Job Openings: ಕರ್ನಾಟಕದಲ್ಲಿಯೇ ಕೆಲಸ- ಕಡಿಮೆ ಓದಿದ್ದರೂ ರೈಲ್ವೆ ಇಲಾಖೆಯಲ್ಲಿವೆ ಉದ್ಯೋಗ. 80000 ಸಂಬಳ.

Latest Job Openings in Railway Department Karnataka- Below is the complete details of Railway jobs- Eligibility, Criteria and salary details.

Job Openings in Railway department Karnataka: ನಮಸ್ಕಾರ ಸ್ನೇಹಿತರೇ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಉತ್ಸಾಹವನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಒಂದು ಸುವರ್ಣ ಅವಕಾಶ ಬಂದಿದೆ ಎಂದು ಹೇಳಬಹುದು. ಇನ್ನು ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್(Indian railway construction company limited) ಸಂಸ್ಥೆ 23 ಅಭ್ಯರ್ಥಿಗಳಿಗೆ ಆಹ್ವಾನಿಸಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ವಿದ್ಯಾರ್ಹತೆ ಸಂಬಳ ಸೇರಿದಂತೆ ಪ್ರತಿಯೊಂದು ಈ ಕೆಲಸದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Latest Job Openings in Railway Department Karnataka- Below is the complete details of Railway jobs- Eligibility, Criteria and salary details.

ಹುದ್ದೆಯ ಮಾಹಿತಿ ಹಾಗೂ ವಿದ್ಯಾರ್ಹತೆಗಳ ವಿವರ: ಮೊದಲಿಗೆ ಜೆಜಿಎಂ/ಎಲೆಕ್ಟ್ರಿಕ್ ಹುದ್ದೆಗೆ ಮೂರು ಖಾಲಿ ಹುದ್ದೆಗಳು ಬಾಕಿ ಇದ್ದು ಇದಕ್ಕಾಗಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು. ಬಿಜಿಎಂ ಎಲೆಕ್ಟ್ರಿಕ್ ಹುದ್ದೆಗೆ ಆರು ಹುದ್ದೆಗಳು ಖಾಲಿ ಇವೆ. ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಪದವಿ ಹೊಂದಿದ್ದರೆ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಮ್ಯಾನೇಜರ್ ಎಲೆಕ್ಟ್ರಿಕ್ ಹುದ್ದೆಗೆ ಎರಡು ಸ್ಥಾನಗಳು ಖಾಲಿ ಇದ್ದಾವೆ ಎಂದು ಹಾಗೂ ಇದಕ್ಕಾಗಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿರಬೇಕು ಎಂಬುದಾಗಿ ಕೂಡ ಹೇಳಲಾಗುತ್ತದೆ.

ಎಲ್ಲರಿಗೂ ಮನೆಕಟ್ಟು ಆಸೆ ಇದ್ದೆ ಇರುತ್ತದೆ, ನಿಮಗೂ ಕೂಡ ಮನೆ ಕಟ್ಟುವ ಆಸೆ ಇದ್ದರೇ ಅರ್ಜಿ ಹಾಕಿ- ಇದು ಲಕ್ಷ ಕೊಡುತ್ತಾರೆ, ಒಂದು ಲಕ್ಷ ವಾಪಸ್ಸು ಕಟ್ಟಿ ಸಾಕು. Home Loan

ಮ್ಯಾನೇಜರ್ S&T ಗೆ ಎರಡು ಹುದ್ದೆ (Job Openings) ಹಾಗೂ ವರ್ಕ್ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್ ಹುದ್ದೆಗೆ ಕ್ರಮವಾಗಿ ನಾಲ್ಕು ಹಾಗೂ ಎರಡು ಹುದ್ದೆಗಳು ಖಾಲಿ ಇವೆ. ಇನ್ನು ಕ್ರಮವಾಗಿ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಪದವಿ ಹಾಗೂ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರಬೇಕು.

ವಯೋಮಿತಿ
ಜೆಜಿಎಂ ಹುದ್ದೆಗೆ 50 ವರ್ಷ, ಡಿಜೆ ಎಮ್ ಹಾಗೂ ಮ್ಯಾನೇಜಿಂಗ್ ಹುದ್ದೆಗೆ 50 ವರ್ಷ, ಮ್ಯಾನೇಜರ್ ಎಲೆಕ್ಟ್ರಿಕಲ್, ಮ್ಯಾನೇಜರ್ OHE, manager S&T ಹುದ್ದೆಗಳಿಗೆ ಇರುವಂತಹ ವಯೋಮಿತಿ ಕೂಡ ಐವತ್ತು ವರ್ಷವಾಗಿದೆ. ವರ್ಕ್ ಇಂಜಿನಿಯರ್ ಹಾಗೂ ಸೈಟ್ ಸೂಪರ್ವೈಸರ್ ಗಳಿಗೆ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಸಂಬಳ ಉದ್ಯೋಗದ ಸ್ಥಳ ಹಾಗೂ ಆಯ್ಕೆಯ ಪ್ರಕ್ರಿಯೆ
ಈ ಕೆಲಸದಲ್ಲಿ ಜೆಜಿಎಂ ಗಳಿಗೆ 80000 ಹಾಗೂ ಡಿಜಿಎಂ ಗಳಿಗೆ 70000 ಸಂಭಾವನೆ ನೀಡಲಾಗುತ್ತದೆ. ಎಲೆಕ್ಟ್ರಿಕ್ ಮ್ಯಾನೇಜರ್, OHE ಮ್ಯಾನೇಜರ್ ಹಾಗೂ S&T ಮ್ಯಾನೇಜರ್ಗಳಿಗೆ ಅರವತ್ತು ಸಾವಿರ ರೂಪಾಯಿಗಳು ಸಂಬಳ ರೂಪದಲ್ಲಿ ಸಿಗುತ್ತದೆ. ವರ್ಕ್ ಇಂಜಿನಿಯರ್ ಗಳಿಗೆ 36,000 ಹಾಗೂ ಸೈಟ್ಸ್ ಸೂಪರ್ವೈಸರ್ ಗಳಿಗೆ (Job Openings) 25000 ಪ್ರತಿ ತಿಂಗಳಿಗೆ ಸಂಬಳ ಸಿಗುತ್ತದೆ. ಉದ್ಯೋಗ ಸ್ಥಳದ ಬಗ್ಗೆ ಮಾತನಾಡುವುದಾದರೆ ಕರ್ನಾಟಕ, ಬಿಹಾರ, ರಾಜಸ್ಥಾನ ಹಾಗೂ ಅಸ್ಸಾಂ ನಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನು ಸಂದರ್ಶನಗಳು ನಡೆಯುವ ಸ್ಥಳಗಳ ಬಗ್ಗೆ ಮಾತನಾಡುವುದಾದರೆ ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಇರ್ಕಾನ್ ಇಂಟರ್ನ್ಯಾಷನಲ್ ಕಚೇರಿಗಳ ಅಧಿಕೃತ ಆಫೀಸ್ ನಲ್ಲಿ ನೀವು ಸಂದರ್ಶನವನ್ನು ಪಡೆಯಬಹುದಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ನವೆಂಬರ್ 22ರಂದು ಸಂದರ್ಶನ ನಡೆಯಲಿದೆ ಎಂಬುದಾಗಿ ತಿಳಿದಿದೆ.

Comments are closed.