BSY: ಬಿಜೆಪಿ ಸೋತಮೇಲೆ ಸೈಲೆಂಟ್ ಆಗಿದ್ದ ರಾಜಾಹುಲಿ ಕೆರಳಿದ್ದು ಯಾಕೆ ಗೊತ್ತೇ? ಜನರಿಗೆ ಮೋಸ ಆದರೆ ಸುಮ್ಮನಿರಲ್ಲ, ಯೆಡಿಯೂರಪ್ಪ ಹೇಳಿದ್ದೇನು ಗೊತ್ತೇ?
BSY: ಕಾಂಗ್ರೆಸ್ ಸರ್ಕಾರವು ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ನಡೆಸುವಾಗ ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಕೊಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಈಗ ಕಾಂಗ್ರೆಸ್ ಸರ್ಕಾರವು ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿಗೆ ಬರುತ್ತದೆ ಎನ್ನಲಾಗಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮನೆಯ ಪ್ರತಿ ಸದಸ್ಯನಿಗೂ 10 ಕೆಜಿ ಕೊಡುವುದಾಗಿ ತಿಳಿಸಲಾಗಿದೆ.

ಜುಲೈ 1ರಿಂದ ಈ ಯೋಜನೆ ಜಾರಿಗೆ ಬರಲಿದೆ, ಈ ಬಗ್ಗೆ ಬಿಜೆಪಿಯ ಹುಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ಕೊಟ್ಟಿದ್ದು, 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದಾರೆ, ಅದರಲ್ಲಿ ಒಂದೇ ಒಂದು ಗ್ರಾಮ್ ಕಡಿಮೆ ಆದರೂ ಸಹ ಜನರು ಸುಮ್ಮನೆ ಇರುವುದಿಲ್ಲ ಎಂದು ಹೇಳಿ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಅನ್ನಭಾಗ್ಯ ಯೋಜನೆಯ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಎದುರು ಯಡಿಯೂರಪ್ಪ ಅವರು ಮಾತನಾಡಿದ್ದಾರೆ. “10ಕೆಜಿ ಅನ್ನಭಾಗ್ಯ ವಿಚಾರದಲ್ಲಿ ಸುಖಾಸುಮ್ಮನೆ ಗೊಂದಲ ಶುರುವಾಗಿದೆ..” ಎಂದಿದ್ದಾರೆ ಬಿ.ಎಸ್.ವೈ. ಇದನ್ನು ಓದಿ..Protest: ಸಿದ್ದು ಸರ್ಕಾರಕ್ಕೆ ಬಿಗ್ ಶಾಕ್- ಮೊದಲ ಬಾರಿಗೆ ಸರ್ಕಾದ ವಿರುದ್ಧ ತೊಡೆತಟ್ಟಿದವರು ಯಾರ್ಯಾರು ಗೊತ್ತೇ?? ಅದು ಯಾಕೆ ಗೊತ್ತೇ?
“ನಮ್ಮ ರಾಜ್ಯದ ಎಲ್ಲಾ ಬಡಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ 5ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆದರೆ ರಾಜ್ಯಸರ್ಕಾರ 5ಕೆಜಿ ಅಕ್ಕಿಯನ್ನು ಹೆಚ್ಚಾಗಿ ಕೊಡಲು ಮಾಡಿದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಆದರೂ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಅಕ್ಕಿಯನ್ನು ಹೊಂದಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದೇ ಆಗಿದೆ..” ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
“ಕಾಂಗ್ರೆಸ್ ಸರ್ಕಾರವು ಎಲೆಕ್ಷನ್ ಗಿಂತ ಮೊದಲೇ ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ಫ್ರೀಯಾಗಿ 10ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆ ಭರವಸೆಯ ಹಾಗೆ 10ಕೆಜಿ ಅಕ್ಕಿಯನ್ನು ಪೂರ್ತಿಯಾಗಿ ಕೊಡಬೇಕು, 10ಕೆಜಿಯಲ್ಲಿ ಒಂದೇ ಒಂದು ಗ್ರಾಮ್ ಕಡಿಮೆ ಆದರೂ ಸಹ ರಾಜ್ಯದ ಜನರು ಅದನ್ನು ಒಪ್ಪುವುದಿಲ್ಲ..”ಎಂದು ಕಾಂಗ್ರೆಸ್ ಪಕ್ಷಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ BSY. ಇದನ್ನು ಓದಿ..Best Courses: ಕಡಿಮೆ ಓದಿದ್ದರೂ ಬೇಗ ಕೆಲಸ ಪಡೆಯಬೇಕು ಎಂದರೆ ಈ ಕೋರ್ಸ್ ಗಳನ್ನೂ ಮಾಡಿ.- ಕೈತುಂಬಾ ಸಂಬಳದ ಜೊತೆ ಲೈಫ್ ಸೆಟ್ಲ್ ಮಾಡಿಕೊಳ್ಳಿ.
Comments are closed.