KJ George: ಬಿಟ್ಟಿ ಕರೆಂಟ್ ಘೋಷಣೆಯ ಬೆನ್ನಲ್ಲೇ ಬಿಗ್ ಶಾಕ್ ಕೊಟ್ಟ ಸಚಿವ ಜಾರ್ಜ್- ಉಚಿತ ಎಂದು ಖುಷಿ ಪಡುವವರ ನಡುವೆ, ಜನರಿಗೆ ಏನಾಗಿದೆ ಗೊತ್ತೇ?

KJ George: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಜನತೆಗೆ ವಿದ್ಯುತ್ ಉಚಿತವಾಗಿ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದಕ್ಕಾಗಿ ಹಲವು ಕಂಡೀಷನ್ ಗಳಿಗೆ, ಹಾಗೆಯೇ ಈಗ ವಿದ್ಯುತ್ ರೇಟ್ ಅನ್ನು ಕೂಡ ಜಾಸ್ತಿ ಮಾಡಲಾಗಿದೆ. ಇದರ ಬಗ್ಗೆ ಜನರು ಅಸಮಾಧಾನಗೊಂಡಿದ್ದು ವಿದ್ಯುತ್ ರೇಟ್ ಅನ್ನು ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇದರ ಬಗ್ಗೆ ಈಗ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

kj george comments about electricity cost reduce KJ George:

ವಿದ್ಯುತ್ ದರ ಏರಿಕೆ ಆಗಿರುವ ಬಗ್ಗೆ ಜಾರ್ಜ್ ಅವರು ಪ್ರತಿಕ್ರಿಯೆ ನೀಡಿದ್ದು, “KERC ಕೇಂದ್ರ ಕಾಯ್ದೆಯ ಅಡಿಯಲ್ಲಿ ವಿದ್ಯುತ್ ಬೆಲೆ ಏರಿಕೆ ಆಗಿದೆ. ಒಂದು ಸಾರಿ ವಿದ್ಯುತ್ ಬೆಲೆ ಏರಿಕೆ ಆದರೆ ನಾವು ಅದನ್ನು ಪಾಲಿಸಬೇಕು, ವಿದ್ಯುತ್ ಬೆಲೆಯನ್ನು ಕಡಿಮೆ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ ಬೆಲೆ ಏರಿಕೆ ಮಾಡಲಾಗಿದೆ, ಈಗ ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ..” ಎಂದು ಹೇಳಿದ್ದಾರೆ. ಇದನ್ನು ಓದಿ..BSY: ಬಿಜೆಪಿ ಸೋತಮೇಲೆ ಸೈಲೆಂಟ್ ಆಗಿದ್ದ ರಾಜಾಹುಲಿ ಕೆರಳಿದ್ದು ಯಾಕೆ ಗೊತ್ತೇ? ಜನರಿಗೆ ಮೋಸ ಆದರೆ ಸುಮ್ಮನಿರಲ್ಲ, ಯೆಡಿಯೂರಪ್ಪ ಹೇಳಿದ್ದೇನು ಗೊತ್ತೇ?

“ಎಲೆಕ್ಷನ್ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆ ಆಗಿಲ್ಲ, 2022ರ ನವೆಂಬರ್ ನಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಏರಿಕೆ ಮಾಡಲಾಗಿದೆ. ಏಪ್ರಿಲ್ ಅಗಬೇಕಿದ್ದ ದರ ಏರಿಕೆ ಎಲೆಕ್ಷನ್ ಇದ್ದ ಕಾರಣಕ್ಕೆ ಮೇ 12ರಿಂದ ಏರಿಕೆ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಮೇ 20ರಂದು, ಬೆಲೆ ಏರಿಕೆ ಆದಾಗ ಬಿಜೆಪಿ ಅಧಿಕಾರದಲ್ಲಿತ್ತು. ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್ ಗೆ 1.50 ರೂಪಾಯಿ ಜಾಸ್ತಿ ಮಾಡಬೇಕುಎ ಎಂದು ಸೆಸ್ಕಾಮ್ ಗೆ ಮನವಿ ಸಲ್ಲಿಸಲಾಗಿತ್ತು..

ಆದರೆ ಜನರು ಹಾಗೂ ಸಂಘ ಸಂಸ್ಥೆಗಳಿಂದ ಅಭಿಪ್ರಾಯ ಪಡೆದ ಬಳಿಕ ಪ್ರತಿ ಯೂನಿಟ್ ಗೆ 70 ಪೈಸೆ ಏರಿಸಲು ಒಪ್ಪಿಗೆ ನೀಡಲಾಯಿತು. ಇದರಿಂದ ಜನರಿಗೆ ತೊಂದರೆ ಆಗುವುದಿಲ್ಲ, ಅವರು ಹಳೆಯ ಬಾಕಿ ಇರುವ ವಿದ್ಯುತ್ ಬಿಲ್ ಕ್ಲಿಯರ್ ಮಾಡಿ, 200ಯೂನಿಟ್ ಉಚಿತ ವಿದ್ಯುತ್ ಪಡೆಯಬಹುದು..” ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

Comments are closed.