ರಾತ್ರಿಯಲ್ಲಿ ಗಿರಾಕಿಗಳಿಗಾಗಿ ಕಾಯುತಿದ್ದ ಮಂಗಳಮುಖಿಯನ್ನು ಕರೆದುಕೊಂಡು ಮಹಿಳಾ ಪೊಲೀಸ್ ಏನು ಮಾಡಿದರು ಗೊತ್ತೇ??

ರಾತ್ರಿಯಲ್ಲಿ ಗಿರಾಕಿಗಳಿಗಾಗಿ ಕಾಯುತಿದ್ದ ಮಂಗಳಮುಖಿಯನ್ನು ಕರೆದುಕೊಂಡು ಮಹಿಳಾ ಪೊಲೀಸ್ ಏನು ಮಾಡಿದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಕತ್ತಲೆ ಬೆಳಕಿನ ಆಟ ಅಂತಾರಲ್ಲ, ಅದು ಸಾಕಷ್ಟು ಜನರ ಜೀವನದಲ್ಲಿ ಆಟವೇ ಆಗಿರುತ್ತೆ. ಯಾಕಂದ್ರೆ ಹಗಲು ಕಂಡ ಜೀವನ ರಾತ್ರಿಯಾಗಿರುವುದಿಲ್ಲ. ಇದು ಸಾಮಾನ್ಯರ ಜೀವನಕ್ಕೆ ಅಪ್ಲೈ ಆಗದೇ ಇದ್ರೂ, ಜೀವನ ನಡೆಸುವುದಕ್ಕಾಗಿ ಕಷ್ಟಪಡುವ ಮಂಗಳಮುಖಿಯರ ಜೀವನಕ್ಕೆ ಅನ್ವಯವಾಗುತ್ತೆ. ಕೆಲವೊಮ್ಮೆ ಅವರ ಕಥೆಯನ್ನ ಕೇಳಿದ್ರೆ ಮನಸ್ಸು ಕರಗುತ್ತೆ, ಕರುಳು ಚುರ್ ಅನ್ನುತ್ತೆ… ಆಕೆಯನ್ನ ನೋಡಿ ಆ ಮಹಿಳಾ ಪೋಲೀಸ್ ಅಧಿಕಾರಿಗೂ ಹಾಗೇ ಅನ್ನಿಸಿತ್ತೋ ಏನೋ? ಆಕೆ ಮಾಡಿದ್ದೇನು ಗೊತ್ತಾ?

ಇದು ತಮಿಳುನಾಡಿನಲ್ಲಿ ನಡೆದ ಒಂದು ನೈಜ ಘಟನೆ. ಮಂಗಳಮುಖಿಯರು ಅಥವಾ ತ್ರತೀಯ ಲಿಂಗದವರು ಎಂದು ಕರೆಯಲ್ಪಡುವವರು ರಾತ್ರಿ ಹೊತ್ತು ಗಂಡಸರನ್ನು ಕೈಬೀಸಿ ಕರೆಯುತ್ತಾ ಹಣ ಸಂಪಾದಿಸುವ ವಿಷಯ ಎಲ್ಲರಿಗೂ ಗೊತ್ತು. ಹೀಗೆ ಮಧುರೈನ ಒಂದು ಸ್ಥಳದಲ್ಲಿ ರಾತ್ರಿ ವೇಳೆ ಈ ಕೆಲಸ ನಡೆಯುತ್ತಿತ್ತು. ಆ ಸಮಯದಲ್ಲಿ ಕವಿತಾ ಎನ್ನುವ ಪೋಲೀಸ್ ಆಫೀಸರ್ ಬೀಟ್ ಗಾಗಿ ಆ ರೋಡ್ ನಲ್ಲಿ ಸಂಚರಿಸುತ್ತಾರೆ. ಪೋಲಿಸ್ ಜೀಪ್ ಸೈರನ್ ಕೇಳುತ್ತಿದ್ದಂತೆ ಎಲ್ಲರೂ ಅಲ್ಲಿಂದ ಪರಾರಿಯಾಗುತ್ತಾರೆ.

mangala

ಆದ್ರೆ ಒಬ್ಬ ಮಂಗಳಮುಖಿ ಮಾತ್ರ ಅದೇ ಜಾಗದಲ್ಲಿ ನಿಲ್ಲುತ್ತಾಳೆ. ಅವಳ ಬಳಿ ಹೋದ ಅಧಿಕಾರಿ ನೀನ್ಯಾಕೆ ಈ ಕೆಲಸ ಮಾಡಬೇಕು ಎಂಬುದಾಗಿ ಕೇಳುತ್ತಾರೆ. ಇದಕ್ಕೆ ಆಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? ಮಂಗಳಮುಖಿಯಾಗಿ ಬದಳಾದ ಆತ ಮೊದಲು ಎಂಬಿಬಿಎಸ್ ಮುಗಿಸಿ ವೈದ್ಯ ವೃತ್ತಿ ಮಾಡುತ್ತಿದ್ದ. ಕ್ರಮೇಣ ಹಾರ್ಮೋನ್ ಬದಲಾವಣೆಯಿಂದಾಗಿ ಮಂಗಳಮುಖಿಯಾಗಿ ಬದಲಾಗುತ್ತಾನೆ. ಇದನ್ನು ಗಮನಿಸಿದ ಆಸ್ಪತ್ರೆಯ ಮಾಲಿಕ ಆತನನ್ನು ಕೆಲಸದಿಂದ ತೆಗೆಯುತ್ತಾನೆ. ಈ ಅಮಾನವೀಯ ಕಥೆಯನ್ನು ಕೇಳಿದ ಪೋಲಿಸ್ ಅಧಿಕಾರಿ ಆತನ ವೈದ್ಯ ವೃತ್ತಿಯ ಪ್ರಮಾಣಪತ್ರ ನೋಡಿ ದೃಢಪಡಿಸಿಕೊಂಡು ಸ್ವಂತ ಹಣದಲ್ಲಿ ಕ್ಲಿನಿಕ್ ಒಂದನ್ನು ಕಟ್ಟಿಸಿಕೊಡುತ್ತಾಳೆ. ಇದೀಗ ಆ ಕ್ಲಿನಿಕ್ ನಲ್ಲಿ ವೈದ್ಯ ವೃತ್ತಿ ಮುಂದುವರೆಸುತ್ತಾ, ಬಡವರಿಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಮಂಗಳಮುಖಿ. ಇಂಥ ಪೋಲೀಸ್ ಅಧಿಕಾರಿಗೆ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು!

Comments are closed.