Kannada News: ತೆಲುಗಿನಲ್ಲಿ ಬಾಲಯ್ಯ ರವರಿಗೆ ನಡೆಯುತ್ತಿದೆ ಮಹಾಮೋಸ. ನೂರು ಕೋಟಿ ಗಳಿಸುವ ಹೀರೋ ಆದರೂ, ಒಳ್ಳೆ ತನವೇ ಇವರಿಗೆ ಅಡ್ಡ. ಏನಾಗಿದೆ ಗೊತ್ತೇ?

Kannada News: ತೆಲುಗು ಚಿತ್ರರಂಗ ಈಗ ಎತ್ತರಕ್ಕೆ ಏರಿದೆ. ಇಲ್ಲಿನ ಕಲಾವಿದರು ಈಗ ಕೋಟಿಗಟ್ಟಲೆ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈಗ ಪ್ಯಾನ್ ಇಂಡಿಯಾ ಪ್ರಪಂಚ ನಡೆಯುತ್ತಿದೆ. ನಟ ಯಶ್ ಅವರು ಒಂದು ಸಿನಿಮಾಗೆ 100 ಕೋಟಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ತಮಿಳಿನ ಖ್ಯಾತ ನಟ ವಿಜಯ್ ಅವರು ಕೆಲ ವರ್ಷಗಳಿಂದ ತಮ್ಮ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಪುಷ್ಪ ಸಿನಿಮಾ ಹಿಟ್ ಆದ ಕಾರಣ ಅಲ್ಲು ಅರ್ಜುನ್ ಅವರ ಸಂಭಾವನೆ ಕೂಡ ದುಪ್ಪಟ್ಟಾಗಿದೆ.

ನಟ ಪ್ರಭಾಸ್ ಅವರು ಕೂಡ ಒಂದು ಸಿನಿಮಾಗೆ 100 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ನಟರಾದ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಇಬ್ಬರು ಕೂಡ ಆರ್.ಆರ್.ಆರ್ ಸಿನಿಮಾ ಸೂಪರ್ ಹಿಟ್ ಆದ ನಂತರ 100 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ವಾಲ್ಟರ್ ವೀರಯ್ಯ ಸಿನಿಮಾ ಹಿಟ್ ಆದ ಕಾರಣ ಅವರು ಕೂಡ ತಮ್ಮ ಸಂಭಾವನೆಯನ್ನು 70 ರಿಂದ 80 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ಆದರೆ ತೆಲುಗಿನ ಸ್ಟಾರ್ ನಟ ಬಾಲಯ್ಯ ಅವರು ಮಾತ್ರ ಸಂಭಾವನೆ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಇದನ್ನು ಓದಿ..Kannada News: ಆ ಹೀರೋ ಮೇಲಿನ ಆಸೆಯಿಂದ ನೇರವಾಗಿ ತನ್ನ ಮದುವೆ ಕ್ಯಾನ್ಸಲ್ ಮಾಡಿ ಕೊಂಡ ತಮ್ಮನ್ನ. ಕಾರಣ ಏನಂತೆ ಗೊತ್ತೇ??

kannada news balayya remuneration Kannada News:

ಬಾಲಯ್ಯ ಅವರು ಯಾವತ್ತಿಗೂ ಕೂಡ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿಲ್ಲ, ನಿರ್ಮಾಪಕರ ಬಳಿ ಇಷ್ಟು ಸಂಭಾವನೆ ಬೇಕೇ ಬೇಕು ಎಂದು ಅವರು ಡಿಮ್ಯಾಂಡ್ ಮಾಡಿದ್ದು ಇಲ್ಲ. ಬಾಲಯ್ಯ ಅವರು ಸಿನಿಮಾ ಹಿಟ್ ಆದರೆ ಕೆಲವು ಕೋಟಿ ಹೆಚ್ಚು ಸಂಭಾವನೆ ಪಡೆಯುತ್ತಾರೆ, ಫ್ಲಾಪ್ ಆದರೆ ಸಂಭಾವನೆಯನ್ನು ಕೂಡ ಹಿಂದಿರುಗಿಸಿ ಬಿಡುತ್ತಾರೆ. ಅಂತಹ ದೊಡ್ಡ ಗುಣ ಅವರದ್ದು. ಕೆಲವು ಸಿನಿಮಾ ನಿರ್ಮಾಪಕರು ಇವರಿಗೆ ಸಂಭಾವನೆ ಜಾಸ್ತಿ ಕೊಡುವುದಿರಲಿ, ಕೆಲವು ಸಿನಿಮಾಗಳಿಗೆ ಅರ್ಧ ಸಂಭಾವನೆ ನೀಡಿ, ಕೆಲಸ ಮಾಡಿಸಿಕೊಳ್ಳುತ್ತಾರೆ. ಅಸಲಿಗೆ ಬಾಲಯ್ಯ ಅವರಿಗೆ ಹೆಚ್ಚು ಸಂಭಾವನೆ ಕೊಡಬೇಕು ಎನ್ನುವುದು ಅಭಿಮಾನಿಗಳ ಅಭಿಪ್ರಾಯ ಕೂಡ ಆಗಿದೆ. ಇದನ್ನು ಓದಿ..Kannada News: 57 ವರ್ಷದ ಶಾರುಖ್ ಖಾನ್ ಗೆ ಡೇಟಿಂಗ್ ಆಫರ್ ಕೊಟ್ಟ ಯುವತಿ: ಷಾಕಿಂಗ್ ಉತ್ತರ ಕೊಟ್ಟ ಶಾರುಖ್ ಹೇಳಿದ್ದೇನು ಗೊತ್ತೇ??

Comments are closed.