Sudeep: ಖ್ಯಾತ ನಟ ಸುದೀಪ್ ರವರಿಗೆ ಮತ್ತೊಂದು ಶಾಕ್- ಹೊಸ ಚಿತ್ರಕ್ಕೆ ಹೊಸ ಸಂಕಟ. ಏನಾಗಿದೆ ಗೊತ್ತೇ?

Sudeep: ಖ್ಯಾತ ನಟ ಸುದೀಪ್ ರವರಿಗೆ ಮತ್ತೊಂದು ಶಾಕ್- ಹೊಸ ಚಿತ್ರಕ್ಕೆ ಹೊಸ ಸಂಕಟ. ಏನಾಗಿದೆ ಗೊತ್ತೇ?

Sudeep: ನಟ ಕಿಚ್ಚ ಸುದೀಪ್ (Sudeep) ಅವರು ಕಳೆದ ವರ್ಷ ವಿಕ್ರಾಂತ್ ರೋಣ (Vikrant Rona) ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಒಳ್ಳೆಯ ಯಶಸ್ಸು ಗಳಿಸಿತು. ಆದರೆ ವಿಕ್ರಾಂತ್ ರೋಣ ನಂತರ ಸುದೀಪ್ (Sudeep) ಅವರು ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಎಲ್ಲಾ ಜನರಲ್ಲಿಯೂ ಇತ್ತು, ಅದರ ಈಗಷ್ಟೇ ಸುಳಿವು ಸಿಕ್ಕಿದೆ..

ಸುದೀಪ್ (Sudeep) ಅವರ ಮುಂದಿನ ಸಿನಿಮಾಗೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಆದರೆ ಫಸ್ಟ್ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನಲ್ಲಿ ಸುದೀಪ್ ಅವರು ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಮೇಲೆ ಭಾರಿ ಹೈಪ್ ಈಗಾಗಲೇ ಶುರುವಾಗಿದೆ. ಸುದೀಪ್ ಅವರ ಈ ಸಿನಿಮಾವನ್ನು ತಮಿಳಿನ ಕಲೈಪುಲಿ (Kalaipuli) ಅವರು ನಿರ್ಮಾಣ ಮಾಡುತ್ತಾರೆ ಎಂದು ಹೇಳಲಾಗಿದೆ. ಅಗಸ್ಟ್ 2ನೇ ವಾರದಿಂದ ಸಿನಿಮಾ ಚಿತ್ರೀಕರಣ ಶುರುವಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

ಈ ಸಿನಿಮಾದಲ್ಲಿ ಯಾವೆಲ್ಲಾ ಕಲಾವಿದರು ನಟಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಿರುವಾಗ ಸಿನಿಮಾ ಶುರು ಆಗುವುದಕ್ಕಿಂತ ಮೊದಲೇ ಸುದೀಪ್ ಅವರ ಸಿನಿಮಾಗೆ ಒಂದು ಹೊಸ ಆತಂಕ ಶುರುವಾಗಿದೆ. ನಿಜಕ್ಕೂ ಏನಾಗಿದೆ ಎಂದರೆ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ (FEFSI) ಇದೀಗ ತಮಿಳು ಚಿತ್ರರಂಗಕ್ಕೆ ಹೊಸ ನಿಯಮಗಳನ್ನು ತಂದಿದ್ದು, ಇದರಿಂದ ಕಿಚ್ಚ ಸುದೀಪ್ ಅವರ ಸಿನಿಮಾಗೆ ಮತ್ತು ಬೇರೆ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳಿಗು ಸಂಕಷ್ಟ ಇರಲಿದೆ. ಈ ನಿಯಮವನ್ನು FEFSI ಅಧ್ಯಕ್ಷ ಆರ್ ಸೆಲ್ವಮಣಿ ಅವರು ಜಾರಿಗೆ ತಂದಿದ್ದಾರೆ.

ಈ ಹೊಸ ನಿಯಮದ ಅನುಸಾರ, ತಮಿಳು ಸಿನಿಮಾಗಳಲ್ಲಿ ಇನ್ನುಮುಂದೆ ತಮಿಳು ಕಲಾವಿದರು ಮಾತ್ರ ನಟಿಸಬೇಕು. ಬೇರೆ ಭಾಷೆಯ ಕಲಾವಿದರನ್ನು ಹಾಕಿಕೊಳ್ಳುವ ಹಾಗಿಲ್ಲ, ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಬೇರೆ ಭಾಷೆಯ ಕಲಾವಿದರು ಹಾಕಿಕೊಳ್ಳಬಹುದು. ಹಾಗೆಯೇ ತಮಿಳು ಚಿತ್ರಗಳಲ್ಲಿ (Tamil Movies) ತಮಿಳು ನಾಡಿನವರಿಗೆ ಮಾತ್ರ ಕೆಲಸ ಕೊಡಬೇಕು. ತಮಿಳು ಸಿನಿಮಾಗಳ ಚಿತ್ರೀಕರಣ ತಮಿಳುನಾಡಿನಲ್ಲಿ ಮಾತ್ರ ನಡೆಯಬೇಕು, ಹೊರದೇಶದಲ್ಲಿ ಚಿತ್ರೀಕರಣ ನಡೆಯಬೇಕು ಎಂದರೆ, ಬೇರೆ ಭಾಷೆಯ ಕಲಾವಿದರು ತಮಿಳಿಗೆ ಬರಬೇಕು ಎಂದರೆ FEFSI ಇಂದ ಅನುಮತಿ ಪಡೆಯಬೇಕು ಎಂದು ನಿಯಮ ಜಾರಿ ಮಾಡಿದೆ.. ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

ಈ ನಿಯಮಕ್ಕೆ ತಮಿಳಿನ ನಡಿಗರ್ ಸಂಗಮ್ (Nadigar Sangam) ವಿರೋಧ ವ್ಯಕ್ತಪಡಿಸಿದೆ.. ಹಾಗೆಯೇ ತಮಿಳು ನಿರ್ದೇಶಕರು, ನಿರ್ಮಾಪಕರು ಸಹ ವಿರೋಧಿಸಿದ್ದಾರೆ. ಏಕೆಂದರೆ ಕಲಾವಿದರಿಗೆ ಭಾಷೆಯ ಮಿತಿಯಿಲ್ಲ ಎನ್ನುತ್ತಾರೆ. ಅಂಥದ್ರಲ್ಲಿ ಕ್ ನಿಯಮ ಚೆನ್ನಾಗಿಲ್ಲ ಎನ್ನಲಾಗಿದೆ. ಆದರೆ FEFSI ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ನಿಯಮದಲ್ಲಿ ಬೇರೆ ಉದ್ದೇಶ ಇಲ್ಲ. ತಮಿಳು ಕಲಾವಿದರನ್ನು, ತಮಿಳು ಚಿತ್ರರಂಗದ ಕಾರ್ಮಿಕರಿಗೆ ಅವಕಾಶ ಸಿಗಲಿ ಎನ್ನುವುದು ಉದ್ದೇಶ ಎಂದಿದ್ದಾರೆ. ಈ ನಿಯಮದಿಂದ ರಜನಿಕಾಂತ್ (Rajanikanth) ಅವರ ಜೈಲರ್ ಸಿನಿಮಾ, ಸುದೀಪ್ (Sudeep) ಹೊಸ ಸಿನಿಮಾಗಳಿಗೆ ಕಷ್ಟವಾಗಲಿದೆ. ಜೈಲರ್ ಸಿನಿಮಾದಲ್ಲಿ ಕನ್ನಡದ ಶಿವಣ್ಣ ಅವರು ಮಲಯಾಳಂ ನ ಮೋಹನ್ ಲಾಲ್ (Mohan Lal) ಅವರು ನಟಿಸಿದ್ದಾರೆ.. ಇದನ್ನು ಓದಿ..News: ಸದ್ದಿಲ್ಲದೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ- ಸಾಮಾನ್ಯರೇ ನಿಮ್ಮ ಜೀವನದ ಗತಿ ಏನು.

Comments are closed.