Relationship: ಯಾವುದೇ ಪುರುಷ ಹಾಗೂ ಮಹಿಳೆ ಕೇವಲ ಸ್ನೇಹಿತರಾಗಲು ಸಾಧ್ಯವಿಲ್ಲ ಯಾಕೆ ಗೊತ್ತೇ? ಅದೆಂತಹ ಸ್ನೇಹವೇ ಇರಲಿ ಕೊನೆಗೆ ಏನಾಗಲಿದೆ ಗೊತ್ತೇ??

Relationship: ಸ್ನೇಹ ಮತ್ತು ಸಂಬಂಧ ಈ ಎರಡು ಕೂಡ ಬಹಳ ಸ್ಪೆಶಲ್ ಆದದ್ದು. ಇಬ್ಬರು ಹುಡುಗಿಯರು ಒಳ್ಳೆಯ ಸ್ನೇಹಿತೆಯರಾಗುತ್ತಾರೆ, ಸಹೋದರಿಯರ ಹಾಗೆ ಇರುತ್ತಾರೆ.. ಅದೇ ರೀತಿ ಇಬ್ಬರು ಅಥವಾ ಹೆಚ್ಚು ಹುಡುಗರು ಸ್ನೇಹಿಯರಾಗಿ ಸಹೋದರರ ಹಾಗೆ ಇರುತ್ತಾರೆ. ಅದರ ಒಂದು ಹುಡುಗ ಮತ್ತು ಒಂದು ಹುಡುಗಿ ಹೆಚ್ಚಿನ ಸಮಯ ಸ್ನೇಹಿತರಾಗಿ ಇರಲು ಸಾಧ್ಯವಿಲ್ಲ. ಅವರಿಬ್ಬರು ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿ ಅನ್ನಿಸಿದರೂ, ಸಮಯ ಕಳೆದ ಹಾಗೆ ಆ ಭಾವನೆಗಳು ಬದಲಾಗುತ್ತದೆ. ಒಂದು ಹುಡುಗ ಹುಡುಗಿ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಹಲವರು ಹೇಳುತ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ? ತಿಳಿಸುತ್ತೇವೆ ನೋಡಿ..

ಸಮಾಜದ ದೃಷ್ಟಿ :- ಈ ಸಮಾಜ ಎಷ್ಟೇ ಮುಂದುವರೆದಿದ್ದರು ಕೂಡ, ಹುಡುಗ ಹುಡುಗಿಯ ವಿಚಾರಕ್ಕೆ ಬಂದರೆ ತಪ್ಪು ತಿಳಿದುಕೊಳ್ಳುವುದೇ ಹೆಚ್ಚು. ಒಂದು ಹುಡುಗ ಹುಡುಗಿ ಸ್ನೇಹಿತರಾಗಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಿಬ್ಬರ ನಡುವೆ ಬೇರೆಯದೇ ಸಂಬಂಧ ಇದೆ ಎಂದು ಅಂದುಕೊಳ್ಳುವವರೆ ಹೆಚ್ಚು, ಹಾಗಾಗಿ ಹುಡುಗ ಹುಡುಗಿ ಸ್ನೇಹದಿಂದ ದೂರ ಆಗುತ್ತಾರೆ ಎನ್ನುವ ಘಟನೆಗಳು ಸಹ ನಡೆದಿದೆ.
ನೀವಿಬ್ಬರು ಕಮಿಟ್ ಆಗಿದ್ದೀರಾ ಎಂದು ಕೇಳುವ ಪ್ರಶ್ನೆ :- ಈ ಸಮಾಜ ಬೇರೆ ಯಾವುದೇ ವಿಚಾರವನ್ನು ಲೈಟ್ ಆಗಿ ತೆಗೆದುಕೊಂಡರು ಸಹ, ಹುಡುಗ ಹುಡುಗಿ ಜೊತೆಯಾಗಿ ಸಲುಗೆಯಿಂದ ಇದ್ದಾರೆ ಅಂದ್ರೆ, ಅದನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ಹುಡುಗ ಹುಡುಗಿ ಮಾತನಾಡುತ್ತಿದ್ದರೆ, ನೀವಿಬ್ಬರು ಕಮಿಟ್ ಆಗಿದ್ದೀರಾ ಎಂದು ಕೇಳುವವರೇ ಹೆಚ್ಚು. ಈ ಕಾರಣದಿಂದ ಅವರಿಬ್ಬರ ಫ್ರೆಂಡ್ಶಿಪ್ ಮುರಿದುಹೋಗಬಹುದು. ಇದನ್ನು ಓದಿ..Relationship:ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯದ ದೊಡ್ಡ ರಹಸ್ಯಗಳೇನು ಗೊತ್ತೇ? ಇವುಗಳನ್ನು ತಿಳಿದುಕೊಳ್ಳಿ, ಜೀವನವೇ ಬದಲಾಗಿ ಹೋಗುತ್ತದೆ.

relationship coup wom 25 Relationship:

ಭಾವನೆಗಳ ಬದಲಾವಣೆ :- ಹಲವು ಸಾರಿ ಇಬ್ಬರ ಭಾವನೆಗಳು ಬದಲಾಗುತ್ತದೆ. ಹುಡುಗಿಗೆ ಹುಡುಗನ ವಿಚಾರಗಳಲ್ಲಿ ಕಿರಿಕಿರಿ ಆಗುತ್ತಿದೆ ಎಂದುಕೊಳ್ಳಬಹುದು. ಹುಡುಗನಿಗೂ ಇದೇ ರೀತಿ ಆಗಬಹುದು. ಆ ರೀತಿ ಆದಾಗ, ಇಬ್ಬರ ಭಾವನೆಗಳು ಬದಲಾಗಿ, ಈ ಸಂಬಂಧ ಬೇರೆಯದೇ ರೀತಿ ತಿರುಗಬಹುದು. ಇಬ್ಬರು ಪ್ರೀತಿಸಲು ಶುರು ಮಾಡುತ್ತಾರೆ..
ಮದುವೆ :- ಕೆಲವೊಮ್ಮೆ ಒಂದು ಹುಡುಗ ಹುಡುಗಿ ಫ್ರೆಂಡ್ಸ್ ಆಗಿದ್ದರು ಕೂಡ, ಅವರಿಬ್ಬರ ತಂದೆ ತಾಯಿ ಅದರ ಬಗ್ಗೆ ತಿಳಿದುಕೊಂಡು, ಅದು ಸರಿ ಇಲ್ಲ ಎಂದುಕೊಂಡು ಬೇರೆ ಮದುವೆ ಮಾಡುವ ಪ್ರಯತ್ನ ಮಾಡಬಹುದು. ಅಥವಾ ಹುಡುಗ ಹುಡುಗಿ ಇಬ್ಬರಲ್ಲು ಭಾವನೆಗಳು ಬದಲಾಗಿ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರೆ ಮದುವೆ ಆಗೋಣ ಎಂದು ನಿರ್ಧಾರ ಮಾಡಬಹುದು.

ಸಿನಿಮಾ ಮತ್ತು ಕಾದಂಬರಿ ಪ್ರಭಾವ :- ಹಲವು ಸಿನಿಮಾಗಳಲ್ಲಿ ಸ್ನೇಹ ಪ್ರೀತಿಯಲ್ಲಿ ಕೊನೆಯಾಗುತ್ತದೆ. ಹೀರೋ ಹೀರೋಯಿನ್ ಮೊದಲಿಗೆ ಫ್ರೆಂಡ್ಸ್ ಆಗಿದ್ದು, ನಂತರ ಪ್ರೀತಿಸಲು ಶುರು ಮಾಡುತ್ತಾರೆ.. ಇಂಥಹ ಸಿನಿಮಾಗಳು ಹುಡುಗ ಹುಡುಗಿಯರ ಮೇಲೆ ಪ್ರಭಾವ ಬೀರುತ್ತದೆ. ಆಗ ಅವರಿಬ್ಬರು ಸ್ನೇಹವನ್ನು ಪ್ರೀತಿ ಎಂದು ಅಂದುಕೊಳ್ಳುತ್ತಾರೆ. ಈ ಒಂದು ಕಾರಣದಿಂದ ಕೂಡ ಹುಡುಗ ಹುಡುಗಿ ಸ್ನೇಹಿತರಾಗಿ ಇರಲು ಆಗುವುದಿಲ್ಲ. ಇದನ್ನು ಓದಿ.. Relationship: ಮದುವೆಯ ಹಿಂದಿನ ರಾತ್ರಿಯೇ ವಧುವಿನ ಮನಸಿನಲ್ಲಿ ಮೂಡುವ ಆಲೋಚನೆಗಳನ್ನು ತಿಳಿದರೆ, ಮೈ ಎಲ್ಲಾ ಬೆವರು ಬರುತ್ತದೆ. ಏನೆಲ್ಲಾ ಆಲೋಚನೆ ಮಾಡ್ತಾರೆ ಗೊತ್ತೆ?

Comments are closed.