ಭಾರತದ ಜಿಡಿಪಿಗೆ ಸಾವಿರಾರು ಕೋಟಿ ಕೊಡುಗೆ ನೀಡಿದ ಯೂಟ್ಯೂಬ್! ಭಾರತಕ್ಕೆ ಲಾಭ ತಂದ ಯೂಟ್ಯೂಬ್!

ಆಕ್ಸ್ಫರ್ಡ್ ಎಕನಾಮಿಕ್ಸ್ ಎನ್ನುವ ಸ್ವಾತಂತ್ಯ್ರ ಸಲಹಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ 2020ರ ಯೂಟ್ಯೂಬ್ ವಿಡಿಯೋ ಕ್ರಿಯೇಟರ್ ಗಳು ಭಾರತದ ಜಿಡಿಪಿಗೆ 6,800 ಕೋಟಿ ಕೊಡುಗೆ ನೀಡಿದ್ದಾರೆ ಎಂದು ವರದಿ ಮಾಡಿದೆ. ಯೂಟ್ಯೂಬ್ ಸಂಸ್ಥೆಯು ಭಾರತದಲ್ಲಿ 6,83,900 ರಷ್ಟು ಫುಲ್ ಟೈಮ್ ಉದ್ಯೋಗಗಳನ್ನು ಬೆಂಬಲಿಸಿದೆ ಎಂದು ವರದಿ ಮಾಡಲಾಗಿದೆ. ಯೂಟ್ಯೂಬರ್ ಗಳ ಈ ಹೊಸ ಕೆಲಸ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ.

ಭಾರತದ ಆರ್ಥಿಕ ಯೂಟ್ಯೂಬರ್ ಗಳು ಹೆಚ್ಚು ಮಾಡುತ್ತಿದ್ದಾರೆ. ಗೂಗಲ್ ಒಡೆತನದಲ್ಲಿರುವ ಸಂಸ್ಥೆ ಇದರ ಬಗ್ಗೆ ಮಾತನಾಡಿ,  ಭಾರತದ ವಿಡಿಯೋ ಕಂಟೆಂಟ್ ಕ್ರಿಯೇಟರ್ ಗಳು ಯೂಟ್ಯೂಬ್ ನಲ್ಲಿ ಕೆಲಸ ಪಡೆದುಕೊಳ್ಳುತ್ತಿದ್ದಾರೆ. ಹೊಸ ವಿಡಿಯೋಗಳು,ಹೊಸ ರೀತಿಯ ಕಂಟೆಂಟ್ ಗಳು, ವಿವಿಧ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ಕಾರಣ ಯೂಟ್ಯೂಬ್ ನಲ್ಲಿ ವೀಕ್ಷಕರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಒಂದು ಲಕ್ಷಕ್ಕಿಂತ ಹೆಚ್ಚು subscriber ಗಳನ್ನು ಹೊಂದಿರುವ ಯೂಟ್ಯೂಬರ್ ಗಳು ಹೆಚ್ಚಿನ ಬೆಳವಣಿಗೆ ನೋಡುತ್ತಿದ್ದಾರೆ.

gdp youtube7431536657047642527.

ಕಂಟೆಂಟ್ ಗಳು ಚೆನ್ನಾಗಿರುವ ಕಾರಣ ವೀಕ್ಷಕರು ಮತ್ತು subscriber ಗಳ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಶೇ.80% ಹೆಚ್ಚು ಉದ್ಯಮಿಗಳಿಗೆ ಯೂಟ್ಯೂಬ್ ವಿಡಿಯೋಗಳು ವೃತ್ತಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ವಿಭಿನ್ನವಾದ, ವಿಶೇಷವಾದ ಮಾಹಿತಿಗಳನ್ನು ಹಂಚಿಕೊಳ್ಳಲು, ಹಾಗೂ ಅದರಿಂದ ಹಣ ಗಳಿಸಲು ಯೂಟ್ಯೂಬರ್ ಗಳಿಗೆ ಹಲವು ಮಾರ್ಗಗಳನ್ನು ನೀಡಿದೆ ಯೂಟ್ಯೂಬ್. ಪ್ರತಿವರ್ಷ 6 ಅಂಕಗಳಿಗಿಂತ ಹೆಚ್ಚು ಆದಾಯ ಗಳಿಸುವ ಯೂಟ್ಯೂಬ್ ಚಾನೆಲ್ ಗಳು ಪ್ರತಿ ವರ್ಷ 60% ರಷ್ಟು ಹೆಚ್ಚಾಗುತ್ತಿದೆ. ವರದಿಗಳ ಪ್ರಕಾರ ಪ್ರಪಂಚಾದ್ಯಂತ ಹೊಸ ವೀಕ್ಷಕರನ್ನು ತಲುಪಲು ಯೂಟ್ಯೂಬ್ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

Comments are closed.