Sreeleela: ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಕನ್ನಡತಿ ಶ್ರೀ ಲೀಲಾ:ಖ್ಯಾತ ನಟಿಯರಿಗೆ ಶುರುವಾಯ್ತು ನಡುಕ. ಏನಾಗಿದೆ ಗೊತ್ತೇ??
Sreeleela: ಕನ್ನಡದ ನಟಿಯರು ಈಗ ತೆಲುಗಿನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಇವರ ಹವಾ ನಡೆಯುತ್ತಿತ್ತು ಇದೀಗ ನಟಿ ಶ್ರೀಲೀಲಾ ಹವಾ ತೆಲುಗಿನಲ್ಲಿ ಜೋರಾಗಿದೆ. ಎರಡೇ ಸಿನಿಮಾ ಇಂದ ಶ್ರೀಲೀಲಾ ಅವರು ಸ್ಟಾರ್ ನಟಿಯಾಗಿದ್ದಾರೆ. ಪೆಲ್ಲಿ ಸಂದಡಿ ಇವರು ನಟಿಸಿದ ಮೊದಲ ಸಿನಿಮಾ, ನಂತರ ರವಿತೇಜ ಅವರೊಡನೆ ಧಮಾಕ ಸಿನಿಮಾದಲ್ಲಿ ನಟಿಸಿದ್ದರು..

ಧಮಾಕ ಸಿನಿಮಾ ಸೂಪರ್ ಹಿಟ್ ಆದ ನಂತರ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ತೆಲುಗಿನಲ್ಲಿ ಕೈತುಂಬಾ ಆಫರ್ ಗಳು ಬರುತ್ತಿದೆ. ಶ್ರೀಲೀಲಾ ಅವರು ಈಗ ಸೂಪರ್ ಸ್ಟಾರ್ ಮಹೇಶ್ ಬಾಬು, ನಟಸಿಂಹಮ್ ಬಾಲಯ್ಯ ಅವರು, ಪವರ್ ಸ್ಟಾರ್ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ, ವೈಷ್ಣವ್ ತೇಜ್, ರಾಮ್ ಪೊತಿನೇನಿ ಸೇರಿದಂತೆ ತೆಲುಗಿನ ಎಲ್ಲಾ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಇವರಿಗೆ ಸಿಕ್ಕಿದೆ.
ಹೀಗೆ ಎರಡೇ ಸಿನಿಮಾದಲ್ಲಿ ತಮ್ಮಹವಾ ಹೆಚ್ಚಿಸಿಕೊಂಡಿರುವ ಶ್ರೀಲೀಲಾ ತಮಗೆಂದು ಒಂದು ಸ್ಥಾನ ಸೃಷ್ಠಿಸಿಕೊಂಡಿದ್ದಾರೆ ಎಂದರೆ ತಪ್ಪಲ್ಲ. ಹೀಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಎರಡೇ ವರ್ಷಗಳಲ್ಲಿ ಶ್ರೀಲೀಲಾ ಅವರು ಇಷ್ಟು ಎತ್ತರಕ್ಕೆ ಏರಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಇದೀಗ ಈ ನಟಿ ತಮ್ಮ ಸಸ್ಕಸ್ ಇಂದ ಈಗಿರುವ ಸೀನಿಯರ್ ಸ್ಟಾರ್ ನಟಿಯರೇ ಆಶ್ಚರ್ಯಪಡುವ ಹಾಗೆ ಮಾಡಿದ್ದಾರೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?
ನಟಿ ಶ್ರೀಲೀಲಾ ಅವರು ತೆಲುಗಿನ ಮೊದಲ ಸಿನಿಮಾ ಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಲು ₹50 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಎರಡನೇ ಸಿನಿಮಾ ಧಮಾಕ ವೇಳೆಗೆ ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಸಿನಿಮಾಗೆ ಬರೋಬ್ಬರಿ ₹2.5ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೇಳಿ ನಿರ್ಮಾಪಕರು ಶಾಕ್ ಆಗಿದ್ದರು ಸಹ, ಶ್ರೀಲೀಲಾ ಅವರಿಗೆ ಇರುವ ಕ್ರೇಜ್ ನೋಡಿ, ಕೇಳಿದಷ್ಟು ಸಂಭಾವನೆ ಕೊಡೋದಕ್ಕೆ ರೆಡಿಯಾಗಿದ್ದಾರಂತೆ. ಇದರಿಂದ ಸೀನಿಯರ್ ನಟಿಯರಿಗೆ ನಡುಕ ಶುರುವಾಗಿದೆ ಎನ್ನುತ್ತಿದೆ ಟಾಲಿವುಡ್.
Comments are closed.