Kannada News: ಮದುವೆಗೆ ಅಡ್ಡ ಆಗಿ, ಡೈವೋರ್ಸ್ ಕೊಡಲ್ಲ ಎನ್ನುತ್ತಿರುವ ಮೂರನೇ ಪತ್ನಿಗೆ ಶಾಕ್ ಕೊಟ್ಟ ನರೇಶ್. ಯಾವ ಮಟ್ಟಕ್ಕೆ ಇಳಿದಿದ್ದಾರೆ ಗೊತ್ತೇ?

Kannada News: ದಿನದಿಂದ ದಿನಕ್ಕೆ ನಟ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಇದೀಗ ಈ ವಿಚಾರಕ್ಕೆ ಬೇರೆಯದೇ ಟ್ವಿಸ್ಟ್ ನೀಡಿದ್ದಾರೆ ನಟ ನರೇಶ್. 2023ರ ಹೊಸ ವರ್ಷದ ಸಮಯದಲ್ಲಿ ನರೇಶ್ ಅವರು ಒಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ಹೊಸ ವರ್ಷದ ಆಚರಣೆಯಲ್ಲಿದ್ದ ನರೇಶ್ ಪವಿತ್ರಾ ಮುತ್ತು ಕೊಟ್ಟು, ಶೀಘ್ರದಲ್ಲೇ ಮದುವೆ ಆಗುವುದಾಗಿ ಸುದ್ದಿಯನ್ನು ರಿವೀಲ್ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು.

ಈ ವಿಡಿಯೋ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupati) ಅವರು ಪ್ರತಿಕ್ರಿಯೆ ನೀಡಿ, ಈ ಮದುವೆ ಆಗಲು ನಾನು ಬಿಡುವುದಿಲ್ಲ, ನರೇಶ್ ನನಗೆ ವಿಚ್ಛೇದನ ನೀಡಿಲ್ಲ. ಮದುವೆ ಆಗೋದಕ್ಕೆ ಹೇಗೆ ಸಾಧ್ಯ ಎಂದು ಹೇಳಿಕೆ ನೀಡಿದ್ದರು. ಮಗನಿಗೆ ಪ್ರಾಮಿಸ್ ಮಾಡಿದ್ದೀನಿ, ನಾನು ವಿಚ್ಛೇದನ ಕೊಡೋದಿಲ್ಲ ಎಂದು ಹೇಳಿದ್ದರು. ಆದರೆ ಈಗ ನರೇಶ್ ಅವರು ರಮ್ಯಾ ರಘುಪತಿ ಅವರ ಬಗ್ಗೆ ಗಂಭೀರವಾದ ಅಪವಾದ ಮಾಡಿದ್ದಾರೆ. ರಮ್ಯಾ ರಘುಪತಿ ತನ್ನನ್ನು ಮುಗಿಸಲು ಸ್ಕೆಚ್ ಹಾಕುತ್ತಿದ್ದಾರೆ, ತನ್ನ ಆಸ್ತಿಯ ಮೇಲೆ ಕಣ್ಣು ಹಾಕಿದ್ದಾರೆ, ಗ್ಯಾಂಗ್ ಒಂದಕ್ಕೆ ಸುಪಾರಿ ನೀಡಿದ್ದಾರೆ. ಇದನ್ನು ಓದಿ..Kannada News: ದೀಪಿಕಾ ಪಡುಕೋಣೆ ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿರುವ ನಟರು ಯಾರು ಗೊತ್ತೇ?? ಆತನೊಂದಿಗೆ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ…

naresh pavithra marriage updates kannada news Kannada News:

ಕಳೆದ ವರ್ಷ ಆ ಗ್ಯಾಂಗ್ ತಮ್ಮ ಮನೆಯ ಸುತ್ತಲೂ ಇತ್ತು, ಆ ಗ್ಯಾಂಗ್ ಕಳಿಸಿರುವುದು ತಮ್ಮನ್ನು ಮುಗಿಸಲು, ಹಾಗಾಗಿ ತಮಗೆ ರಕ್ಷಣೆ ಬೇಕು, ಹಾಗೆಯೇ ಪತ್ನಿಯಿಂದ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲೇರಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಾಜಿ ಮಾಡಿಕೊಳ್ಳುವುದಕ್ಕೆ ರಮ್ಯಾ ರಘುಪತಿ ಅವರು 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಕೂಡ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ದಿನದಿಂದ ದಿನಕ್ಕೆ ಬೇರೆಯದೇ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಸಧ್ಯಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಜೊತೆಯಾಗಿ ವಾಸ ಮಾಡುತ್ತಿದ್ದು, ವಿಚ್ಚೇದನ ಪಡೆಯದೆ, ಪವಿತ್ರ ಅವರನ್ನು ಮದುವೆಯಾಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ನಡೆಯುತ್ತಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಅರ್ಧ ಬಂದ ಬಟ್ಟೆ ಹಾಕಿ ಬಂದ ರಶ್ಮಿಕಾ; ಆ ಪಾರ್ಟ್ ಕಾಣಿಸಿದಾಗ ಎಲ್ಲರೂ ಶಾಕ್. ಮುಜುಗರದಿಂದ ರಶ್ಮಿಕಾ ಏನು ಮಾಡಿದರು ಗೊತ್ತೇ??

Comments are closed.