Mahesh Babu: ಮಹೇಶ್ ಬಾಬು ಖರೀದಿ ಮಾಡಿರುವ ಚಿನ್ನದ ಕಲರ್ ರೇಂಜ್ ರೋವರ್ ವಿಶೇಷತೆ ಏನು ಗೊತ್ತೇ?

Mahesh Babu: ಮಹೇಶ್ ಬಾಬು ಖರೀದಿ ಮಾಡಿರುವ ಚಿನ್ನದ ಕಲರ್ ರೇಂಜ್ ರೋವರ್ ವಿಶೇಷತೆ ಏನು ಗೊತ್ತೇ?

Mahesh Babu: ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು (Mahesh Babu) ಅವರು ಟಾಲಿವುಡ್ ನ ಸೂಪರ್ ಸ್ಟಾರ್ ಕೃಷ್ಣ (Krishna) ಅವರ ಮಗ. 2 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಮಹೇಶ್ ಬಾಬು (Mahesh babu) ಅವರು ಚಿತ್ರರಂಗದಲ್ಲಿ ಹೀರೋ ಆಗಿ ನಟಿಸುತ್ತಿಸ್ದಾರೆ. ಮಹೇಶ್ ಬಾಬು ಅವರು ತೆಲುಗಿನ ಸ್ಟೈಲಿಶ್ ಹೀರೋ ಎಂದೇ ಹೆಸರು ಗಳಿಸಿದ್ದಾರೆ. ಇವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ವಿದೇಶದಲ್ಲಿ ಸಹ ಮಹೇಶ್ ಬಾಬು ಅವರಿಗೆ ಅಭಿಮಾನಿ ಬಳಗವಿದೆ.

mahesh-babu-golden-range-rover-details
mahesh-babu-golden-range-rover-details

ಮಹೇಶ್ ಬಾಬು (Mahesh Babu) ಅವರು ತಮ್ಮ ಸ್ಟೈಲಿಶ್ ಐಷಾರಾಮಿ ಲೈಫ್ ಸ್ಟೈಲ್ ಇಂದ ಸದಾ ಸುದ್ದಿಯಾಗುತ್ತಾರೆ. ಮಹೇಶ್ ಬಾಬು ಅವರ ಲುಕ್ಸ್ ಹಾಗೂ ಸ್ಟೈಲಿಶ್ ಹೇರ್ ಸ್ಟೈಲ್ ಹಾಗೂ ಅವರು ಧರಿಸುವ ಐಷಾರಾಮಿ ಡ್ರೆಸ್ ಗಳು, ಶೂಗಳನ್ನು ಧರಿಸುವ ಮೂಲಕ ಹೆಚ್ಚು ಸುದ್ದಿಯಾಗುತ್ತಾರೆ. ಅಭಿಮಾನಿಗಳು ಮಹೇಶ್ ಬಾಬು (Mahesh Babu) ಅವರ ಸ್ಟೈಲ್ ನೋಡಿ ಅದನ್ನು ಅನುಸರಿಸುತ್ತಾರೆ. ಈಗಲೂ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ.. ಇದನ್ನು ಓದಿ..Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?

ಇನ್ನು ಮಹೇಶ್ ಬಾಬು (Mahesh Babu) ಅವರಿಗೆ ಐಷಾರಾಮಿ ಕಾರ್ ಗಳನ್ನು ಖರೀದಿ ಮಾಡುವ ಕ್ರೇಜ್ ಇದೆ, ಇತ್ತೀಚೆಗೆ ಮಹೇಶ್ ಬಾಬು ಅವರು ಹೊಸದೊಂದು ದುಬಾರಿ ಕಾರ್ ಖರೀದಿ ಮಾಡಿದ್ದಾರೆ. ಅದು Range Rover SV ಕಾರ್ ಆಗಿದೆ ಇದು ಗೋಲ್ಡ್ ಬಣ್ಣದ ಕಾರ್ ಆಗಿದ್ದು, ಮಹೇಶ್ ಬಾಬು ಅವರ ಕಾರ್ ಕಲೆಕ್ಷನ್ ಗೆ ಈಗ ಮತ್ತೊಂದು ಹೊಸ ಕಾರ್ ಸೇರ್ಪಡೆಯಾಗಿದೆ. ಕಾರ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೇಂಜ್ ರೋವರ್ ಕಾರ್ ಆಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದ್ದು, ಈ ಕಾರ್ ನ ಬೆಲೆ ₹5.4ಕೋಟಿ ರೂಪಾಯಿ ಆಗಿದೆ. ಇದು ಐಷಾರಾಮಿ ಕಾರ್, ಟಾಲಿವುಡ್ ನಲ್ಲಿ ಜ್ಯೂನಿಯರ್ ಎನ್ಟಿಆರ್ (Jr NTR), ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಹತ್ತಿರ ಈ ಕಾರ್ ಇದ್ದು, ಈಗ ಮಹೇಶ್ ಬಾಬು (Mahesh Babu) ಅವರು ಸಹ ಈ ಕಾರ್ ಖರೀದಿ ಮಾಡಿದ್ದಾರೆ. ಮಹೇಶ್ ಬಾಬು ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

ಇನ್ನು ಮಹೇಶ್ ಬಾಬು ಅವರ ಕೆರಿಯರ್ ಬಗ್ಗೆ ಹೇಳುವುದಾದರೆ ಕಳೆದ ವರ್ಷ ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ ಅಭಿಮಾನಿಗಳ ಎದುರು ಬಂದಿದ್ದರು. ಈ ಸಿನಿಮಾ ಸೂಪರ್ ಆಗಿತ್ತು. ಈಗ ತ್ರಿವಿಕ್ರಂ ಶ್ರೀನಿವಾಸ್ ರಾವ್ (Trivikram Srinivas Rao) ಅವರು ನಿರ್ದೇಶನ ಮಾಡುತ್ತಿರುವ ಗುಂಟೂರು ಖಾರಮ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮುಂದಿನ ವರ್ಷ ತೆರೆಕಾಣುವ ಸಾಧ್ಯತೆ ಇದೆ. ಅದಾದ ಬಳಿಕ ರಾಜಮೌಳಿ (Rajamouli) ಅವರ ಸಿನಿಮಾದಲ್ಲಿ ನಟಿಸುತ್ತಾರೆ. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

Comments are closed.