Best recharge plans in Kannada: ಬಾರಿ ಪೈಪೋಟಿ ನಡೆಸುತ್ತಿರುವ ಏರ್ಟೆಲ್ ಹಾಗೂ ಜಿಯೋ ದಲ್ಲಿ ಕಡಿಮೆ ಬೆಲೆಯಲ್ಲಿ ಬೆಸ್ಟ್ ಪ್ಲಾನ್ ಯಾವುದು ಗೊತ್ತೇ??

ಭಾರತ ದೇಶದ ಟೆಲಿಕಾಂ ಕಂಪೆನಿಗಳಲ್ಲಿ ಭಾರಿ ಪೈಪೋಟಿ ನಡೆಸಿ ಅಗ್ರಸ್ಥಾನದಲ್ಲಿ ಇರುವುದು ಜಿಯೋ ಮತ್ತು ಏರ್ಟೆಲ್. ಗ್ರಾಹಕರನ್ನು ಸೆಳೆದು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಈ ಎರಡು ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ. ಹಲವು ಆಕರ್ಷಕ ಪ್ಲಾನ್ ಗಳನ್ನು ತಮ್ಮ ಗ್ರಾಹಕರಿಗೆ ತರುತ್ತಿವೆ. ಪ್ರೀಪೇಯ್ಡ್ ನಲ್ಲಿ ಗ್ರಾಹಕರಿಗೆ ಇಷ್ಟ ಆಗುವಂತಹ ಅಗ್ಗದ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಗಳನ್ನು ಹೊರತರಲಾಗಿದ್ದು, ಅವುಗಳು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಿದೆ. ಈ ಅಗ್ಗದ ಬೆಲೆಯ ಪ್ಲಾನ್ ಮೂಲಕ, ಉಚಿತ ಕರೆಗಳು, ಉಚಿತ ಎಸ್.ಎಂ.ಎಸ್, ಇಂಟರ್ನೆಟ್ ಮತ್ತು ಬೇರೆ ಅಪ್ಲಿಕೇಶನ್ ಗಳ ಸೇವೆಗಳನ್ನು ಪಡೆಯಬಹುದು. ಆ ಎರಡು ಪ್ಲಾನ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.

ಇಂದು ನಾವು ನಿಮಗೆ ಹೇಳುತ್ತಿರುವುದು, ಜಿಯೋ 259 ರೂಪಾಯಿತ ರೀಚಾರ್ಜ್ ಮತ್ತು ಏರ್ಟೆಲ್ ನ 265 ರೂಪಾಯಿಯ ರೀಚಾರ್ಜ್ ಪ್ಲಾನ್ ಬಗ್ಗೆ. ಜಿಯೋ ಪರಿಚಯಿಸಿರುವ 259 ರೂಪಾಯಿಯ ಪ್ಲಾನ್ ಕ್ಯಾಲೆಂಡರ್ ನ ಪ್ರಕಾರ ಪೂರ್ತಿ ತಿಂಗಳು ಬರುತ್ತದೆ, ರೀಚಾರ್ಜ್ ಡೇಟ್ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 1.5ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ, ಡೇಟಾ ಮುಗಿದ ಬಳಿಕ 64ಕೆಬಿಪಿಎಸ್ ಸ್ಪೀಡ್ ನಲ್ಲಿ ಡೇಟಾ ಬಳಸಬಹುದು. ಇದರ ಜೊತೆಗೆ, ಪ್ರತಿದಿನ ಜಿಯೋ ಮತ್ತು ಇತರೆ ನೆಟ್ವರ್ಕ್ ಗಳಿಗೆ ಉಚಿತ ಅನಿಯಮಿತ ಕರೆಗಳು ಸಿಗಲಿದೆ, ಮತ್ತು ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಲಭ್ಯವಿರುತ್ತದೆ. ಇದರ ಜೊತೆಗೆ ಜಿಯೋ ಅಪ್ಲಿಕೇಶನ್ ಗಳ ಚಂದಾದಾರಿಕೆ ಸಹ ಸಿಗುತ್ತದೆ, ಪೂರ್ತಿ ಒಂದು ತಿಂಗಳು ಈ ಸೇವೆ ಇರುತ್ತದೆ.

ambani jio airtel

ಏರ್ಟೆಲ್ ನ 265 ರೂಪಾಯಿಯ ಪ್ಲಾನ್ ಬಗ್ಗೆ ಹೇಳುವುದಾರೆ, ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳ ವರೆಗು ಇರುತ್ತದೆ. ಏರ್ಟೆಲ್ ನ ಈ ಪ್ಲಾನ್ ನಲ್ಲಿ ದಿನಕ್ಕೆ 1ಜಿಬಿ ಡೇಟಾ ನಿಮಗೆ ಸಿಗುತ್ತದೆ. ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ, ಇದರ ಜೊತೆಗೆ ಅಮೆಜಾನ್ ಪ್ರೈಮ್ ಫ್ರೀ ಟ್ರಯಲ್ ಸಬ್ಸ್ಕ್ರಿಪ್ಶನ್ ಸಹ ಸಿಗುತ್ತದೆ. ಇದರ ಜೊತೆಗೆ ಉಚಿತ ಹಲೋ ಟ್ಯುನ್ಸ್, ವಿಂಕ್ ಮ್ಯೂಸಿಕ್ ಚಂದಾದಾರಿಕೆ ಇರುತ್ತದೆ. ಈ ಎರಡು ಪ್ಲಾನ್ ಗಳನ್ನು ನೋಡುವುದಾರೆ ಸಿಮಿಲಾರಿಟಿ ಇದ್ದರು ಸಹ, ಜಿಯೋದಲ್ಲಿ 30 ದಿನಗಳ ವ್ಯಾಲಿಡಿಟಿ ಮತ್ತು 1.5ಜಿಬಿ ಡೇಟಾ, ಏರ್ಟೆಲ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಜೊತೆಗೆ ದಿನಕ್ಕೆ 1ಜಿಬಿ ಡೇಟಾ, ಆದರೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಸಿಗುತ್ತಸೆ. ಡೇಟಾ ಮತ್ತು ವ್ಯಾಲಿಡಿಟಿ ನೋಡುವುದಾದರೆ, ಜಿಯೋ ಪ್ಲಾನ್ ಬೆಸ್ಟ್ ಎಂದು ಅನ್ನಿಸುತ್ತದೆ.

Comments are closed.