ಗಂಡನ ಮರಣದ ದೀಪಿಕಾಗೆ ವರವಾಗಿದ್ದು ಆಕೆಯ ಆತ್ಮಸ್ಥೈರ್ಯ.. ಎಂತಹ ಸಾಧನೆ ಮಾಡಿದ್ದಾರೆ ಗೊತ್ತಾ ?

ನಮಸ್ಕಾರ ಸ್ನೇಹಿತರೆ ನಾವು ಎಷ್ಟು ಬಾರಿ ನೋಡಿರುತ್ತೇವೆ, ಒಬ್ಬ ಸ್ತ್ರೀ  ಮದುವೆಯಾದ ಬಳಿಕ ಗಂಡನನ್ನೆ ಅವಲಂಬಿಸಿರುತ್ತಾಳೆ. ಒಂದು ವೇಳೆ ಆತ ಅಕಾಲಿಕ ಮರಣವನ್ನು ಹೊಂದಿದ ಎಂದಾದರೆ ಆಕೆ ಎಲ್ಲವನ್ನೂ ಕಳೆದುಕೊಂಡಂತೆ ಇದ್ದುಬಿಡುತ್ತಾಳೆ. ಆಕೆ ಪತಿಯನ್ನು ಕಳೆದುಕೊಂಡ ನೋವಿಂದ ಆಚೆ ಬರಲು ಬಹಳ ಸಮಯ ಬೇಕಾಗುತ್ತದೆ ಅಥವಾ ಕೆಲವರು ಆ ಆಘಾತದಿಂದ ಆಚೆ ಬರುವುದೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲ ನೋವನ್ನೂ ಎದುರಿಸಿದವಳು. ಎಂಟು ವರ್ಷದ ಪುಟ್ಟ ಬಾಲಕಿ ಹಾಗೂ ಸಣ್ಣವಯಸ್ಸಿನಲ್ಲೇ ಹೆಂಡತಿಯನ್ನು ಬಿಟ್ಟುಹೋದ ರೋಹಿತ್ ಹಾಗೂ ಆತನನ್ನು ಕಳೆದುಕೊಂಡು ಆತನ ನೆನಪಿನಲ್ಲಿಯೇ ಕೊರಗದೆ, ಆತನ ನೆನಪನ್ನೇ ಶಕ್ತಿಯಾಗಿಸಿಕೊಂಡು ಹೊಸ ಉದ್ಯಮವನ್ನು ಪ್ರಾರಂಭಿಸುತ್ತಾಳೆ. ದೀಪ್ತಿ ಗುಪ್ತ ಅವರ ಯಶೋಗಾಥೆ ಇಲ್ಲಿದೆ.

deepti7247740637935014687

2021ರಲ್ಲಿ ರೋಹಿತ್ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ರಸ್ತೆಯ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡ ರೋಹಿತ್ ಗೆ ಕೃತಕ ಕಾಲನ್ನು ಅಳವಡಿಸಲಾಗುತ್ತದೆ. ಅಷ್ಟು ದೊಡ್ಡ ಅಪಘಾತವಾಗಿದ್ದರೂ, ಮಾನಸಿಕವಾಗಿ ಗಟ್ಟಿಯಾಗಿದ್ದ ರೋಹಿತ್ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಾರೆ. ತಂದೆಯೊಂದಿಗೆ ಮಾತನಾಡುತ್ತಿದ್ದ ರೋಹಿತ್ ಅಚಾನಕ್ಕಾಗಿ ಉಸಿರಾಟದ ಸಮಸ್ಯೆಯನ್ನು ಎದುರಿಸಿ ಅವರಿಗೆ ಏನಾಯಿತು ಎಂದು ಕೇಳುವಷ್ಟರಲ್ಲಿ ಎಲ್ಲರನ್ನು ಬಿಟ್ಟು ಹೋಗಿ ಬಿಡುತ್ತಾರೆ. ಸತ್ಯ ಅಪಘಾತದಿಂದ ತನ್ನ ಪತಿ ಪಾರಾದರು ಎಂದು ಕೊಳ್ಳುವಷ್ಟರಲ್ಲಿ ರೋಹಿತ್ ಲೋಕವನ್ನು ತ್ಯಜಿಸಿದರು. ದೀಪ್ತಿಗೆ ಆಘಾತವಾಗಿರಬೇಡ!

ಆದರೂ ಜಗ್ಗದೆ, ದೀಪ್ತಿ ತನ್ನ ಮಗುವನ್ನು ಹಾಗೂ ಮನೆಯವರನ್ನು ನೋಡಿಕೊಳ್ಳುವುದಕ್ಕಾಗಿ ಸ್ವ-ಉದ್ಯೋಗವನ್ನು ಪ್ರಾರಂಭಿಸಿಬಿಡುತ್ತಾರೆ.

ಹೌದು ದೀಪ್ತಿ ಅವರ ಕೈರುಚಿ ಬಹಳ ಚೆನ್ನಾಗಿದೆ ಇಂದು ರೋಹಿತ್ ಯಾವಾಗಲೂ ಹೋಗುತ್ತಿದ್ದರಂತೆ. ಹಾಗಾಗಿ ರೋಹಿತ್ ಮಾತನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ದೀಪ್ತಿ ತಮ್ಮದೇ ಆದ ಒಂದು ಹೋಟೆಲ್ ಉದ್ಯಮವನ್ನು ಆರಂಭಿಸುತ್ತಾರೆ. ತನ್ನ ಮಗಳ ಹೆಸರನ್ನೇ ತನ್ನ ಅಂಗಡಿಗೆ ಇಟ್ಟಿದ್ದಾರೆ ದೀಪ್ತಿ. ‘ಯಶಿಕಾ ದೋಸೆ ಪಾಯಿಂಟ್’ ಎಂಬ ಇವರ ಅಂಗಡಿ ಅರು ತಿಂಗಳ ಬಳಿಕ ಉತ್ತಮ ಯಶಸ್ಸನ್ನು ಗಳಿಸಿದೆ. ಇಲ್ಲಿ ವಿವಿಧ ದೋಸೆಗಳನ್ನು, ಚಟ್ನಿ ಸಾಂಬಾರ್ ಜೊತೆ ನೀಡಲಾಗುತ್ತದೆ. ಇತರ ಆಹಾರಗಳೂ ಇಲ್ಲಿ ಲಭ್ಯ. ಇದೀಗ ತಿಂಗಳಿಗೆ ಸುಮಾರು 35000 ರೂಪಾಯಿ ಹಣವನ್ನು ಹಳಿಸುವ ದೀಪ್ತಿಯ ಈ ಯಶಸ್ಸಿಗೆ ಕೇವಲ ಅವರ ಪರಿಶ್ರಮ, ಶ್ರದ್ಧೆಯೇ ಕಾರಣ.

ದೀಪ್ತಿ ಅವರ ಅಂಗಡಿಯ ಆಹಾರದ ಬಗ್ಗೆ ಹಾಗೂ ದೀಪ್ತಿ ಗುಪ್ತಾ ಅವರ ಜೀವನದ ಬಗ್ಗೆ  ಫುಡ್ ಬ್ಲಾಗರ್ ಪುಜ್ನಿತ ಬರೆದುಕೊಂಡಿದ್ದಾರೆ.

deepthi7496339762912859791

ಏನೇ ಆಗಲಿ ಹಲವು ನೆಗೆಟಿವ್ ಮಾತುಗಳ ನಡುವೆಯೂ ಗಂಡನ ನೆನಪಿನಲ್ಲೇ ತಮ್ಮ ಮಗಳ ಭವಿಷ್ಯವನ್ನು ಉಜ್ವಲವಾಗಿಸುವತ್ತ ಹೆಜ್ಜೆಯಿಟ್ಟು ದಿಪ್ತಿ ಗುಪ್ತಾ ಅವರಿಗೆ ಒಂದು ಸಲಾಂ.

Comments are closed.