Pitru Paksha 2023: ನಿಮ್ಮ ಮನೆಗೆ ಪಿತೃ ದೋಷ ಇದೆಯೇ ಎಂದು ತಿಳಿಯುವುದು ಹೇಗೆ ಗೊತ್ತೇ?? ಇದ್ದರೇ ನೀವೇನು ಮಾಡಬೇಕು?

Pitru Paksha Details Explained in Kannada- This is how you can get to know that your house have pitru dosha or not.

Pitru Paksha 2023: ನಮಸ್ಕಾರ ಸ್ನೇಹಿತರೇ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪಿತೃ ದೋಷ(pitru dosha ) ಅನ್ನುವಂತಹ ಒಂದು ಶಬ್ದ ಕೇಳಿ ಬರುತ್ತದೆ ಅದರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಪೂರ್ವಜರ ಶಾಪ ಅಥವಾ ಜಾತಕ ಕುಂಡಲಿಯಲ್ಲಿ ಇರುವಂತಹ ದೋಷದಿಂದಲೂ ಕೂಡ ಪಿತೃ ದೋಷ ಉಂಟಾಗುತ್ತದೆ. ಇದೇ ಕಾರಣಕ್ಕಾಗಿ ಪಿತೃ ದೋಷದಿಂದ ಜೀವನದಲ್ಲಿ ಯಾವುದೇ ಅಭಿವೃದ್ಧಿ ಉಂಟಾಗದೇ ಇರುವುದು ಹಾಗೂ ಸಾಕಷ್ಟು ಸಮಸ್ಯೆಗಳನ್ನು ಕೂಡ ನೀವು ಕಾಣಬಹುದಾಗಿದೆ. ಹಾಗಿದ್ರೆ ಬನ್ನಿ ಯಾವೆಲ್ಲ ಸಂಕೇತಗಳು ಪಿತೃ ದೋಷ ಇದೆ ಎಂಬುದನ್ನು ತಿಳಿಸುತ್ತದೆ ಎಂಬುದನ್ನು ಕೂಡ ತಿಳಿಯೋಣ.

Pitru Paksha 2023 Details Explained in Kannada- This is how you can get to know that your house have pitru dosha or not.

ಒಂದು ವೇಳೆ ಮನೆಯಲ್ಲಿ ಆಗಾಗ ಅನಾರೋಗ್ಯ ಸಮಸ್ಯೆ(illness) ಕಂಡು ಬರ್ತಾ ಇದ್ರೆ, ಗರ್ಭಧಾರಣೆ ಆಗದೇ ಇರುವುದು ಅಥವಾ ಗರ್ಭಪಾತ ಆಗುವುದು, ಮನೆಯಲ್ಲಿ ಅಶಾಂತಿ ಹಾಗೂ ಜಗಳ ಇರುವುದು, ಕುಟುಂಬದಲ್ಲಿ ಒಂದು ರೀತಿಯ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳು ಆಗಾಗ ಕಂಡುಬರುವುದು ಪಿತೃ ದೋಷದ ಗುಣಲಕ್ಷಣವಾಗಿದೆ. ಪಿತೃ ದೋಷ ಯಾವ ಕಾರಣಕ್ಕಾಗಿ ಉಂಟಾಗುತ್ತದೆ ಎಂಬುದನ್ನು ನೋಡುವುದಾದರೆ ಅಳತೆಗೂ ಮೀರಿದ ಕ್ರೂರ ವರ್ತನೆ ಯಿಂದಾಗಿ ಪ್ರಾಣಿ ಅಥವಾ ಮನುಷ್ಯರನ್ನು ಮುಗಿಸುವ ಕಾರಣಕ್ಕಾಗಿ, ತಮ್ಮ ಬೆಳವಣಿಗೆಗಾಗಿ ಬೇರೆಯವರ ಜೀವನವನ್ನು ಹಾಳು ಮಾಡುವಂತಹ ಯೋಚನೆಯನ್ನು ಮಾಡುವುದು, ಗುರು ಹಿರಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದರಿಂದಾಗಿ ಇದು ಉಂಟಾಗುತ್ತದೆ ಎಂದು ಹೇಳಬಹುದಾಗಿದೆ.

ಇನ್ನು ಕುಂಡಲಿಯಲ್ಲಿ ಯಾವ ರೀತಿಯಲ್ಲಿ ಪಿತೃ ದೋಷ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ. ನಿಮ್ಮ ಕುಂಡಲಿಯಲ್ಲಿ ಗ್ರಹಗಳ ರಾಜ ಆಗಿರುವ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಆತನ ಮಗ ಆಗಿರುವಂತಹ ಶನಿ ನಿಮ್ಮ ಕುಂಡಲಿಯ ಒಂದನೇ 2ನೇ ನಾಲ್ಕು ಏಳು ಒಂಬತ್ತು ಹಾಗೂ ಹತ್ತನೇ ಮನೆಯಲ್ಲಿ ಇದ್ದರೆ ಆ ಸಂದರ್ಭದಲ್ಲಿ ಪಿತೃ ದೋಷ ಉಂಟಾಗುತ್ತದೆ. ರಾಹು ಕೇತುವಿನ ಸಂಯೋಗದಿಂದಲೂ ಕೂಡ ಪಿತೃ ದೋಷ ಉಂಟಾಗುತ್ತದೆ. ಇಲ್ಲವೇ ಸೂರ್ಯನ ಜೊತೆಗೆ ರಾಹು ಅಥವಾ ಕೇತು, ಗುರುವಿನ ಜೊತೆಗೆ ರಾಹು ಅಥವಾ ಕೇತು ಸಂಯೋಗವನ್ನು ಮಾಡಿದರೆ ಆ ಸಂದರ್ಭದಲ್ಲಿ ಪಿತೃ ದೋಷ ಕುಂಡಲಿಯಲ್ಲಿ(pitru Dosha in kundali) ಉಂಟಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಪಿತೃ ದೋಷ ಪರಿಹಾರಕ್ಕಾಗಿ(solution for pitru dosha ) ನೀವು ಇದನ್ನು ಮಾಡುವುದು ಒಳ್ಳೆಯದು. ನಿಮ್ಮ ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡುವುದು ಇದರ ಪರಿಹಾರಕ್ಕೆ ಕಾರಣ ಆಗಬಹುದು. ಪಿತೃ ತರ್ಪಣದ ಜೊತೆಗೆ ಪಿತೃ ದೋಷ ನಿವಾರಣೆಗಾಗಿ ಪೂಜೆ ಮಾಡುವುದು ಒಳ್ಳೆಯದು. ಪ್ರತಿದಿನ ನಿಮ್ಮ ಮನೆಯ ಬಳಿ ಇರುವಂತಹ ಇಲ್ಲವೇ ದೇವಸ್ಥಾನದ ಬಳಿ ಇರುವಂತಹ ಆರಾಧಮಕ್ಕೆ ನೀರನ್ನು ಹಾಕಿ ನಂತರ ಶಿವ ಪೂಜೆಯನ್ನು ಮಾಡುವುದು ನಿಮಗೆ ಪಿತೃ ದೋಷವನ್ನು ಕಡಿಮೆಯಾಗುವಂತೆ ಮಾಡುತ್ತದೆ ಅಥವಾ ನಿವಾರಣೆ ಮಾಡುತ್ತದೆ. ಜ್ಯೋತಿಷಿಗಳ ಸಲಹೆ ಮೇರೆಗೆ ನಿಮ್ಮ ಕುಂಡಲಿಗೆ ತಕ್ಕಂತೆ ಇರುವಂತಹ ಹವಳ ಅಥವಾ ಹರಳನ್ನು ಧರಿಸುವುದು ಒಳ್ಳೆಯದು.

ಇನ್ನು ಪಿತೃ ದೋಷ ಪರಿಹಾರಕ್ಕಾಗಿ ಕೆಲವೊಂದು ಮಂತ್ರಗಳನ್ನು ಕೂಡ ನೀವು ಪಠಿಸಬಹುದಾಗಿದ್ದು ಬನ್ನಿ ಅದರ ಬಗ್ಗೆ ಕೂಡ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಮೊದಲಿಗೆ ಓಂ ಶ್ರೀ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದಹಿ ಪತ್ ಸ್ವಾಹ ಮಂತ್ರವನ್ನು ಉಚ್ಚಾರಣೆ ಮಾಡುತ್ತಾ ಇರಬೇಕು. ಈ ಸಂದರ್ಭದಲ್ಲಿ ಅತ್ಯಂತ ಪವಿತ್ರ ಆಗಿರುವಂತಹ ಮೃತ್ಯುಂಜಯ ಹಾಗೂ ಹನುಮಾನ್ ಚಾಲೀಸ ಮಂತ್ರಿಗಳನ್ನು ಕೂಡ ನೀವು ಪಠಿಸಿದರೆ ಈ ದೋಷದಿಂದ ಮುಕ್ತರಾಗಲು ಸಾಧ್ಯವಿದೆ.

Comments are closed.