Loan: ಯಾವ ಬ್ಯಾಂಕ್ ಮುದ್ರಾ ಲೋನ್ ಕೊಟ್ಟಿಲ್ವಾ?? ಆಗಿದ್ರೆ ಬ್ಯಾಂಕ್ ಆ ಬರೋಡ ದಲ್ಲಿ ಈ ರೀತಿ ಮಾಡಿ, ಪಕ್ಕ 10 ಲಕ್ಷದ ವರೆಗೂ ಲೋನ್ ಕೊಡ್ತಾರೆ.

ಬ್ಯಾಂಕ್ ಆಫ್ ಬರೋಡಾ ದ ಇ ಮುದ್ರಾ ಯೋಜನೆ: Bank Of Baroda E Mudra Loan Details explained in Kannada

Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಅಥವಾ ತಮ್ಮ ಇರುವಂತಹ ಉದ್ಯಮವನ್ನು ವಿಸ್ತರಿಸಬೇಕು ಎನ್ನುವ ಕಾರಣಕ್ಕಾಗಿ ಆರ್ಥಿಕ ಸಹಾಯವನ್ನು ಅಂದರೆ ಲೋಹನವನ್ನು ಪಡೆದುಕೊಳ್ಳಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿರುತ್ತಾರೆ ಅಂತವರಿಗೆ ಬ್ಯಾಂಕ್ ಆಫ್ ಬರೋಡಾ(Bank of Baroda) ದ ಇ ಮುದ್ರಾ ಲೋನ್ ಯೋಜನೆ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳೋದಕ್ಕೆ ಹೊರಟಿದ್ದೇವೆ.

ದೇಶದ ಸಾಕಷ್ಟು ಜನರಿಗೆ ಆರ್ಥಿಕ ಅಭಾವವನ್ನು ನೀಗಿಸುವಂತಹ ಕೆಲಸವನ್ನು ಪ್ರಧಾನಮಂತ್ರಿಯವರ ಇ ಮುದ್ರಾ ಯೋಜನೆ(pradhanmantri e mudra scheme) ಮಾಡುತ್ತಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇದನ್ನು ಪಡೆದುಕೊಳ್ಳುವ ವಿಧಾನ ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಬ್ಯಾಂಕ್ ಆಫ್ ಬರೋಡಾ ದ ಇ ಮುದ್ರಾ ಯೋಜನೆ: Bank Of Baroda E Mudra Loan

ಕೇಂದ್ರ ಸರ್ಕಾರ 2023ರಲ್ಲಿ ಬ್ಯಾಂಕ್ ಆಫ್ ಬರೋಡ ಮೂಲಕ ಇ ಮುದ್ರಾ ಯೋಜನೆಯ ಮೂಲಕ ವ್ಯಾಪಾರವನ್ನು ಪ್ರಾರಂಭಿಸಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿರುವಂತಹ ಜನರಿಗೆ ಸಾಲ ಸೌಲಭ್ಯವನ್ನು ಈ ಯೋಜನೆಯ ಮೂಲಕ ನೀಡಲು ಹೊರಟಿದೆ. ಯಾವುದೇ ರೀತಿಯ ಕೋಲಾಟರಲ್ ಅನ್ನು ನೀಡದೆ ನೀವು ಈ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಸುಲಭ ರೀತಿಯಲ್ಲಿ ಪಡೆದುಕೊಳ್ಳಬಹುದು. ಈ ಯೋಜನೆಯ ಮೂಲಕ ನೀವು 10 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಕನಸಿನ ವ್ಯಾಪಾರವನ್ನು ಕೂಡ ಪ್ರಾರಂಭ ಮಾಡಬಹುದಾಗಿದೆ.

Bank of baroda E mudra loan details
Bank of baroda E mudra loan details

ಇ ಮುದ್ರಾ ಯೋಜನೆಯನ್ನು ಪಡೆಯುವುದಕ್ಕೆ ಇರಬೇಕಾಗಿರುವ ಅರ್ಹತೆಗಳು | E Mudra Loan Eligibility

ಕೃಷಿ ಅಥವಾ ಕೃಷಿಯೇತರ ಉದ್ಯಮಗಳಿಗೂ ಕೂಡ ನೀವು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಯಾವುದೇ ರೀತಿಯ ವ್ಯಾಪಾರ ಇದ್ರು ಕೂಡ ಅದರ ಮಾಹಿತಿಯನ್ನು ಸರಿಯಾದ ರೂಪದಲ್ಲಿ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳಿಗೆ ನೀಡಿ 10 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು. ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರ ಉದ್ಯಮಕ್ಕೂ ಕೂಡ ನಿಮಗೆ ಸಾಲ ಸೌಲಭ್ಯ ದೊರಕುತ್ತದೆ.

ಇನ್ನು ಇ ಮುದ್ರಾ ಯೋಜನೆ ಅಡಿಯಲ್ಲಿ ಕೆಲವೊಂದು ಕ್ಯಾಟಗರಿಗಳು ಕೂಡ ಕಾಣಿಸಿಕೊಳ್ಳುತ್ತವೆ ಆ ಮೂಲಕ ಕೂಡ ನೀವು ಯಾವ ಕ್ಯಾಟಗರಿಯಲ್ಲಿ ಕಾಣಿಸಿಕೊಳ್ಳುತ್ತೀರಿ ಎನ್ನುವುದನ್ನು ನಿರ್ಧರಿಸುವ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಶಿಶು ಮುದ್ರಾ ಲೋನ್ ಯೋಜನೆ.

ಮುದ್ರಾ ಲೋನ್ ಯೋಜನೆಯಲ್ಲಿ ಬೇಸಿಕ್ ಆಗಿ ಕಾಣಿಸಿಕೊಳ್ಳುವಂತಹ ಲೋನ್ ಯೋಜನೆ ಇದಾಗಿದ್ದು ಈ ಯೋಜನೆ ಅಡಿಯಲ್ಲಿ ನೀವು 50,000ಗಳವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದಕ್ಕೆ ಬಡ್ಡಿ ಕೂಡ ಕಡಿಮೆಯಾಗಿರುತ್ತದೆ.

ಕಿಶೋರ್ ಮುದ್ರಾ ಲೋನ್ ಯೋಜನೆ

ಈ ಕ್ಯಾಟಗರಿಯ ಲೋನ್ ಯೋಜನೆಯಲ್ಲಿ ನೀವು 50,000 ದಿಂದ ಪ್ರಾರಂಭಿಸಿ 5 ಲಕ್ಷಗಳವರೆಗೆ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಲೋನ್ ಕ್ಯಾಟಗರಿಯನ್ನು ನೀವು ನಿಮ್ಮ ವ್ಯಾಪಾರವನ್ನು ಇನ್ನಷ್ಟು ಹೆಚ್ಚಾಗಿ ವಿಸ್ತರಣೆ ಮಾಡುವುದಕ್ಕೆ ಆಯ್ಕೆ ಮಾಡಬಹುದಾಗಿದೆ.

ತರುಣ್ ಮುದ್ರಾ ಲೋನ್ ಯೋಜನೆ

ತರುಣ್ ಮುದ್ರಾ ಲೋನ್ ಯೋಜನೆಯನ್ನು 5 ಲಕ್ಷದಿಂದ 10 ಲಕ್ಷ ರೂಪಾಯಿಗಳ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಆಯ್ಕೆ ಮಾಡಲಾಗುತ್ತದೆ. ಈ ಕ್ಯಾಟಗರಿಯ ಲೋನ್ ಯೋಜನೆಯನ್ನು ಸಾಮಾನ್ಯವಾಗಿ ದೊಡ್ಡ ಮಟ್ಟದ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಆಯ್ಕೆ ಮಾಡಲಾಗುತ್ತಿದೆ.

ಲೋನ್ ಕಟ್ಟುವಂತಹ ಅವಧಿ ಹಾಗೂ ಬೇಕಾಗಿರುವಂತಹ ಡಾಕ್ಯುಮೆಂಟ್ಗಳು | Documents required to get Loan

ಬ್ಯಾಂಕ್ ಆಫ್ ಬರೋಡದಲ್ಲಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಂಡ ನಂತರ 84 ತಿಂಗಳುಗಳ ಒಳಗೆ ಹಣವನ್ನು ಕಟ್ಟುವಂತಹ ಸಮಯಾವಕಾಶವನ್ನು ನೀಡಲಾಗುತ್ತದೆ ಆದರೆ ಇದು ನೀವು ಪಡೆದುಕೊಂಡಿರುವಂತಹ ಲೋನ್ ಮೇಲೆ ಕೂಡ ನಿರ್ಧರಿತವಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಆಫ್ ಬರೋಡ ಬ್ರಾಂಚ್ ಗೆ ಹೋಗಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಇನ್ನು ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ಗಳ ಬಗ್ಗೆ ನೋಡುವುದಾದರೆ, ಅರ್ಜಿ ಸಲ್ಲಿಸುವವರ ಲೇಟೆಸ್ಟ್ ಪಾಸ್ಪೋರ್ಟ್ ಸೈಜ್ ಫೋಟೋ, ಫಾರ್ಮ್ ಅನ್ನು ಪೂರ್ತಿಯಾಗಿ ತುಂಬಿರಬೇಕು. ಇದರ ಜೊತೆಗೆ ನಿಮ್ಮ ಐಡಿ ಗ್ರೂಪ್ ಹಾಗೂ ವಿಳಾಸದ ಪ್ರೂಫ್ ಅನ್ನು ಸಾಬೀತುಪಡಿಸುವಂತಹ ದಾಖಲೆಗಳನ್ನು ನೀಡಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ನೀವು ಯಾವ ಕಾರಣಕ್ಕಾಗಿ ಲೋನ್ ಪಡೆದುಕೊಳ್ಳುತ್ತಿದ್ದೀರೋ ಅದಕ್ಕೆ ಸಂಬಂಧಪಟ್ಟಂತೆ ದಾಖಲೆ ಪತ್ರಗಳನ್ನು ಹಾಗೂ ವಿವರಗಳನ್ನು ನೀಡಬೇಕು. ವ್ಯಾಪಾರಕ್ಕೆ ಬೇಕಾಗಿರುವಂತಹ ಹಣದ ಕೊಟೇಶನ್ ವಿವರಗಳನ್ನು ಕೂಡ ನೀಡಬೇಕಾಗುತ್ತದೆ.

ಇದನ್ನು ಕೂಡ ಓದಿ: ಜನರ ಕಷ್ಟ ಅರ್ಥ ಮಾಡಿಕೊಂಡ ಏರ್ಟೆಲ್. ಲೋನ್ ಯೋಜನೆ- 5 ನಿಮಿಷದಲ್ಲಿ ಲೋನ್. ಮೊಬೈಲ್ ಇಂದ ಅರ್ಜಿ ಹಾಕಿ.

ಬ್ಯಾಂಕ್ ಆಫ್ ಬರೋಡದಲ್ಲಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? | How to Apply for E mudra Loan

ಬ್ಯಾಂಕ್ ಆಫ್ ಬರೋಡದ ಅಧಿಕೃತ ವೆಬ್ಸೈಟ್ನಲ್ಲಿ ನೀವು ಅಧಿಕೃತವಾದ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕಾಗುತ್ತದೆ. ಅದರ ಜೊತೆಗೆ ಕೇಳಲಾಗುವಂತಹ ಅವಶ್ಯಕತೆ ಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗುತ್ತದೆ. ಇದಾದ ನಂತರ ಹತ್ತಿರದಲ್ಲಿ ಇರುವಂತಹ ಬ್ಯಾಂಕ್ ಆಫ್ ಬರೋಡ ಬ್ರಾಂಚಿಗೆ ಹೋಗಿ ಈ ಅರ್ಜಿಯ ಮೂಲಕ ಮುದ್ರಾ ಲೋನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಕಡೆಯಿಂದ ನಡೆಸಲಾಗುವಂತಹ ವೆರಿಫಿಕೇಶನ್ ಸೇರಿದಂತೆ ಇನ್ನಿತರ ಚಟುವಟಿಕೆಗಳ ನಂತರ ನಿಮಗೆ ನಿಮ್ಮ ಅವಶ್ಯಕತೆ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

Comments are closed.