New SBI Rules: ಆಧಾರ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟ SBI ಬ್ಯಾಂಕ್.

SBI ಗ್ರಾಹಕರಿಗೆ ಅಟಲ್ ಯೋಜನೆ ಸೇರಿದಂತೆ ಎಲ್ಲಾ ಸರ್ಕಾರಿ ಯೋಜನೆಗಳಿಗೆ ಸೇರಲು ಕೇವಲ ಆಧಾರ್ ಮಾತ್ರ ಸಾಕು.

New SBI Rules: ನಮಸ್ಕಾರ ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(State Bank Of India) ಆಗಸ್ಟ್ 25ರ ಪ್ರೆಸ್ ಮೀಟ್ ನಲ್ಲಿ ಹೇಳಿರುವ ಪ್ರಕಾರ ಯಾವುದೇ ಸಾಮಾಜಿಕ ಭದ್ರತೆಯ ಯೋಜನೆಗಳಿಗೆ ನೋಂದಾವಣೆ ಮಾಡಿಕೊಳ್ಳಲು ಕೇವಲ ಆಧಾರ್ ಕಾರ್ಡ್ ಮಾತ್ರ ಸಾಕು ಎಂಬುದಾಗಿ ಅಧಿಕೃತವಾಗಿ ಹೇಳಿದೆ. ಇಂತಹ ಯೋಜನೆಗಳಿಗೆ ಸೇರಲು ಯಾವುದೇ ಪಾಸ್ ಬುಕ್ ಅಗತ್ಯವಿಲ್ಲ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಲಾಗಿದೆ.

ಇಂತಹ ಸಾಮಾಜಿಕ ಭದ್ರತೆಯ ಯೋಜನೆಗಳಲ್ಲಿ ನೋಂದಣಿ ಮಾಡಿಕೊಳ್ಳಲು ಕಸ್ಟಮರ್ ಸರ್ವಿಸ್ ಪಾಯಿಂಟ್ಸ್(CSP) ಗಳನ್ನು ಉಪಯೋಗಿಸಲಾಗುತ್ತದೆ. CSP ನಲ್ಲಿ ನೀವು ಇನ್ಮುಂದೆ ಪಾಸ್ ಬುಕ್ ತೆಗೆದುಕೊಂಡು ಹೋಗಬೇಕಾದ ಅಗತ್ಯ ಕೂಡ ಇರುವುದಿಲ್ಲ. SBI ನಲ್ಲಿರುವಂತಹ ಅಡ್ವಾನ್ಸ್ ಪ್ರಕ್ರಿಯೆಗಳು ಮೊದಲಿಗಿಂತಲೂ ಕೂಡ ವೇಗವಾಗಿ ಈ ಪ್ರಕ್ರಿಯೆ ಮುಗಿಯುವಂತೆ ಮಾಡುತ್ತದೆ. SBI ಹೇಳಿರುವ ಪ್ರಕಾರ CSP ನಲ್ಲಿ ನೀವು ಬ್ಯಾಂಕ್ ಅಕೌಂಟ್ ನಲ್ಲಿ ಆಧಾರ್ ಅಪ್ಡೇಟ್, ಮೊಬೈಲ್ ನಂಬರ್ ಅಪ್ಡೇಟ್, ಹಣ ಹಾಕುವುದು ಹಾಗು ತೆಗೆಯುವುವಂತಹ ಪ್ರಕ್ರಿಯೆಗಳನ್ನು ಕೂಡ ನೀವು ಮಾಡಬಹುದಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

ಈಗ SBI ಗ್ರಾಹಕರು ಈ ಯೋಜನೆಗಳಲ್ಲಿ ಕೂಡ ಖಾತೆಯನ್ನು ತೆರೆಯ ಬಹುದಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ(PMJJBY), ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ( PMSBY), ಇದರ ಜೊತೆಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಕೂಡ CSP ನಲ್ಲಿ ತೆರೆಯಬಹುದಾಗಿದೆ. SBI ಸಂಸ್ಥೆಯ ಮುಖ್ಯಸ್ಥರು ಟೆಕ್ನೋಲಜಿ ಜೊತೆಗೆ ಭಾರತ ದೇಶದಲ್ಲಿರುವಂತಹ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಆಧುನಿಕ ಗೊಳಿಸುವಂತಹ ಕೆಲಸವನ್ನು ನಾವು ಮಾಡಲು ಹೊರಟಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ(PMJJBY) ಅನ್ನು 18ರಿಂದ 50 ವರ್ಷದ ನಡುವಿನ ವ್ಯಕ್ತಿಗಳು ಪಡೆಯಬಹುದಾಗಿದೆ. ಇದರ ಲೈಫ್ ಕವರ್ ಅಮೌಂಟ್ 2 ಲಕ್ಷ ಆಗಿದ್ದು ವರ್ಷಕ್ಕೆ ಕಟ್ಟ ಬೇಕಾಗಿರುವ ಪ್ರೀಮಿಯಂ ಕೇವಲ 436 ರೂಪಾಯಿ ಆಗಿದೆ. ಇದು ಅಧಿಕೃತ ವೆಬ್ಸೈಟ್ ಮೂಲಕ ತಿಳಿದು ಬಂದಿರುವ ಮಾಹಿತಿಯಾಗಿದೆ. ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ(PMSBY) ನಲ್ಲಿ 18ರಿಂದ 70 ವರ್ಷದ ನಡುವಿನ ವ್ಯಕ್ತಿಗಳು ಹೂಡಿಕೆ ಮಾಡಬಹುದಾಗಿದೆ. ಇಲ್ಲಿ ಕೂಡ ಅಪಘಾ’ ತದಲ್ಲಿ ಮರಣ ಅಥವಾ ಜೀವನ ಪರ್ಯಂತ ಅಂಗವಿಕಲತೆಗೆ 2 ಲಕ್ಷ ರೂಪಾಯಿಗಳ ಕವರೇಜ್ ಅನ್ನು ನೀಡಲಾಗುತ್ತದೆ. ಆರ್ಥಿಕ ಸೇವೆಗಳ ಅಧಿಕೃತ ವೆಬ್ಸೈಟ್ ಪ್ರಕಾರ ವರ್ಷಕ್ಕೆ 20 ರೂಪಾಯಿ ಕಟ್ಟಬೇಕು ಎಂಬುದನ್ನು ಕೂಡ ಇಲ್ಲಿ ತಿಳಿಸಲಾಗಿದೆ.

ಅಟಲ್ ಪೆನ್ಷನ್ ಯೋಜನೆ(APY) 2015 ಹಾಗೂ 16 ಬಜೆಟ್ ಸಂದರ್ಭದಲ್ಲಿ ಈ ಸಾಮಾಜಿಕ ಭದ್ರತೆಯನ್ನು ಹೊಂದಿರುವಂತಹ ಯೋಜನೆ ಲಾಂಚ್ ಆಯ್ತು ಎಂಬುದಾಗಿ ತಿಳಿದು ಬಂದಿದೆ. ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ವೃದ್ಧಾಪ್ಯದಲ್ಲಿ ಪೆನ್ಷನ್ ನೀಡುವಂತಹ ಯೋಜನೆ ಇದಾಗಿದೆ ಎಂದು ಹೇಳಬಹುದು. PFRDA ಸಂಸ್ಥೆಯ ಆಧೀನದಲ್ಲಿ ಈ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಯೋಜನೆ ಮೂಲಕ ತಿಂಗಳಿಗೆ 1000 ದಿಂದ 5000 ವರೆಗೂ ಪೆನ್ಷನ್ ನೀಡುವಂತಹ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಮಿನಿಮಮ್ ಲಾಭವನ್ನು ನೀಡುವಂತಹ ಭರವಸೆಯನ್ನು ಖುದ್ದಾಗಿ ಸರ್ಕಾರವೇ ನೀಡಿದೆ.

Comments are closed.