ಒಂದು ವೇಳೆ ಟಿಕೆಟ್ ಕೊಳ್ಳದೆ ಪ್ರಯಾಣ ಮಾಡುವಾಗ ಸಿಕ್ಕಿ ಬಿದ್ದರೆ ಸಾಕು, ಜಸ್ಟ್ ಹೀಗೆ ಮಾಡಿ ದಂಡವೇ ಕಟ್ಟುವಂತಿಲ್ಲ. ಏನು ಮಾಡ್ಬೇಕು ಗೊತ್ತೇ??

ಸಾಮಾನ್ಯವಾಗಿ ಬಡವರ್ಗದವರು ಮಧ್ಯಮ ವರ್ಗದ ಜನರು ದೂರದ ಪ್ರಯಾಣ ಮಾಡಬೇಕಾದರೆ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ರೈಲಿನಲ್ಲಿ ಟಿಕೆಟ್ ದರ ಕಡಿಮೆ ಇರುತ್ತದೆ, ಹಾಗೆಯೇ ಪ್ರಯಣವು ಸುಗಮವಾಗಿ ಸಾಗುತ್ತದೆ, ಜೊತೆಗೆ ತಲುಪುವ ಸ್ಥಳವನ್ನು ಬೇಗ ತಲುಪಬಹುದು. ಈ ಎಲ್ಲಾ ಕಾರಣಗಳಿಂದ ರೈಲಿನ ಪ್ರಯಾಣವನ್ನು ಜನರು ಅರಿಸಿಕೊಳ್ಳುತ್ತಾರೆ. ದೂರದ ಪ್ರಯಾಣಕ್ಕೆ ಮಾತ್ರವಲ್ಲದೆ, ಕೆಲವು ಜನರು ಪ್ರತಿದಿನ ಕೆಲಸಕ್ಕೆ ಓಡಾಡಲು ರೈಲಿನ ಪ್ರಯಾಣದ ಮೇಲೆಯೇ ಅವಲಂಬಿತರಾಗಿರುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಟ್ರೈನ್ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಹಾಗೆಯೇ ಟ್ರೈನ್ ಹತ್ತಿರುತ್ತಾರೆ. ಅಂತಹ ಸಮಯದಲ್ಲಿ ಟಿಟಿ ಬಳಿ ಫೈನ್ ಕಟ್ಟದೆ ಇರಲು, ಒಂದು ಉಪಾಯ ಇದೆ. ಅದೇನು ಗೊತ್ತಾ?

ಕೆಲವು ಜನರು ಮೋಸ ಮಾಡಿ ಪ್ರಯಾಣ ಮಾಡಲೆಂದೇ ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಕೆಲವರು, ಜನಜಂಗುಳಿ ಹಾಗೂ ರಶ್ ನಡುವೆ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಹಾಗೆಯೇ ಟ್ರೈನ್ ಹತ್ತಿರುತ್ತಾರೆ. ನಿಮಗೆಲ್ಲ ಗೊತ್ತಿರುವ ಹಾಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತರುವುದು ಟಿಟಿ ಅವರಿಗೆ ಗೊತ್ತಾದರೆ, ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆದರೆ ಆ ರೀತಿ ಆಗದೆ ಇರುವ ಸಲುವಾಗಿ, ರೈಲ್ವೆ ಇಲಾಖೆಯು ಈ ರೀತಿ ತೊಂದರೆ ಆಗುವ ಪ್ರಯಾಣಿಕರಿಗಾಗಿ ಮತ್ತೊಂದು ದಾರಿಯನ್ನು ನೀಡಿದ್ದಾರೆ. ಅದೇನು ಎಂದು ಇಂದು ತಿಳಿಸುತ್ತೇವೆ.

wp image4045458380840485426

ಒಂದು ವೇಳೆ ಜನಜಂಗುಳಿ ಅಥವಾ ಇನ್ನಿತರ ಮುಖ್ಯ ಕಾರಣಗಳಿಂದ ನಿಮಗೆ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಹೋಗಿದ್ದರೆ, ಟ್ರೈನ್ ಹತ್ತಿದ ನಂತರ ಟಿಟಿ ಅವರನ್ನು ಭೇಟಿ ಮಾಡಿ, ಅವರ ಬಳಿ ಟಿಕೆಟ್ ಕೊಡುವ ಮಷಿನ್ ಇರುತ್ತದೆ, ಯಾವ ಕಾರಣಕ್ಕಾಗಿ ನಿಮಗೆ ಟಿಕೆಟ್ ಕೊಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಬಳಿ ಹೇಳಿಕೊಂಡರೆ, ಟಿಟಿ ಅವರೇ ನಿಮಗೆ 10 ರೂಪಾಯಿ ಹೆಚ್ಚಿಗೆ ಪಡೆದು ಟಿಕೆಟ್ ನೀಡುತ್ತಾರೆ. ಈ ರೀತಿ ನೀವು ಮಾಡಬಹುದು. ಆಗ ನೀವು ಫೈನ್ ಕಟ್ಟುವ ಅಗತ್ಯ ಬರುವುದಿಲ್ಲ . ಆದರೆ ಟಿಟಿ ಅವರು ಟಿಕೆಟ್ ಚೆಕ್ ಮಾಡಲು ಬಂದಾಗ ನಿಮ್ಮ ಬಳಿ ಟಿಕೆಟ್ ಇಲ್ಲದೆ ಹೋದರೆ, ನೀವು ಫೈನ್ ಕಟ್ಟಬೇಕಾಗಿ ಬರುವುದು ಖಂಡಿತ.

Comments are closed.