ಅಡುಗೆ ಎಣ್ಣೆಯನ್ನು ಬಳಸದೇ ಉತ್ತರ ಕರ್ನಾಟಕದ ಸ್ಪೆಷಲ್ ಚಾಟ್ ಮಾಡೋದು ಹೇಗೆ ಗೊತ್ತೇ?? ಡಯಟ್ ಆಲೋಚನೆ ಇಲ್ಲದೆ ತಿನ್ನಬಹುದು.

ನಮಸ್ಕಾರ ಸ್ನೇಹಿತರೇ ಇದು ನಾವು ನಿಮಗಾಗಿ ನಿಮ್ಮ ಆರೋಗ್ಯಕರ ತಿಂಡಿಗಾಗಿ ತಂದಿರುವ ಒಂದು ಅತ್ಯಂತ ರುಚಿಕರವಾದ ರೆಸಿಪಿ ಇದು. ಇದು ಉತ್ತರ ಕರ್ನಾಟಕದ ವಿಶೇಷ ಅಡುಗೆ ಕೂಡ ಹೌದು. ಇದಕ್ಕೆ ಯಾವ ಅಡುಗೆ ಎಣ್ಣೆಯೂ ಬೇಡ, ರುಚಿಕಾರಕಗಳೂ ಬೇಡ. ಇದ್ಯಾವುದೂ ಇಲ್ಲದೇ ಅತ್ಯಂತ ಸುಲಭವಾಗಿ ಮಾಡಬಹುದು ಒಮ್ಮೆ ಮಾಡಿ ನೋಡಿ.

ಚೆನ್ನಂಗಿ ಸ್ನ್ಯಾಕ್ಸ್ ಮಾಡಲು ಬೇಕಾಗುವ ಸಾಮಗ್ರಿಗಳು: ತಲಾ ಒಂದರಿಂದ ಎರಡು ಹೆಚ್ಚಿಕೊಂಡ ಕ್ಯಾರೇಟ್, ಸೌತೆಕಾಯಿ, ಈರುಳ್ಳಿ, ಟೊಮ್ಯಾಟೊ, ಉಪ್ಪು ರುಚಿಗೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಜೀರಿಗೆ ಮೆಣಸಿನ ಕಾಳಿನ ಪುಡಿ, (ಜೀರಿಗೆ ಮತ್ತು ಕಾಳುಮೆಣಸನ್ನು ಡ್ರೈ ರೋಸ್ಟ್ ಮಾಡಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು) ಚೆನ್ನಂಗಿ ಕಾಳು ಒಂದು ಕಪ್. ಹಸಿಮೆಣಸು ೩-೪, ನಿಂಬೆರಸ ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು ಇದಕ್ಕೆ ಚೆನ್ನಂಗಿ ಕಾಳುಗಳನ್ನು ಹಾಕಿ ಬೇಯಿಸಿ. ಅಷ್ಟರಲ್ಲಿ ಗ್ಯಾಸ್ ಮೇಲೆ ಹಸಿಮೆಣಸನ್ನು ಸುಟ್ಟುಕೊಳ್ಳಿ. ನಂತರ ಬೆಂದ ಚೆನ್ನಂಗಿ ಕಾಳಿನಿಂದ ನೀರನ್ನು ಬೇರ್ಪಡಿಸಿ/ ಸೋಸಿ. ಈಗ ಒಂದು ದೊಡ್ಡ ಬೌಲ್ ಗೆ ಹೆಚ್ಚಿಟ್ಟುಕೊಂಡ ಕ್ಯಾರೇಟ್, ಸೌತೆಕಾಯಿ, ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು ಜೀರಿಗೆ ಮೆಣಸಿನ ಕಾಳಿನ ಪುಡಿ, ಸುಟ್ಟಿಟ್ಟುಕೊಂಡ ಮೆಣಸನ್ನು ಕತ್ತರಿಸಿ ಹಾಕಿ. ಹಾಗೆಯೇ ರುಚಿಗೆ ತಕ್ಕಷ್ಟು ಉಪ್ಪು ಕೊನೆಯಲ್ಲಿ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೇಲಿಂದ ಸ್ವಲ್ಪ ಕೊತ್ತಂಬರಿಸೊಪ್ಪು ಉದುರಿಸಿದರೆ ರುಚಿಕರವಾದ ಚೆನ್ನಂಗಿ ಕಾಳಿನ ಸ್ನ್ಯಾಕ್ಸ್ ಸವಿಯಲು ಸಿದ್ಧ! ಈ ರೆಸಿಪಿ ಮಾಡೋದು ಹೇಗೆ ಎಂದು ಈ ಕೇಳಗಿನ ವಿಡಿಯೋ ಮೂಲಕವೂ ತಿಳಿದುಕೊಳ್ಳಬಹುದು.