Shiva Rajkumar: ರಮ್ಯಾ ರವರಿಗೆ ಬಿಗ್ ಶಾಕ್ ಕೊಟ್ಟ ಹಾಸ್ಟೆಲ್ ಹುಡುಗರು- ಇದರ ಕುರಿತು ಖಡಕ್ ಆಗಿ ಶಿವಣ್ಣ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ.

Shiva Rajkumar: ರಮ್ಯಾ ರವರಿಗೆ ಬಿಗ್ ಶಾಕ್ ಕೊಟ್ಟ ಹಾಸ್ಟೆಲ್ ಹುಡುಗರು- ಇದರ ಕುರಿತು ಖಡಕ್ ಆಗಿ ಶಿವಣ್ಣ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ.

Shiva Rajkumar: ಈಗ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಆಗಿರುವುದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ. ಹೊಸ ಪ್ರತಿಭೆಗಳ ಹೊಸ ಪ್ರಯತ್ನವಿದು. ನಿತಿನ್ ರಾಮಕೃಷ್ಣ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜುಲೈ 21ರಂದು ಸಿನಿಮಾ ಬಿಡುಗಡೆ ಆಗಿದ್ದು, ಸೂಪರ್ ಹಿಟ್ ಟಾಕ್ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದ ಸಿನಿಪ್ರಿಯರು ಬಾಹ್ಯಾಒಳ ಚೆನ್ನಾಗಿದೆ ಎಂದು ರಿವ್ಯೂ ನೀಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಸಿನಿಮಾಗೆ ಸಪೋರ್ಟ್ ಮಾಡುತ್ತಿದ್ದಾರೆ.

ನಟ ರಕ್ಷಿತ್ ಶೆಟ್ಟಿ, ನಟ ರಿಷಬ್ ಶೆಟ್ಟಿ, ನಟಿ ರಮ್ಯಾ ಎಲ್ಲರೂ ಸಹ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಅವರು ಸಹ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಆದ ದಿನವೇ ಗೀತಾ ಶಿವ ರಾಜ್ ಕುಮಾರ್ ಮತ್ತು ನಿವೇದಿತಾ ಶಿವ ರಾಜ್ ಕುಮಾರ್ ಇಬ್ಬರು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಶಿವಣ್ಣ (Shiva Rajkumar) ಅವರ ಮನೆಯಲ್ಲಿ ಈ ಸಿನಿಮಾದ ಸಕ್ಸಸ್ ಮೀಟ್ ನಡೆಸಲಾಗಿದೆ.. ಇದನ್ನು ಓದಿ..Samantha: ನಾಗ ಚೈತನ್ಯ ಎಷ್ಟೋ ಬೆಟರ್ – ಸಮಂತಾ ಜೀವನವನ್ನು ಸರ್ವ ನಾಶ ಮಾಡಲು ಇವನೊಬ್ಬ ಸಾಕು.

ಶಿವಣ್ಣ (Shiva Rajkumar) ಅವರು ಸೋಮವಾರ ಸಿನಿಮಾ ನೋಡಲಿದ್ದು, ಹೊಸಬರಿಗೆ ಸಾಥ್ ನೀಡಿದ್ದಾರೆ. “ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಒಳ್ಳೆಯ ಸಿನಿಮಾಗಳನ್ನ ಅಭಿಮಾಮಿಗಳು ಕೈಬಿಡೋದಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ..” ಎಂದಿದ್ದಾರೆ ಶಿವಣ್ಣ (Shiva Rajkumar). ಇನ್ನು ಇದೇ ಸಮಯದಲ್ಲಿ ನಟಿ ರಮ್ಯಾ ಅವರ ವಿಚಾರದಲ್ಲಿ ಆದ ವಿವಾದದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ಇಲ್ಲಿ ಯಾರ ಬಗ್ಗೆ ಕೂಡ ಕಮೆಂಟ್ ಮಾಡೋದು ಬೇಡ.. ಸಿನಿಮಾ ಗೆಲ್ಲೋದು ಮುಖ್ಯ. ಬಿಡುಗಡೆ ಅಗೋದಕ್ಕಿಂತ ಮೊದಲೇ ಒಳ್ಳೆಯ ರಿಪೋರ್ಟ್ ಬಂದಿತ್ತು.

ಮನಸ್ಸಲ್ಲಿ ಒಳ್ಳೆಯದನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ರೆ, ಯಾವುದೇ ತೊಂದರೆ ಆಗಲ್ಲ ಅಂತ ಅನ್ನೋದಕ್ಕೆ ಈ ಘಟನೆಯೇ ಒಂದು ಉದಾಹರಣೆ. ಸತ್ಯ ಇರೋ ಕಡೆ ಯಶಸ್ಸು ಸಿಗುತ್ತೆ, ಅಭಿಮಾನಿ ದೇವರುಗಳು ಒಳ್ಳೆಯ ಸಿನಿಮಾಗಳನ್ನ ಯಾವತ್ತಿಗೂ ಕೈಬಿಡಲ್ಲ. ಅವರವರೆ ತಿಳಿದುಕೊಳ್ಳಬೇಕು. ಈ ಥರ ಯಾಕಾಯ್ತು ಗೊತ್ತಿಲ್ಲ. ನಮ್ಮ ಚಿತ್ರರಂಗ ಬೆಳೀಬೇಕು, ದುರ್ಬಳಕೆ ಮಾಡಿಕೊಳ್ಳಬಾರದು. ಹೊಸಬರಿಗೆ ಎಲ್ಲರ ಸಪೋರ್ಟ್ ಬೇಕು. ಈ ವಿಷಯದ ಬಗ್ಗೆ ಈಗ ಮಾತಾಡೋದು ಬೇಡ..” ಎಂದಿದ್ದಾರೆ ಶಿವಣ್ಣ (Shiva Rajkumar). ಇದನ್ನು ಓದಿ..Railway News: ಬಡವರಿಗೆ ಬಿಗ್ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ- ಇದೊಂದು ಆದರೆ ಬಡವರಿಗೆ ರೈಲಿನಲ್ಲಿ ಸುಲಭ ಪ್ರಯಾಣ.

ರಮ್ಯಾ ಅವರ ವಿಷಯಕ್ಕೆ ಶಿವಣ್ಣ (Shiva Rajkumar) ನೀಡಿರುವ ಈ ಪ್ರತಿಕ್ರಿಯೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಸಿನಿಮಾ ಬಗ್ಗೆ ಹೊಗಳಿರುವ ಶಿವಣ್ಣ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡಕ್ಕೆ ಗುಡ್ ಲಕ್, ವರುಣ್ ನನಗೆ 15 ವರ್ಷಗಳಿಂದ ಪರಿಚಯ, ಫಸ್ಟ್ ಡೇ ನ್ನನು ಕೂಡ ಸಿನಿಮಾ ನೋಡಬೇಕಿತ್ತು. ಜಾಹಿರಾತು ಶೂಟಿಂಗ್ ಇದ್ದ ಕಾರಣ ನೋಡೋಕೆ ಆಗಲಿಲ್ಲ. ನನ್ನ ಪರವಾಗಿ ಗೀತಾ, ನನ್ನ ಮಗಳು ನಿವೇದಿತಾ ಎಲ್ಲರೂ ಸಿನಿಮಾ ನೋಡಿದ್ದಾರೆ ಎಂದು ಹೇಳಿದ್ದಾರೆ ಶಿವಣ್ಣ. ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Comments are closed.