Paytm ಮೂಲಕ 5 ಲಕ್ಷದವರೆಗೂ ಸಾಲ ಪಡೆಯಬಹುದು..ಇದರ ಫಲಾನುಭವ ಪಡೆದುಕೊಳ್ಳುವುದು ಹೇಗೆ ಗೊತ್ತಾ?

ಪೇಟಿಎಂ ಡಿಜಿಟಲ್ ಆಗಿ ಹಣ ಪಾವತಿ ಮಾಡುವ ಅಪ್ಲಿಕೇಶನ್. ಬಹುತೇಕ ಎಲ್ಲರೂ ಈಗ ಪೇಟಿಎಂ ಉಪಯೋಗಿಸುತ್ತಾರೆ. ಈಗಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಶುರುವಾದ ನಂತರ ಎಲ್ಲರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. Paytm ಮೂಲಕ ಈಗ ಹೊಸದೊಂದು ಯೋಜನೆ ಶುರುವಾಗಿದ್ದು, ಬ್ಯುಸಿನೆಸ್ ಮಾಡುವ ಇಚ್ಛೆ ಇರುವವರಿಗೆ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಇದನ್ನು ಪಡೆಯಲು ನೀವು ಅಪ್ಲೈ ಮಾಡುವುದು ಹೇಗೆ? ಇದು ಹೇಗೆ ಕೆಲಸ ಮಾಡುತ್ತದೆ? ತಿಳಿಸುತ್ತೇವೆ ನೋಡಿ..

ಬ್ಯಾಂಕಿಂಗ್ ಇಲ್ಲದೆ ಹಣಕಾಸಿನ ವ್ಯವಹಾರಮಾಡುವ ಕಂಪನಿಗಳು ಹಾಗೂ ವಾಣಿಜ್ಯ ಬ್ಯಾಂಕ್ ಗಳ ಜೊತೆ ಪೇಟಿಎಂ ಒಪ್ಪಂದ ಮಾಡಿಕೊಂಡಿದ್ದು, ಸಣ್ಣ ವ್ಯಾಪಾರ ಮಾಡುವವರಿಗೆ ಸಾಲ ನೀಡುತ್ತಿದೆ. ಪೇಟಿಎಂ ಅಪ್ಲಿಕೇಶನ್ ನಲ್ಲಿ ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಮ್ ಮೂಲಕ ವ್ಯಾಪಾರಿಗಳು ಸಾಲದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು 5 ಹಂತಗಳಲ್ಲಿ ಪಡೆದುಕೊಳ್ಳಬಹುದು, ಬಡ್ಡಿ ದರ ಕೂಡ ಕಡಿಮೆ ಇರುತ್ತದೆ. ಜೊತೆಗೆ, ಪ್ರತಿದಿನ ಇಎಂಐ ಭರಿಸುವ ಅವಕಾಶ ಇರುತ್ತದೆ. ಪ್ರತಿತಿಂಗಳು ಇಎಂಐ ಕಟ್ಟುವ ಬದಲು ಪ್ರತಿದಿನ ನಿಮ್ಮ ಆದಾಯ ಹೇಗಿದೆ ಅದರ ಆಧಾರದ ಮೇಲೆ ಪ್ರತಿದಿನ ನೀವು ಇಎಂಐ ಪಾವತಿ ಮಾಡಬಹುದು.

paytm loan8624424650554200226.

ಒಂದು ವೇಳೆ ವ್ಯಾಪಾರಿಗಳು ಪ್ರತಿದಿನ ಇಎಂಐ ಪಾವತಿ ಮಾಡುತ್ತಿದ್ದಲ್ಲಿ, ಅವರಿಗೆ ಪೂರ್ವಪಾವತಿ ಶುಲ್ಕಗಳು ಇರುವುದಿಲ್ಲ. ಪೇಟಿಎಂ ನಲ್ಲಿ ಸಾಲ ಪಡೆಯಲು ನೀವು, Paytm for Business ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಅದರಲ್ಲಿ ಹೋಮ್ ಸ್ಕ್ರೀನ್ ಮೇಲೆ ಕಾಣುವ ಬ್ಯುಸಿನೆಸ್ ಲೋನ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ ಬೇಕಿರುವ ಸಾಲದ ಮೊತ್ತ ಎಷ್ಟು ಎಂದು ಹಾಕಿ, ಪಾವತಿಯ ಸಮಯ ಮತ್ತು ಕಂತುಗಳ ಬಗ್ಗೆ ಕೇಳುವ ವಿವರಗಳನ್ನು ನೀಡಿ. ನಂತರ CKYC ಇಂದ ನಿಮ್ಮ KYC ವಿವರಗಳನ್ನು ಪಡೆಯಲು ಅನುಮತಿ ನೀಡಿ. ನಂತರ ನಿಮ್ಮ ಪ್ಯಾನ್ ಕಾರ್ಡ್ ವಿವರ, ಜನ್ಮ ದಿನಾಂಕ, ಇಮೇಲ್ ಐಡಿ ಹಾಗೂ ಇನ್ನುಳಿದ್ ವಿವರಗಳನ್ನು ಎಂಟ್ರಿ ಮಾಡಿ.

ನಂತರ ನಿಮ್ಮ ಕ್ರೆಡಿಟ್ ಸ್ಕೊರ್, ಪ್ಯಾನ್ ಕಾರ್ಡ್ ವಿವರ, KYC ಎಲ್ಲವನ್ನು ಪರಿಶೀಲನೆ ಮಾಡುತ್ತಾರೆ. ಇದು ನೀವು ಸಾಲ ಪಡೆಯಲು ಅರ್ಜಿ ಹಾಕುವ ಕೊನೆಯ ಹಂತವಾಗಿದೆ. ಇದು ಮುಗಿದ ಬಳಿಕ ನಿಮ್ಮ ಸಾಲದ ಮೊತ್ತವು ಬ್ಯಾಂಕ್ ಖಾತೆಗೆ ಹೋಗುತ್ತದೆ. ಪೇಟಿಎಂ ನಲ್ಲಿ ಸಾಲ ಪಡೆಯಲು ನೀವು ದಾಖಲೆಗೆಳನ್ನು ಕೊಡಬೇಕಿಲ್ಲ. ನಿಮ್ಮ ಟ್ರಾನ್ಸಕ್ಷನ್ ಹೇಗಿದೆ, ಕ್ರೆಡಿಟ್ ಹಿಸ್ಟರಿ ನೋಡಿ ನಿಮಗೆ ಸಾಲ ಕೊಡಲಾಗುತ್ತದೆ. ವ್ಯಾಪಾರಿಗಳಿಗೆ ನೀಡುವ ಸಾಲ ಪ್ರತಿವರ್ಷ ಶೇ.38ರಷ್ಟು ಹೆಚ್ಚಾಗುತ್ತಿದೆ. ಮೂರನೇ ತ್ರೈಮಾಸಿಕದ ಸಾಲದ ಹಣ ಶೇ.128ರಷ್ಟು ಹೆಚ್ಚಾಗಿದೆ. 25% ಅಷ್ಟು ಹೊಸ ಜನರಿಗೆ ಪೇಟಿಎಂ ಸಾಲ ನೀಡುತ್ತಿದೆ.

Comments are closed.