ಸಮಯವಿಲ್ಲದೆ ಇದ್ದಾಗ ಕೇವಲ ಐದು ನಿಮಿಷದಲ್ಲಿ ಮಾಡಿ ರುಚಿಯಾದ ಟೊಮೊಟೊ ದೋಸೆ, ಬ್ಯಾಚುಲರ್ಸ್ ಗೆ ಬಹಳ ಸುಲಭ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ದೋಸೆ ಇರತ್ತೆ. ಅದರಲ್ಲೂ ಉದ್ದು ಅಕ್ಕಿ ಹಾಕಿ ಮಾಡುವ ದೋಸೆಗಳು ಅದರಲ್ಲಿ ವಿಶೇಷ ಏನು ಇರಲ್ಲ ಬಿಡಿ, ಆದರೆ ದಿನವೂ ಬೇರೆ ಬೇರೆ ರೀತಿಯ ದೋಸೆಯನ್ನು ಮಾಡಬಹುದು. ಅದರಲ್ಲೂ ನಾವಿಂದು ಹೇಳುವ ದೋಸೆಯಂತೂ ಸಕ್ಕತ್ ಸುಲಭ. ರೂಮ್ ಮಾಡಿಕೊಂಡು ಇರುವ ಬ್ಯಾಚುಲರ್ಸ್ ಗಳೂ ಕೂಡ ಸುಲಭವಾಗಿ ಈ ದೋಸೆಯನ್ನು ಸಂಜೆ ತಿಂಡಿಯಾಗಿಯೂ ಮಾಡ್ಕೋಬಹುದು.

ಬೇಕಾಗುವ ಸಾಮಗ್ರಿಗಳು: ಚಿರೋಟಿ ರವಾ 100ಗ್ರಾಂ, 50 ಗ್ರಾಂ ಅಕ್ಕಿಹಿಟ್ಟು, 20ಗ್ರಾಂ ಗೋದಿ ಹಿಟ್ಟು, ಅಚ್ಚ ಖಾರದ ಪುಡಿ ಸ್ವಲ್ಪ, ಶುಂಠಿ ಸ್ವಲ್ಪ, ಟೊಮ್ಯಾಟೋ ಹಾಗೂ ಈರುಳ್ಳಿ ಹೆಚ್ಚಿದ್ದು ತಲಾ ೨-೩, ಕೊತ್ತಂಬರಿ ಸೊಪ್ಪು ಸ್ವಲ್ಪ, ಜೀರಿಗೆ ಸ್ವಲ್ಪ, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸರ್ ಜಾರ್ ಗೆ ಹೆಚ್ಚಿಟ್ಟ ಟೊಮ್ಯಾಟೊ, ಖಾರದ ಪುಡಿ, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪಿ ಹಾಗೂ ಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ರುಬ್ಬಿದ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ಸುರಿಯಿರಿ. ನಂತರ ಚಿರೋಟಿ ರವಾ, ಅಕ್ಕಿ ಹಿಟ್ಟು, ಗೋದಿ ಹಿಟ್ಟು, ಕೊತ್ತಂಬರಿ ಸೊಪ್ಪು, ಈರುಳ್ಳಿ ಇವುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಅಗತ್ಯವಿದ್ದರೆ ನೀರನ್ನು ಹಾಕಿ ಸ್ವಲ್ಪ ದೋಸೆ ಹಿಟ್ಟನ್ನು ತೆಳ್ಳಗೆ ಮಾಡಿಕೊಳ್ಳಿ. ಹತ್ತು ನಿಮಿಷ ನೆನೆಯಲು ಬಿಡಿ. ನಂತರ ಒಂದು ತವಾ ವನ್ನು ಬಿಸಿ ಮಾಡಿಕೊಂಡು ಅದಕ್ಕೆ ದೋಸೆ ಹಿಟ್ಟನ್ನು ಹೊಯ್ಯಿರಿ, ಮೇಲಿಂದ ಸ್ವಲ್ಲ ಎಣ್ಣೆಯನ್ನು ಹಾಕಿ ದೋಸೆ ಬೆಂದ ಮೇಲೆ ಒಂದು ಪ್ಲೇಟ್ ಗೆ ಹಾಕಿ ಸರ್ವ್ ಮಾಡಿ. ಖಾರದ ಚಟ್ನಿ, ಕಾಯಿ ಚಟ್ನಿ ಅಥವಾ ಮೊಸರಿನ ಜೊತೆ ಈ ದೋಸೆಯನ್ನು ಸವಿಯಬಹುದು. ಟೊಮ್ಯಾಟೋ ದೋಸೆ ಮಾಡುವ ವಿಧಾನವನ್ನು ಈ ಕೆಳಗಿನ ವಿಡಿಯೋ ಮೂಲಕವೂ ತಿಳಿಯಬಹುದು.