Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

Motorola Razr: ನಮ್ಮ ದೇಶದ ಉತ್ತಮ ಮೊಬೈಲ್ ಫೋನ್ ಕಂಪನಿಗಳಲ್ಲಿ ಒಂದು ಮೋಟೋರೋಲ ಕಂಪನಿ, ಇದೀಗ ಈ ಸಂಸ್ಥೆ ಹೊಸದಾದ ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಇದು Motorola Razr 40 ಹಾಗೂ Motorola Razr 40 Ultra ಮಾಡೆಲ್ ಫೋನ್ ಗಳಾಗಿದೆ. ಈ ಫೋನ್ ಅನ್ನು ಭಾರತ ದೇಶದಲ್ಲಿ ಜುಲೈ 3 ರಂದು ಲಾಂಚ್ ಮಾಡಲಾಗುತ್ತಿದೆ. ಈ ಫೋನ್ ನ ವಿಶೇಷತೆಗಳನ್ನು ತಿಳಿಸಿಕೊಡುತ್ತೇವೆ ನೋಡಿ..

motorola razr 40 and motorola razr 40 ultra details Motorola Razr:

Motorola Razr ಫೋನ್ ಗಳನ್ನು ಅಮೆಜಾನ್ ನಲ್ಲಿ ಖರೀದಿ ಮಾಡಬಹುದು. ಈಗಾಗಲೇ ಈ ಫೋನ್ ನ ಪ್ರಮೋಷನ್ ಗಳು ಹಾಗೂ ಟೀಸರ್ ಗಳು ಜೋರಾಗಿಯೇ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೋಟೋರೋಲ ಫೋನ್ ನೋಡಿ ಆಕರ್ಷಿತರಾಗಿದ್ದಾರೆ, ಈಗಾಗಲೇ ಚೈನಾ ಹಾಗೂ ಇನ್ನಿತರ ದೇಶಗಳಲ್ಲಿ Motorola Razr ಫೋನ್ ಮಾರಾಟ ಆಗುತ್ತಿದೆ.. ಮೋಟೋರೋಲ ಸಂಸ್ಥೆಯು ಈ ಬಗ್ಗೆ ಟ್ವೀಟ್ ಮಾಡಿದೆ. ಇದನ್ನು ಓದಿ..Mahesh Babu: ಮಹೇಶ್ ಬಾಬು ಖರೀದಿ ಮಾಡಿರುವ ಚಿನ್ನದ ಕಲರ್ ರೇಂಜ್ ರೋವರ್ ವಿಶೇಷತೆ ಏನು ಗೊತ್ತೇ?

ಭಾರತದಲ್ಲಿ ಲಾಂಚ್ ಆಗುವ ಬಗ್ಗೆ ಅಧಿಕೃತವಾಗಿ ತಿಳಿಸಿದೆ. Motorola Razr 40 Ultra ಫೋನ್ Snapdragon 8+ Gen 1 ಇದ್ದು 3.6 ಇಂಚ್ OLED ಕವರ್ display ಹಾಗೂ 144Hz ರಿಫ್ರೆಶ್ ರೇಟ್ ಹೊಂದಿದೆ, ಫೋನ್ ಅನ್ನು ಅನ್ ಫೋಲ್ಡಡ್ ಮಾಡಿದಾಗ 6.9 ಇಂಚ್ FHD + AMOLED ಪ್ಯಾನೆಲ್ ಹಾಗೂ 165 Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಡ್ಯುಯೆಲ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ, 12MP ಮೇನ್ ಕ್ಯಾಮೆರಾ, 12 MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ.

32MP ಸೆಲ್ಫಿ ಕ್ಯಾಮೆರಾ ಹೊಂದಿದೆ. 3800 mAh ಬ್ಯಾಟರಿ, 30W ಫಾಸ್ಟ್ ಚಾರ್ಜಿಂಗ್ ಹೊಂದಿದೆ. Motorola Razr 40 ಫೋನ್ ಸ್ನ್ಯಾಪ್ ಡ್ರಾಗನ್ 7Gen 1SoC, 8GB LPDDR4X RAM ಹಾಗೂ 256GB UFS ಸ್ಟೋರೇಜ್ 2.2 ಸ್ಟೋರೇಜ್ ಸಿಗುತ್ತದೆ. 6.9 ಇಂಚ್ FHD + AMOLED ಹಾಗೂ 1.9 ಇಂಚ್ ಕವರ್ ಡಿಸ್ಪ್ಲೇ ಇರುತ್ತದೆ. 64MP ಪ್ರೈಮರಿ ಕ್ಯಾಮೆರಾ ಇದ್ದು, 13MP ಅಲ್ಟ್ರಾ ವೈಡ್ ಸೆನ್ಸಾರ್ ಹೊಂದಿದೆ. ಹಾಗೆಯೇ 32MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?

ಈ ಫೋನ್ ನ ಬೆಲೆ ಎಷ್ಟು ಎಂದು ನೋಡುವುದಾದರೆ, Moto Razr 40 ಅಲ್ಟ್ರಾ ಫೋನ್ ಚೈನಾದಲ್ಲಿ ಸುಮಾರು ₹65,000 ರೂಪಾಯಿಗೆ ಮಾರಾಟ ಆಗುತ್ತಿದೆ. Motorola Razr 40 ಬೇಸ್ ಫೋನ್ ಸುಮಾರು ₹45,000 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಫೋನ್ ಗಳು ಈಗ ದುಬಾರಿ ಬೆಲೆ ಇದ್ದರು ಉತ್ತಮವಾದ ಫೋನ್ ಗಳಾಗಿವೆ. ಇದನ್ನು ಓದಿ..Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?

Comments are closed.