Akkineni: ದಿಡೀರ್ ಎಂದು ತಿರುಪತಿ ತಿಮ್ಮಪ್ಪನ ಮೊರೆ ಹೋದ ಅಕ್ಕಿನೇನಿ ಕುಟುಂಬ: ನೆಟ್ಟಿಗರು ಗರಂ ಆಗಿದ್ದು ಯಾಕೆ ಗೊತ್ತೇ??
Akkineni: ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರು ಪತ್ನಿ ಅಮಲಾ ಅವರ ಜೊತೆಗೆ ತಿರುಪರಿ ತಿರುಮಲ ಪುಣ್ಯಕ್ಷೇತ್ರಕ್ಕೆ ಹೋಗಿದ್ದಾರೆ. ಇವರ ಮಗ ಅಖಿಲ್ ಅವರ ಏಜೆನ್ಟ್ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಅಖಿಲ್ ಅವರು ಒಂದು ಕೂಡ ಇಂಡಸ್ಟ್ರಿ ಹಿಟ್ ಸಿಕ್ಕಿಲ್ಲ, ಈ ಸಿನಿಮಾ ಮೂಲಕ ಆದರೂ ಮಗನಿಗೆ ಯಶಸ್ಸು ಸಿಗಲಿ ಎಂದು ದಂಪತಿಗಳು ದೇವರ ಮೊರೆ ಹೋಗಿದ್ದಾರೆ..

ಇನ್ನು ನಾಗಚೈತ್ಯನ್ಯ ಅವರು ಕೂಡ ವೆಂಕಟ್ ಪ್ರಭು ಅವರ ನಿದೇಶನದಲ್ಲಿ ಕಸ್ಟಡಿ ಎನ್ನುವ ಸಿನಿಮಾ ಮಾಡಿದ್ದು, ಕೃತಿ ಶೆಟ್ಟಿ ಹೀರೋಯಿನ್ ಆಗಿರುವ ಈ ಸಿನಿಮಾ ಮುಂದಿನ ತಿಂಗಳು ತೆರೆಕಾಣಲಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಒಳ್ಳೆಯ ನಿರೀಕ್ಷೆ ಇದ್ದು, ತೆಲುಗಿನಲ್ಲಿ ಸಂಚಲನ ಮೂಡಿಸುತ್ತದೆ ಎನ್ನುವ ಭರವಸೆ ನೀಡಿರುವುದು ಗೊತ್ತೇ ಇದ್ದ..
ಅಖಿಲ್ ಅವರ ಏಜೆನ್ಟ್ ಸಿನಿಮ ಬಗ್ಗೆ ಹೇಳುವುದಾದರೆ, ಬಿಗ್ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, ಬರೊಬ್ಬರಿ 80 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. ಸಿನಿಮಾದ ಪ್ರೀರಿಲೀಸ್ ಇವೆಂಟ್ ಅನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ನಾಗಾರ್ಜುನ ಅವರು ಚೀಫ್ ಗೆಸ್ಟ್ ಆಗಿ ಬಂದಿದ್ದರು. ಈ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಸಹ ಚೆನ್ನಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾ ಮೇಲೆ ತಕ್ಕಮಟ್ಟಿಗೆ ನಿರೀಕ್ಷೆ ಇದೆ..
ಹೀಗೆ ಇಬ್ಬರು ಮಕ್ಕಳಿಗೂ ಒಳ್ಳೆಯದಾಗಲಿ ಎಂದು ನಾಗಾರ್ಜುನ ಅವರು ಪತ್ನಿಯ ಜೊತೆಗೆ ತಿರುಪತಿಗೆ ಹೋಗಿರುವುದು ಈಗ ಟ್ರೋಲ್ ಆಗುತ್ತಿದೆ. ಮಗನ ಸಿನಮಾ ಯಶಸ್ಸು ಪಡೆಯಲಿ ಎಂದು ಹೀಗೆ ಮಾಡುತ್ತಿದ್ದಾರೆ, ಆದರೆ ಹೊರಗಡೆ ಇವರು ನಾಶ ಮಾಡಿರುವ ನಟರ, ನಟಿಯರ ಬಾಳು ಗಳು ಲೆಕ್ಕಕ್ಕೆ ಇಲ್ಲವೇ, ಸಮಂತಾ ಗೆ ಕೊಟ್ಟ ಕಾಟ ಒಂದ ಎರಡು ನಟಿಯರಿಗೆ ಕೈ ಕೊಡುವ ಫ್ಯಾಮಿಲಿ.. ಎಂದು ನೆಟ್ಟಿಗರು ಇವರ ಫ್ಯಾಮಿಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Comments are closed.