Kannada News: ಮೋದಿ ಸರ್ಕಾರದಿಂದ ಸಿಗಲಿದೆ ಉಚಿತ ಎಲ್ಪಿಜಿ ಗ್ಯಾಸ್. ಭಾರತೀಯರಲ್ಲಿ ಮನೆ ಮಾಡಿದ ಸಂತೋಷ.

Kannada News: Get Free LPG gas in PM Ujjwal Scheme- below is the Complete details of PM Ujjwal Scheme.

Kannada News: ನಮಸ್ಕಾರ ಸ್ನೇಹಿತರೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಅಧಿಕಾರಕ್ಕೆ ಬಂದ ಮೇಲಿನಿಂದ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಭಾರತೀಯರಿಗೆ ಉಪಯೋಗ ಆಗಲಿ ಎನ್ನುವ ಕಾರಣಕ್ಕಾಗಿ ಅದರಲ್ಲೂ ವಿಶೇಷವಾಗಿ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬದವರಿಗೆ ಬೇಕಾಗುವಂತಹ ಪ್ರತಿಯೊಂದು ಸವಾಲತ್ತುಗಳನ್ನು ನೀಡುವಂತಹ ಯೋಜನೆಗಳನ್ನು ಕೂಡ ಜಾರಿಗೆ ತರಲಾಗಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ(PM Ujjwal Scheme) ಕೂಡ ಒಂದು.

Kannada News: Get Free LPG gas in PM Ujjwal Scheme- below is the Complete details of PM Ujjwal Scheme.

ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಒದಗಿಸುವಂತಹ ಈ ಯೋಜನೆಯನ್ನು ಮತ್ತೆ ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸುವಂತಹ ಅನುಮತಿಯನ್ನು ಕೂಡ ಈಗಾಗಲೇ ಪ್ರಧಾನಮಂತ್ರಿಗಳು ನೀಡಿದ್ದು ಇದಕ್ಕಾಗಿ 1650 ಕೋಟಿ ರೂಪಾಯಿಯನ್ನು ಕೂಡ ಮಂಜೂರು ಮಾಡಲಾಗಿದೆ. ಭಾರತದಾದ್ಯಂತ ಈ ಯೋಜನೆ ಅಡಿಯಲ್ಲಿ ಈ ಮೂಲಕ 75 ಲಕ್ಷಕ್ಕೂ ಅಧಿಕ ಕುಟುಂಬಗಳು ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಂತಾಗಿದೆ. ಈ ಹಣವನ್ನು ಮಂಜೂರು ಮಾಡುವ ಮೂಲಕ 2025 ರಿಂದ 26ರ ವರೆಗೆ ಕೂಡ ಯೋಜನೆಯನ್ನು ವಿಸ್ತರಿಸಿದಂತಾಗುತ್ತದೆ.

ಉಜ್ವಲ್ ಯೋಜನೆ ಅಡಿಯಲ್ಲಿ ಇರುವಂತಹ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್(Gas Cylinder) ಮೇಲೆ 400 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿತ್ತು ಸಾಮಾನ್ಯ ಖರೀದಿದಾರರಿಗೆ 200 ರೂಪಾಯಿಗಳ ರಿಯಾಯಿತಿಯನ್ನು ನೀಡಿತ್ತು. ಇನ್ನು ಉಜ್ವಲ್ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳುವಂತಹ ಜನರಿಗೆ ಸಿಲಿಂಡರ್ ಹಾಗೂ ಸ್ಟವ್ ಎರಡನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಉಜ್ವಲ್ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕವನ್ನು ಕೂಡ ನೀಡಲಾಗುತ್ತಿದೆ.

ಉಜ್ವಲ್ ಗ್ಯಾಸ್ ಯೋಜನೆ ಅಡಿಯಲ್ಲಿ ಸಿಗುವಂತಹ ಗ್ಯಾಸ್ ಸಂಪರ್ಕಗಳ ಬೆಲೆಯನ್ನು ತಿಳಿದುಕೊಳ್ಳೋಣ ಬನ್ನಿ. 5 ಕೆಜಿಯ ಡಬಲ್ ಸಿಲಿಂಡರ್ ಸಂಪರ್ಕಕ್ಕಾಗಿ ನೀವು 2200 ರೂಪಾಯಿ, 5 ಕೆಜಿಯ ಸಿಂಗಲ್ ಸಿಲಿಂಡರ್ ಸಂಪರ್ಕಕ್ಕಾಗಿ 1300 ರೂಪಾಯಿ ಹಾಗೂ 14.2 ಕೆಜಿಯ ಸಿಂಗಲ್ ಸಿಲಿಂಡರ್ ಸಂಪರ್ಕಕ್ಕಾಗಿ ನೀವು 2200 ನೀಡಬೇಕಾಗುತ್ತದೆ. ಇದರಲ್ಲಿ 14.2 ಕೆಜಿಯ ಸಿಲಿಂಡರ್ ಗಾಗಿ ನೀವು 400 ರೂಪಾಯಿ ಪ್ರತಿ ಸಿಲಿಂಡರ್ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದ್ದು ಈ ಸಬ್ಸಿಡಿ(LPG Gas Cylinder Subsidy) ಅಡಿಯಲ್ಲಿ 12 ಸಿಲಿಂಡರ್ ಗಳನ್ನು ನೀವು ವರ್ಷಕ್ಕೆ ಪಡೆದುಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಯಾವ ರೀತಿಯಲ್ಲಿ ಬೆಲೆ ಏರಿಕೆ ಕಂಡುಬರುತ್ತದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಇದರ ನಡುವಲ್ಲಿ ಕೂಡ ಕೇಂದ್ರ ಸರ್ಕಾರ LPG Gas Cylinder ಮೇಲಿನ ಬೆಲೆಯನ್ನು ಸಾಮಾನ್ಯ ಗ್ರಾಹಕರಿಗೆ 200 ರೂಪಾಯಿಗಳ ರಿಯಾಯಿತಿಯಲ್ಲಿ ಹಾಗೂ ಉಜ್ವಲ್ ಯೋಜನೆ ಅಡಿಯಲ್ಲಿ ಇರುವಂತಹ ಕುಟುಂಬಗಳಿಗೆ 400 ರೂಪಾಯಿಗಳ ರಿಯಾಯಿತಿಯಲ್ಲಿ ನೀಡುತ್ತಿದೆ. ಕರ್ನಾಟಕದಲ್ಲಿರುವಂತಹ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 1105 ರೂಪಾಯಿಗಳಿಂದ ಕೆಳಗಿಳಿದು ಸಾಮಾನ್ಯ ಗ್ರಾಹಕರಿಗೆ 905 ಹಾಗೂ ಉಜ್ವಲ್ ಯೋಜನೆ ಅಡಿಯಲ್ಲಿ ಇರುವವರಿಗೆ 75 ರೂಪಾಯಿಗೆ ಬುಧವಾರದಿಂದ ಸಿಗಲಿದೆ. ಇದರಿಂದಾಗಿ ವರ್ಷಕ್ಕೆ ಸರ್ಕಾರಕ್ಕೆ 10,000 ಕೋಟಿಯ ಹೊಡೆತ ಕೂಡ ಬೀಳಲಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದನ್ನು ಸರ್ಕಾರ ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೇವಲ ಗೃಹಪಯೋಗಿ ಸಿಲಿಂಡರ್ ಗಳಿಗೆ ಮಾತ್ರ ಬರದೆ ವಾಣಿಜ್ಯ ಸಿಲಿಂಡರ್ಗಳ(Commercial LPG Gas Cylinder Price) ಮೇಲೆ ಕೂಡ ಬೆಲೆ ಇಳಿಕೆಯಾಗಿದೆ. 19 ಕೆಜಿ ಸಿಲಿಂಡರ್ ಮೇಲೆ 157 ರೂಪಾಯಿಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕಡಿಮೆಯಾದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯ ಇಲ್ಲ.

Comments are closed.