UPI: ಬೇರೆಯವರಿಗೆ UPI ಮೂಲಕ ಹಾಕಿದ ಹಣ ವಾಪಾಸ್ ಪಡೆಯೋದು ಹೇಗೆ ಗೊತ್ತೇ? ತಿಳಿದುಕೊಂಡು ಬಾರಿ ಹಣ ಉಳಿಸಿ.

Do you know how to get back money deposited through UPI? Know and save money

UPI: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಣದ ಟ್ರಾನ್ಸಾಕ್ಷನ್ ಗಿಂತ ಹೆಚ್ಚಾಗಿ ಆನ್ಲೈನ್ ಟ್ರಾನ್ಸಾಕ್ಷನ್ ಹೆಚ್ಚಾಗಿದೆ. ವಿಶೇಷವಾಗಿ UPI ಟ್ರಾನ್ಸಾಕ್ಷನ್ಗಳ ಮೂಲಕ ಚಿಟಿಕೆ ಹೊಡೆಯುವಷ್ಟರಲ್ಲಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ನಿಜಕ್ಕೂ ಕೂಡ ಈ ಆನ್ಲೈನ್ ಪ್ರಕ್ರಿಯೆನ್ನುವುದು ಭಾರತದಲ್ಲಿ ಹಣಕಾಸು ವ್ಯವಸ್ಥೆಗೆ ಚುರುಕಿನ ವೇಗವನ್ನು ನೀಡಿದೆ ಎಂದು ಹೇಳಬಹುದಾಗಿದೆ.

Do you know how to get back money deposited through UPI? Know and save money

ಎಲ್ಲಿಂದಲೂ ಕೂಡ ಕೇವಲ ಕೈ ಬೆರಳಂಚಿನ ಸಹಾಯದಿಂದಾಗಿ ದೊಡ್ಡ ಪ್ರಮಾಣದಲ್ಲಿ ಕೂಡ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಕಳುಹಿಸಬಹುದಾಗಿದೆ ಆದರೆ ಇದರಲ್ಲಿ ಕೂಡ ಒಂದು ಸಮಸ್ಯೆ ಇದೆ. ಅದೇನೆಂದರೆ ಸಾಕಷ್ಟು ಬಾರಿ UPI Payments ಮಾಡುವಾಗ ತಪ್ಪಾದ ಖಾತೆಗೆ ತಿಳಿಯದೆ ಹಣವನ್ನು ವರ್ಗಾಯಿಸುವಂತಹ ಸಾಧ್ಯತೆ ಕೂಡ ಇದೆ. ಈ ಸಂದರ್ಭದಲ್ಲಿ ಏನು ಮಾಡಬೇಕಾಗುತ್ತದೆ ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ನೀವು ತಪ್ಪಾಗಿ ಹಣವನ್ನು ವರ್ಗಾಯಿಸಿದರೆ ಗಾಬರಿ ಪಡೋದು ಬೇಡ 18001201740 ನಂಬರ್ಗೆ ಕಾಲ್ ಮಾಡಿದ್ರೆ ಸಾಕು. ಈ ಸಂದರ್ಭದಲ್ಲಿ ನೀವು ಯಾವ ಖಾತೆಗೆ ತಪ್ಪಾಗಿ ಹಣವನ್ನು ಟ್ರಾನ್ಸ್ಫರ್ ಮಾಡಿದ್ದೀರಿ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಆನಂತರ ನಿಮ್ಮ ಹೋಮ್ ಬ್ರಾಂಚ್ ಗೆ ಹೋಗಿ ಈ ಕುರಿತಂತೆ ಮಾಹಿತಿಯನ್ನು ನೀಡಿ ಹಾಗೂ ಇದರ ಬಗ್ಗೆ ಅರ್ಜಿಯನ್ನು ಕೂಡ ಸಲ್ಲಿಸಿ. ಬ್ಯಾಂಕ್ ಮ್ಯಾನೇಜರ್(Bank Manager) ಗೂ ಕೂಡ ಇದರ ಬಗ್ಗೆ ಮಾಹಿತಿ ನೀಡಬಹುದಾಗಿದೆ. bankingombudsman.rbi.org.in ಮೇಲ್ ಐ ಡಿ ಗು ಕೂಡ ನೀವು ದೂರಿನ ಮೇಲ್ ಅನ್ನು ಸಲ್ಲಿಸಬಹುದಾಗಿದೆ. RBI ನಿಯಮಗಳ ಅನುಸಾರವಾಗಿ ಈ ರೀತಿ ಘಟನೆ ನಡೆದು 48 ಗಂಟೆಗಳ ಒಳಗಾಗಿ ನಿಮ್ಮ ಹಣ ನಿಮ್ಮ ಖಾತೆಗೆ ವಾಪಸ್ ಬರಬೇಕು.

ಮನೆಯಲ್ಲಿ ಖಾಲಿ ಕುರುವ ಬದಲು, ಚಾಟ್ GPT ಬಳಸಿ ಸುಲಭವಾಗಿ ಹಣಗಳಿಸಿ. ಮಾರ್ಗಗಳು ಇಲ್ಲಿವೆ. Earn from Chat GPT

ಎಲ್ಲಕ್ಕಿಂತ ಪ್ರಮುಖವಾಗಿ ಈ ಸಂದರ್ಭದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದಿರುವ ಮತ್ತೊಂದು ವಿಚಾರ ಏನಂದ್ರೆ? ನೀವು ಹಣವನ್ನು ಟ್ರಾನ್ಸ್ಫರ್ ಮಾಡಿದ ನಂತರ ನಿಮ್ಮ ಮೊಬೈಲ್ ಫೋನಿಗೆ ಹಣ ಟ್ರಾನ್ಸ್ಫರ್ ಆಗಿರುವಂತಹ ಖಾತರಿ ಮೆಸೇಜ್ ಬರುತ್ತದೆ. ಅದನ್ನು ಯಾವತ್ತೂ ಕೂಡ ಡಿಲೀಟ್ ಮಾಡಲು ಹೋಗಬೇಡಿ ಯಾಕೆಂದರೆ ಅದರಲ್ಲಿರುವ PPBL ನಂಬರ್ ಅನ್ನು ನೀವು ಬ್ಯಾಂಕಿನಲ್ಲಿ ದೂರು ಸಲ್ಲಿಸುವ ಸಂದರ್ಭದಲ್ಲಿ ನಮೂದಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ ಹೀಗಾಗಿ ಆ ನಂಬರ್ ಇರುವಂತಹ ಮೆಸೇಜ್ ಅನ್ನು ಮಾತ್ರ ಡಿಲೀಟ್ ಮಾಡುವುದಕ್ಕೆ ಹೋಗಬೇಡಿ.

ಕೆಲವೊಂದು ಸಂದರ್ಭದಲ್ಲಿ ನೀವು ಟ್ರಾನ್ಸ್ಫರ್ ಮಾಡಿರುವಂತಹ ಹಣ ತಪ್ಪಾದ ಖಾತೆಗೆ ಹೋಗಿರುತ್ತದೆ ಎಂಬುದಾಗಿ ತುಂಬಾ ದಿನಗಳ ನಂತರ ನಿಮಗೆ ತಿಳಿದು ಬರುತ್ತದೆ ಆದರೆ ನಿಮಗೆ ತಿಳಿದಿರಲಿ ನೀವು ಈ ರೀತಿ ಟ್ರಾನ್ಸ್ಫರ್ ನಡೆದ ಮೂರು ದಿನಗಳ ಒಳಗಾಗಿ ನೀವು ನಿಮ್ಮ ಹತ್ತಿರದ ನಿಮ್ಮ ಬ್ಯಾಂಕಿನ ಹೋಂ ಬ್ರಾಂಚ್(Bank Home Branch) ಗೆ ಹೋಗಿ ದೂರು ಸಲ್ಲಿಸಬೇಕಾಗಿರುತ್ತದೆ. ಮೂರು ದಿನಗಳ ಒಳಗಾಗಿ ನೀವು ಹಣವನ್ನು ನಿಮ್ಮ ಖಾತೆಗೆ ಮರುಪಾವತಿ ಮಾಡುವಂತೆ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಸಾಕಷ್ಟು ಸಂದರ್ಭದಲ್ಲಿ ಯುಪಿಐ ಪೇಮೆಂಟ್ ಮಾಡುವ ಸಂದರ್ಭದಲ್ಲಿ ಪೇಮೆಂಟ್ ಪೆಂಡಿಂಗ್ ಅಥವಾ ಪ್ರೋಸೆಸಿಂಗ್(UPI Payment Processing) ಅನ್ನೋ ಬರಹವನ್ನು ಕೂಡ ನೀವು ನಿಮ್ಮ ಸ್ಕ್ರೀನ್ ಮೇಲೆ ಕಾಣಬಹುದಾಗಿದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಈ ರೀತಿ ಕಂಡಾಗ ಹಣ ಕಡಿಕೊಂಡಿದ್ರೆ ಖಂಡಿತವಾಗಿ 48 ಗಂಟೆಗಳ ಒಳಗಾಗಿ ಅದು ನಿಮ್ಮ ಖಾತೆಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು. ಇಲ್ಲವಾದಲ್ಲಿ ಈ ಮೇಲ್ ಹೇಳಿರುವಂತಹ ಪ್ರಕ್ರಿಯೆಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಹಣವನ್ನು ವಾಪಾಸು ಪಡೆದುಕೊಳ್ಳಬಹುದಾಗಿದೆ.

Comments are closed.