Aryan Khan: ಮತ್ತೊಬ್ಬಳು ನಟಿಯನ್ನು ಪಟಾಯಿಸಿದ ಶಾರುಖ್ ಪುತ್ರ: ಅದೆಷ್ಟು ಜನರನ್ನು ಪ್ರೀತಿ ಮಾಡುತ್ತಾನೆ. ಈತ. ಯಪ್ಪಾ ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ?
Aryan Khan: ನಮ್ಮ ಭಾರತ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು ಹಾಗೆಯೇ ಅತ್ಯಂತ ಶ್ರೀಮಂತ ನಟ ಎಂದು ಹೆಸರು ಮಾಡಿರುವವರು ನಟ ಶಾರುಖ್ ಖಾನ್ (Shahrukh Khan). ದಶಕಗಳಿಂದ ಬಾಲಿವುಡ್ (Bollywood) ನಲ್ಲಿ ಸಕ್ರಿಯವಾಗಿರುವ ಇವರು ಹಲವು ಸಿನಿಮಾಗಳಲ್ಲಿ ನಟಿಸಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ ಮಗನ ವಿಚಾರದಲ್ಲಿ ಮಾತ್ರ ಶಾರುಖ್ ಖಾನ್ ಅವರಿಗೆ ತೊಂದರೆ ಆಗುತ್ತಿದೆ ಎಂದು ಹೇಳಬಹುದು.

ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ಸಮಯದ ಹಿಂದೆ ಡ್ರಗ್ಸ್ ಕೇಸ್ ವಿಚಾರಕ್ಕೆ ಜೈಲು ಸೇರಿ, ಮಾಧ್ಯಮಗಳಲ್ಲಿ ಸಂಚಲನವಾಗಿದ್ದರು ಆರ್ಯನ್ ಖಾನ್. ಜೈಲಿನಿಂದ ಹೊರಗಡೆ ಬಂದಮೇಲೆ ಕೂಡ ಆರ್ಯನ್ ಪಬ್, ಪಾರ್ಟಿ ಎಂದು ಸುತ್ತಾಡುತ್ತಿದ್ದಾರೆ. ಬಾಲಿವುಡ್ ನಟಿಯರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಬಾಲಿವುಡ್ ನ ಹಾಟ್ ನಟಿ ನೋರಾ ಫತೇಹಿ (Nora Fatehi) ಅವರೊಡನೆ ಕಾಣಿಸಿಕೊಂಡು, ಪಾರ್ಟಿ ಪಬ್ ಎಂದು ಸುತ್ತಾಡುತ್ತಿದ್ದ ಆರ್ಯನ್ ಖಾನ್, ನಂತರ ಬಿಗ್ ಬಾಸ್ ಶೋಗೆ ಬಂದಿದ್ದ ಇಬ್ಬರು ಹುಡುಗಿಯರ ಜೊತೆಗೆ ಕಾಣಿಸಿಕೊಂಡಿದ್ದರು. ನಂತರ ಒಬ್ಬ ಪಾಕಿಸ್ತಾನಿ ನಟಿ ಜೊತೆಯಲ್ಲಿ ಪಾರ್ಟಿ ಒಂದರಲ್ಲಿ ಪೋಸ್ ನೀಡಿದ್ದರು. ಆದರೆ ಈಗ ಅವರನ್ನೆಲ್ಲಾ ಬಿಟ್ಟು ಮತ್ತೊಬ್ಬ ಸುಂದರಿಯನ್ನ ಪಟಾಯಿಸಿಕೊಂಡಿದ್ದಾರೆ.
ಆ ನಟಿ ಮತ್ಯಾರು ಅಲ್ಲ ಬಾಲಿವುಡ್ ನ ಕ್ಯೂಟ್ ಬ್ಯೂಟಿ ಅನನ್ಯ ಪಾಂಡೆ (Ananya Pandey). ಇದೀಗ ಆರ್ಯನ್ ಖಾನ್ ನಟಿ ಅನನ್ಯ ಪಾಂಡೆ ಅವರ ಜೊತೆಗೆ ಪಬ್, ಪಾರ್ಟಿ ಎಂದು ಸುತ್ತಾಡುತ್ತಿದ್ದಾರೆ. ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಇವರಿಬ್ಬರು ಸೀಕ್ರೆಟ್ ಆಗಿ ಡೇಟ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇವರಿಬ್ಬರು ಹೆಚ್ಚು ದಿನ ಇದನ್ನು ಮುಂದುವರೆಸಿಕೊಂಡು ಹೋಗುತ್ತಾರ ಅಥವಾ ಅರ್ಧಕ್ಕೆ ನಿಲ್ಲಿಸುತ್ತಾರಾ ಎಂದು ಕಾದು ನೋಡಬೇಕಿದೆ.
Comments are closed.