Film News: ಆ ಡೈರೆಕ್ಟರ್ ಅಂದು ನನ್ನನ್ನು ರೂಮಿಗೆ ಕರೆದು ಬಿಟ್ಟ: ಅಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ ಎಂದು ಇರುವುದನ್ನು ಒಪ್ಪಿಕೊಂಡು ನಟಿ ಹೇಳಿದ್ದೇನು ಗೊತ್ತೇ??
Film News: ಚಿತ್ರರಂಗ ಈಗ ಮೊದಲಿನ ಹಾಗಿಲ್ಲ,. ಮೊದಲೆಲ್ಲಾ ಅವಕಾಶಗಳು ಸಿಗಬೇಕು ಎಂದರೆ, ಟ್ಯಾಲೆಂಟ್ ಇರಬೇಕಿತ್ತು. ಟ್ಯಾಲೆಂಟ್ ಇರುವವರಿಗೆ ಚೆನ್ನಾಗಿ ನಟನೆ ಮಾಡುವಬರು ಅವಕಾಶ ಸಿಗುತ್ತಿತ್ತು. ಆದರೆ ಈಗ ಹಾಗಿಲ್ಲ, ಕಮಿಟ್ಮೆಂಟ್ ಕೊಡುವ ಹುಡುಗಿಯರಿಗೆ ಹೆಚ್ಚು ಅವಕಾಶ. ಅವರಲ್ಲಿ ಟ್ಯಾಲೆಂಟ್ ಇಲ್ಲದೆ ಹೋದರು ಸಹ, ಕಮಿಟ್ಮೆಂಟ್ ಕಾರಣದಿಂದ ಅವಕಾಶ ಕೊಟ್ಟುಬಿಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇದು ಜಾಸ್ತಿಯೇ ಆಗುತ್ತಿದೆ. ಮೊದಲೆಲ್ಲಾ ಈ ಕ್ಯಾಸ್ಟಿಂಗ್ ಕೌಚ್ ಪ್ರವೃತ್ತಿ ಬಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಿಸುತ್ತಿತ್ತು, ಆದರೆ ಈಗ ಸೌತ್ ಇಂಡಿಯಾದಲ್ಲು ಹೆಚ್ಚಾಗುತ್ತಿದೆ. ಮೀ ಟು ಕ್ಯಾಂಪೇನ್ ಶುರುವಾದ ನಂತರ, ಬಹಳಷ್ಟು ನಾಯಕಿಯರು ಕ್ಯಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಅದೆಷ್ಟೋ ಕಥೆಗಳು ಬೆಳಕಿಗೆ ಬಂದಿದೆ. ಇದೀಗ ಟಾಲಿವುಡ್ (Tollywood) ನ ಮತ್ತೊಬ್ಬ ನಟಿ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮತ್ತು ಸಿನಿಮಾಗಳು ಎರಡರ ಮೂಲಕ ಕೂಡ ಗುರುತಿಸಿಕೊಂಡಿರುವ ನಟಿ ತೇಜಸ್ವಿ ಮಡಿವಾಡ (Tejasvi Madivada) ಅವರು ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ್ದು, “ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಕೆರಿಯರ್ ಶುರುವಿನಲ್ಲಿ ಒಬ್ಬ ನಿರ್ದೇಶಕ ನನ್ನನ್ನು ಕಮಿಟ್ಮೆಂಟ್ ಕೇಳಿದ್ದರು. ಒಂದು ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ಕರೆಸಿದರು. ಅಸಿಸ್ಟಂಟ್ ಡೈರೆಕ್ಟರ್ ಬಂದು, ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು..ಡೈರೆಕ್ಟರ್ ಆಗಾಗ ನಿಮ್ಮ ರೂಮ್ ಗೆ ಬರುತ್ತಾರೆ ಎಂದು ಹೇಳಿದರು..
ಆಗ ನನಗೆ ಅರ್ಥವಾಯಿತು. ನಾನು ನೋ ಎಂದು ಹೇಳಿಬಿಟ್ಟೆ. ಆ ಕಾರಣಕ್ಕೆ ನನ್ನನ್ನು ಆ ಸಿನಿಮಾ ಇಂದ ತೆಗೆದುಹಾಕಿಬಿಟ್ಟರು. ನಾನು ನನ್ನ ಟ್ಯಾಲೆಂಟ್ ನಂಬಿ ಚಿತ್ರರಂಗಕ್ಕೆ ಬಂದವಳು, ಈಗಲೂ ನನಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ತೆಲುಗಿನಲ್ಲಿ ಬಹಳಷ್ಟು ನಟಿಯರಿಗೆ ಈ ಅನುಭವ ಆಗಿದೆ..”ಎಂದು ನಟಿ ತೇಜಸ್ವಿ ಹೇಳಿದ್ದು, ಈ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Comments are closed.