Mahesh Namratha: ಮಹೇಶ್ ಬಾಬು, ನಟಿ ನಮ್ರತಾರವರನ್ನು ಮದುವೆಯಾಗಲು ತಂದೆ ಕೃಷ್ಣ ಬೇಡ ಎಂದಿದ್ದರು, ಯಾಕೆ ಗೊತ್ತೇ?? ಆ ನಟಿಯ ಬಗ್ಗೆ ಕೃಷ್ಣ ಗೆ ಏನು ಗೊತ್ತಿತ್ತು ಗೊತ್ತೇ?
Mahesh Namratha: ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಲವ್ ಸ್ಟೋರಿಗಳಿವೆ, ಹೀಗೆ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಒಂದು ಜೋಡಿ ನಟ ಮಹೇಶ್ ಬಾಬು ಹಾಗೂ ನಟಿ ನಮ್ರತಾ ಅವರು. ನಟಿ ನಮ್ರತಾ ಅವರು ಮಿಸ್ ಇಂಡಿಯಾ ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡವರು. ಹಾಗೆಯೇ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದರು, ವಂಶಿ ಸಿನಿಮಾ ಮೂಲಕ ಇವರಿಗೆ ಮಹೇಶ್ ಬಾಬು ಅವರ ಪರಿಚಯ ಆಯಿತು. ಆಗಲೇ ಇಬ್ಬರ ನಡುವೆ ಪ್ರೀತಿ ಕೂಡ ಶುರುವಾಗಿತ್ತು.

ಸುಮಾರು ನಾಲ್ಕು ವರ್ಷಗಳ ಕಾಲ ಯಾರಿಗೂ ಗೊತ್ತಾಗದ ಹಾಗೆ ಸೀಕ್ರೆಟ್ ಆಗಿ ಲವ್ ಮಾಡಿದ್ದ ಈ ಜೋಡಿ, ದಿಢೀರ್ ಎಂದು 2005ರ ಫೆಬ್ರವರಿ 10ರಂದು ಮುಂಬೈನಲ್ಲಿ ಮದುವೆಯಾದರು. ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರ ಮಗನ ಮದುವೆ ಇಷ್ಟು ಸೈಲೆಂಟ್ ಆಗಿ ನಡೆದದ್ದು ಎಲ್ಲರಿಗೂ ಶಾಕ್ ನೀಡಿತ್ತು. ಅಸಲಿ ವಿಷಯ ಏನು ಎಂದರೆ ಆ ಸಮಯದಲ್ಲಿ ಕೃಷ್ಣ ಅವರಿಗೆ ಈ ಮದುವೆಗೆ ಪೂರ್ತಿಯಾಗಿ ಒಪ್ಪಿಗೆ ಇರಲಿಲ್ಲ. ಈ ಸುದ್ದಿ ಆಗ ಸೆನ್ಸೇಷನ್ ಆಗಿತ್ತು.
ಮದುವೆಯಾದ ಕೆಲ ಸಮಯ ನಮ್ರತಾ ಅವರನ್ನು ಸೊಸೆ ಎಂದು ಕೃಷ್ಣ ಅವರು ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕೆಲವು ಕಾರಣಗಳು ಕೂಡ ಇದೆ, ನಮ್ರತಾ ಅವರು ಅದಾಗಲೇ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದರು. ಜೊತೆಗೆ ನಮ್ರತಾ ಅವರಿಗೆ ದೀಪಕ್ ಶೆಟ್ಟಿ ಹಾಗೂ ಮಹೇಶ್ ಮಂಜರೇಕರ್ ಅವರೊಡನೆ ಅಫೇರ್ ಇದೆ ಎಂದು ಸುದ್ದಿಯಾಗಿತ್ತು. ಈ ಕಾರಣಕ್ಕೆ ಸೂಪರ್ ಸ್ಟಾರ್ ಕೃಷ್ಣ ಅವರು ಮದುವೆಗೆ ಒಪ್ಪಿರಲಿಲ್ಲ. ಆದರೆ ಮಹೇಶ್ ಬಾಬು, ಮಂಜುಳಾ ಅವರು ಹಾಗೂ ಇಂದಿರಾದೇವಿ ಅವರು ಎಲ್ಲರೂ ಸೇರಿ ಕೃಷ್ಣ ಅವರನ್ನು ಮದುವೆಗೆ ಒಪ್ಪಿಸಿದರು.
ಆದರೆ ನಮ್ರತಾ ಅವರು ಮದುವೆಯಾದ ನಂತರ ತಮ್ಮ ಸಿನಿಮಾ ಕೆರಿಯರ್ ಗೆ ಪೂರ್ತಿಯಾಗಿ ಗುಡ್ ಬೈ ಹೇಳಿ, ಫುಲ್ ಟೈಮ್ ಗೃಹಿಣಿಯಾದರು. ಮಹೇಶ್ ಬಾಬು ಅವರ ಎಲ್ಲಾ ಬೇಕು ಬೇಡಗಳನ್ನು ನಮ್ರತಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಗೌತಮ್ ಹಾಗೂ ಸಿತಾರ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಇಂದಿಗು ಕೂಡ ಮಹೇಶ್ ಬಾಬು ಅವರು ಸ್ಟಾರ್ ಹೀರೋ ಆಗಿರುವುದಕ್ಕೆ ನಮ್ರತಾ ಅವರು ಕೂಡ ಪ್ರಮುಖ ಕಾರಣ ಎಂದರೆ ತಪ್ಪಲ್ಲ.
Comments are closed.