ನಿಮಗೆ ಯಾವ ಹೀರೊಯಿನ್ ಮೇಲೆ ಕ್ರಶ್ ಎಂದು ಕನ್ನಡತಿ ಹೆಸರು ತೆಗೆದುಕೊಂಡ ಬಾಲಯ್ಯ. ಆಯ್ಕೆ ಮಾಡಿದ್ದು ಯಾವ ನಟಿಯನ್ನು ಗೊತ್ತೇ??

ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಯ್ಯ ಅವರು ಟಾಲಿವುಡ್ ನಲ್ಲಿ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಸಹ ಇವರಿಗೆ ಬೇಡಿಕೆ ಇದೆ. ಸೀನಿಯರ್ ಎನ್.ಟಿ.ಆರ್ ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಾಲಯ್ಯ ಅವರು, ತಮ್ಮ ಡಿಫರೆಂಟ್ ಮ್ಯಾನರಿಸಮ್ ಮತ್ತು ಪಂಚ್ ಡೈಲಾಗ್ ಗಳ ಮೂಲಕ ದೊಡ್ಡ ಮಟ್ಟದ ಫ್ಯಾನ್ ಬೇಸ್ ಗಳಿಸಿದ್ದಾರೆ. ಇವರು ಚಿತ್ರರಂಗಕ್ಕೆ ಎಂಟ್ರಿ 3 ದಶಕಕ್ಕಿಂತ ಹೆಚ್ಚಿನ ಸಮಯ ಆಗಿದ್ದರು ಸಹ, ಈಗಲೂ ಅವರಿಗೆ ಅಷ್ಟೇ ದೊಡ್ಡ ಮಟ್ಟದ ಬೇಡಿಕೆ ಇದೆ. ಇತ್ತೀಚೆಗೆ ಇವರು ನಟಿಸಿದ ಅಖಂಡ ಸಿನಿಮಾ ಸೂಪರ್ ಹಿಟ್ ಎನ್ನಿಸಿಕೊಂಡಿದ್ದು. ಸಿನಿಮಾಗಳ ಜೊತೆಗೆ ಬಾಲಯ್ಯ ಅವರು ಆಹಾ ಆಪ್ ಗಾಗಿ ಅನ್ ಸ್ಟಾಪಬಲ್ ಶೋ ನಿರೂಪಣೆ ಮಾಡುತ್ತಿದ್ದರು.

ಈ ಶೋ ಮೊದಲ ಸೀಸನ್ ಸೂಪರ್ ಹಿಟ್ ಆಗಿತ್ತು, ತೆಲುಗಿನ ಸ್ಟಾರ್ ಹೀರೋಗಳು, ಹೀರೋಯಿನ್ ಗಳು ಎಲ್ಲರೂ ಸಹ ಪಾಲ್ಗೊಂಡಿದ್ದರು. ಬಾಲಯ್ಯ ಅವರು ತಮ್ಮ ತಮಾಷೆಯ ಭರಿತ ಮಾತುಗಳಿಂದ ನಿರೂಪಕನಾಗಿ ಸಕ್ಸಸ್ ಕಂಡಿದ್ದರು. ಇದೀಗ ಈ ಶೋನ ಸೆಕೆಂಡ್ ಸೀಸನ್ ಶುರುವಾಗಲಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಅನ್ ಸ್ಟಾಪಬಲ್ 2ನೇ ಸೀಸನ್ ನ ಮೊದಲ ಎಪಿಸೋಡ್ ಪ್ರೋಮೋ ಬಿಡುಗಡೆ ಆಗಿದ್ದು, ಮೊದಲ ಎಪಿಸೋಡ್ ನಲ್ಲಿ ಡಿಜೆ ಟಿಲ್ಲು ಖ್ಯಾತಿಯ ಸಿದ್ದು ಜೊನ್ನಲಾಗಡ್ಡ ಮತ್ತು ವಿಶ್ವಕ್ ಇಬ್ಬರು ಸಹ ಅತಿಥಿಗಳಾಗಿ ಬಂದಿದ್ದಾರೆ. ಈ ಪ್ರೊಮೋನಲ್ಲಿ ಸಿದ್ದು ಮತ್ತು ವಿಶ್ವಕ್ ಇಬ್ಬರು ಸಹ ಬಾಲಯ್ಯ ಅವರಿಗೆ ತಮ್ಮ ಈಗಿನ ಕ್ರಶ್ ಯಾರು ಎಂದು ಕೇಳಿದ್ದಾರೆ..

balayya about rashmika

ತಕ್ಷಣವೆ ಬಾಲಯ್ಯ ಅವರು, ರಶ್ಮಿಕಾ ಮಂದಣ್ಣ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಫೇವರೆಟ್ ಕ್ರಶ್ ರಶ್ಮಿಕಾ ಎಂದು ಹೇಳಿದ್ದಾರೆ. ಈ ಮೂಲಕ ಕನ್ನಡದ ನಟಿಯ ಹೆಸರನ್ನು ಹೇಳಿದ್ದಾರೆ. ಅನ್ ಸ್ಟಾಪಬಲ್ ಶೋ ಮೊದಲ ಸೀಸನ್ ನಲ್ಲಿ ರಶ್ಮಿಕಾ ಅವರು ಗೆಸ್ಟ್ ಆಗಿ ಬಂದಿದ್ದರು. ಆಗ ರಶ್ಮಿಕಾ ಅವರನ್ನು ಕ್ರಶ್ಮಿಕಾ ಎಂದು ಕರೆದು, ರಶ್ಮಿಕಾ ಅವರಿಗಾಗಿ ಕನ್ನಡದಲ್ಲಿ ಒಂದು ಕವಿತೆಯನ್ನು ಸಹ ಹೇಳಿದ್ದರು. ಇನ್ನು ರಶ್ಮಿಕಾ ಅವರ ಬಗ್ಗೆ ಹೇಳುವುದಾದರೆ, ಟಾಲಿವುಡ್, ಕಾಲಿವುಡ್, ಬಾಲಿವುಡ್ ಎಲ್ಲಾ ಇಂಡಸ್ಟ್ರಿಯಲ್ಲು ಬ್ಯುಸಿ ಇರುವ ರಶ್ಮಿಕಾ ನ್ಯಾಷನಲ್ ಕ್ರಶ್ ಎಂದು ಹೆಸರು ಪಡೆದುಕೊಂಡಿದ್ದಾರೆ.

Comments are closed.