆ.. ರವೆ ವಡೆ ಮಾಡಲು ಬೇಕಾಗುವ ಸಾಮಾಗ್ರಿಗಳು, ಉಪ್ಪು-1/2 ಟೀ ಸ್ಪೂನ್, ಎಣ್ಣೆ -1 ಟೀ ಸ್ಪೂನ್, ರವೆ – 1 1/2 ಕಪ್, ಜೀರಿಗೆ-1 ಟೀ ಸ್ಪೂನ್, ಮೆಣಸಿನ ಪುಡಿ-1/2 ಟೀ ಸ್ಪೂನ್. 4 ರಿಂದ 5 ಕರಿಬೇವಿನ ಎಲೆ, ಸಣ್ಣದಾಗಿ ಹೆಚ್ಚಿದ ಮೆಣಸಿನಕಾಯಿ – 2, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀ ಸ್ಪೂನ್, ನಿಂಬೆ ರಸ-2 ಟೀ ಸ್ಪೂನ್.

ಮಾಡುವ ವಿಧಾನ :- ಮೊದಲಿಗೆ ಒಂದು ದೊಡ್ಡ ಪಾತ್ರೆ ತೆಗೆದುಕೊಳ್ಳಿ, ಅದಕ್ಕೆ ಎರಡು ಕಪ್ ನೀರು, 1/2 ಟೀ ಸ್ಪೂನ್ ಉಪ್ಪು, 1 ಟೀ ಸ್ಪೂನ್ ಎಣ್ಣೆ ಹಾಕಿ ಕುದಿಸಿ, ಕುದಿಯಲು ಆರಂಭವಾದಾಗ, 1 1/2 ಕಪ್ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರವೆ ನೀರನ್ನು ಹೀರಿಕೊಂಡು, ಗಟ್ಟಿ ಆಗುವವರೆಗೂ ಮಿಕ್ಸ್ ಮಾಡಿ. ಮಿಕ್ಸ್ ಮಾಡಿ, ಬೇಯಿಸಿದ ರವೆಯನ್ನು ಮತ್ತೊಂದು ದೊಡ್ಡ ಪಾತ್ರೆಗೆ ಹಾಕಿ, ಅದಕ್ಕೆ 1 ಟೀ ಸ್ಪೂನ್ ಜೀರಿಗೆ, 1/2 ಟೀ ಸ್ಪೂನ್ ಮೆಣಸಿನ ಪುಡಿ, ಹಚ್ಚಿರುವ ಕರಿಬೇವು, ಹೆಚ್ಚಿರುವ 2 ಮೆಣಸಿನಕಾಯಿ, 2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, ಹಾಗೂ 2 ಟೀ ಸ್ಪೂನ್ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಬಳಿಕ ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ, ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು, ವಡೆಯ ಆಕಾರಕ್ಕೆ ತಟ್ಟಿ, ಮತ್ತೊಂದು ಕಡೆ ಸ್ಟವ್ ಮೇಲೆ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡೀ, ಎಣ್ಣೆ ಕಾದ ನಂತರ ವಡೆಯನ್ನು ಹಾಕಿ ಡೀಪ್ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಆಗುವ ವರೆಗೂ ಫ್ರೈ ಮಾಡಿ, ನಂತರ ತೆಗೆಯಿರಿ. ಇಡ್ಲಿ ಚಟ್ನಿ ಜೊತೆಗೆ ವಡೆ ಸೇವಿಸಬಹುದು ಅಥವಾ, ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಸಹ ತಿನ್ನಬಹುದು