Tirupati News: ಯುವಜನತೆಗೆ ಭಕ್ತಿ ತುಂಬಲು ತಿರುಪತಿ ಮಂಡಳಿಯಿಂದ ಹೊಸ ಗಟ್ಟಿ ನಿರ್ಧಾರ- ಇದು ಹಿಂದೂ ಧರ್ಮದ ಅರಿವು ಮೂಡಿಸುತ್ತದೆ.

Tirupati News- Tirumala Tirupati Devasthanams has taken a good decision

Tirupati News In Kannada Language: ನಮಸ್ಕಾರ ಸ್ನೇಹಿತರೇ, ಹಿಂದೂ ಸಂಸ್ಕೃತಿಯನ್ನು ಪರಿಪಾಲಿಸುವಂತಹ ಪ್ರತಿಯೊಬ್ಬರಿಗೂ ಕೂಡ ತಿರುಪತಿ ತಿಮ್ಮಪ್ಪನ(Tirupathi Thimmappa) ಸನ್ನಿಧಾನ ಎನ್ನುವುದು ಅತ್ಯಂತ ಪವಿತ್ರ ಹಾಗೂ ಪ್ರಮುಖವಾದದ್ದು ಎನ್ನುವುದನ್ನು ಯಾವುದು ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ(TTD) ನೂತನವಾಗಿ ಸಮಿತಿಯನ್ನು ರಚಿಸಿದ್ದು ಇತ್ತೀಚಿಗಷ್ಟೇ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದು ತಿಳಿದುಬಂದಿದೆ. ಬನ್ನಿ ಈ ವಿಚಾರವಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Tirupati News- Tirumala Tirupati Devasthanams has taken a good decision

TTD ಸಮಿತಿಯ ಅಧ್ಯಕ್ಷ ಆಗಿರುವಂತಹ ಭೂಮನ ಕರುಣಾಕರ ರೆಡ್ಡಿ ಅವರು ಸನಾತನ ಹಿಂದೂ ಧರ್ಮದ ಬಗ್ಗೆ ಯುವ ಜನತೆಯಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸುವಂತಹ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದ್ದಾರೆ. ತಿರುಪತಿಯಲ್ಲಿ ಗೋವಿಂದ ಕೋಟಿಯನ್ನು ಬರೆಯುವಂತಹ ನಿರ್ಧಾರವನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. 25 ವರ್ಷದ ಒಳಗಿನ ಯುವಕರು ಗೋವಿಂದ ಕೋಟಿಯನ್ನು ಬರೆದರೆ ಅವರ ಕುಟುಂಬಕ್ಕೆ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ವಿಐಪಿ ಎಂಟ್ರಿಯನ್ನು(VIP Entry In Tirupathi) ನೀಡುವುದಾಗಿ ಕೂಡ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕೇವಲ ಎಷ್ಟು ಮಾತ್ರವಲ್ಲದೆ ಎಲ್ ಕೆ ಜಿ ಯ ಚಿಕ್ಕ ಮಕ್ಕಳಿಂದ ಹಿಡಿದು ಗ್ರಾಜುಯೇಷನ್ ಮಾಡುವಂತಹ ಯುವ ವಿದ್ಯಾರ್ಥಿಗಳವರೆಗೂ ಕೂಡ ಪ್ರತಿಯೊಬ್ಬರಿಗೂ ಭಗವದ್ಗೀತೆಯ ಪುಸ್ತಕಗಳನ್ನು(Bhagavad-Gita) ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿರುವ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಕೇವಲ ತಿರುಪತಿಯಲ್ಲಿ ಮಾತ್ರವಲ್ಲದೆ ಮುಂಬೈನ ಬಾಂಧ್ರಾದಲ್ಲಿ ಕೂಡ ವೆಂಕಟೇಶನ ದೇವಸ್ಥಾನ ಹಾಗೂ ಮಾಹಿತಿ ಕೇಂದ್ರ ಎರಡನ್ನು ಕೂಡ ಸ್ಥಾಪಿಸುವ ಕುರಿತಂತೆ ಕೂಡ ತೆರೆಮರೆಯಲ್ಲಿ ಯೋಜನೆ ಹಾಗೂ ಯೋಚನೆಗಳು ನಡೆಯುತ್ತಿವೆ ಎನ್ನುವುದರ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

TTD ಆಡಳಿತ ಮಂಡಳಿಗೆ ಸಂಬಂಧಪಟ್ಟಂತಹ ಆಸ್ಪತ್ರೆಗಳಲ್ಲಿ (Tirupati News) ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಔಷಧಿಯನ್ನು ನೀಡುವಂತಹ ಕೆಲಸವನ್ನು ಕೂಡ ಈ ಸಂದರ್ಭದಲ್ಲಿ ಮಾಡಲಿದ್ದಾರೆ. ಔಷಧಿ ಖರೀದಿಯ ಜೊತೆಗೆ ವೇದಗಳ ಬೋಧನೆಗೆ ಕೂಡ ಜನರನ್ನು ಹುದ್ದೆಗಳಿಗೆ ಆಯ್ಕೆ ಮಾಡಲಿದ್ದಾರೆ ಎಂಬುದಾಗಿ ಕೂಡ TTD ಆಡಳಿತ ಮಂಡಳಿಯ ಅಧ್ಯಕ್ಷರಿಂದ ತಿಳಿದುಬಂದಿದೆ. ಸೆಪ್ಟೆಂಬರ್ 18ರಿಂದ 26ರವರೆಗೆ ತಿರುಪತಿಯ ಬ್ರಹ್ಮೋತ್ಸವ(Tirupathi Brahmotsava) ಕೂಡ ನಡೆಯಲಿದೆ. ಇದೇ ಸಂದರ್ಭದಲ್ಲಿ TTD ದೇವಸ್ಥಾನದ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಕೂಡ ಲೋಕಾರ್ಪಣೆ ಮಾಡಲಿದೆ. ಬ್ರಹ್ಮೋತ್ಸವಕ್ಕೆ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಚಾಲನೆ ನೀಡಲಿದ್ದಾರೆ.

TTD ನೌಕರರಿಗೆ ಉಳಿದುಕೊಳ್ಳುವಂತಹ ಮನೆ ಸೇರಿದಂತೆ 400 ಹುದ್ದೆಗಳಿಗೆ ಭರ್ತಿ ಮಾಡುವಂತಹ ಕೆಲಸವನ್ನು ಕೂಡ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ನೌಕರರು ವಾಸಿಸುವಂತಹ ಸ್ಥಳಗಳ ಅಭಿವೃದ್ಧಿ ಕೆಲಸಕ್ಕಾಗಿ 4.15 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿ ತಿರುಪತಿಯ ಬ್ರಹ್ಮೋತ್ಸವದ ಸಂದರ್ಭದಲ್ಲಿ ವಿಐಪಿ ಎಂಟ್ರಿ ಯನ್ನು ಪಡೆದುಕೊಳ್ಳಲು ನೀವು ಗೋವಿಂದ ಕೋಟಿಯನ್ನು ಬರೆದರೆ ಸಾಕು ನಿಮ್ಮ ಕುಟುಂಬ ಸೇರಿದಂತೆ ನಿಮಗೂ ಕೂಡ ವಿಐಪಿ ಎಂಟ್ರಿ ಸಿಗಲಿದೆ ಎನ್ನುವುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Comments are closed.