Kannada News: ಇವರ ಸಾಧನೆಯ ಬದುಕು ತೋರಿಸಲು ಒಂದು ದಿನ ಸಾಕಾಗಿಲ್ಲ, ಮತ್ತೊಂದು ದಿನ ಎಪಿಸೋಡ್ ಮಾಡಿ ಎಂದ ಫ್ಯಾನ್ಸ್. ಅಭಿಮಾನಿಗಳ ಬೇಡಿಕೆ ಯಾರ ಬಗ್ಗೆ ಗೊತ್ತೇ??

Kannada News: ಕನ್ನಡದ ಕಿರುತೆರೆ ವೀಕ್ಷಕರು ಬಹಳ ಇಷ್ಟಪಡುವ ಶೋ ವೀಕೆಂಡ್ ವಿತ್ ರಮೇಶ್ (Weekend With Ramesh). ಈ ಶೋ ಈಗ 4 ಸೀಸನ್ ಮುಗಿಸಿದ್ದು, 5ನೇ ಸೀಸನ್ ನಡೆಯುತ್ತಿದೆ. ಈಗಾಗಲೇ ಮೂರು ವಾರಗಳ ಸಂಚಿಕೆಗಳು ಮುಗಿದಿದ್ದು, 4 ಸಾಧಕರ ಕಥೆ ವೀಕ್ಷಕರ ಎದುರು ಬಂದಿದೆ. ರಮ್ಯಾ (Ramya) ಅವರು ಮೊದಲ ವಾರ, ಪ್ರಭುದೇವ (Prabhudeva) ಅವರು ಎರಡನೇ ವಾರ ಸಾಧಕರ ಸೀಟ್ ನಲ್ಲಿ ಕುಳಿತಿದ್ದರು.

fans demands weekend with ramesh should show one more episode Kannada News:

ಮೂರನೇ ವಾರ ಜಯದೇವ ಹೈದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ (Dr Manjunath) ಅವರು ಹಾಗೂ ಹಿರಿಯ ನಟ ದತ್ತಣ್ಣ (Dattanna) ಅವರು ಸಾಧಕರ ಸೀಟ್ ಅಲಂಕರಿಸಿದ್ದರು. ಅವರಿಬ್ಬರ ಜೀವನದ ಕಥೆ ಜನರಿಗೆ ಬಹಳ ಇಷ್ಟವಾಗಿದೆ. ಇಬ್ಬರದ್ದು ಒಂದೊಂದು ಸಂಚಿಕೆಗಳಲ್ಲಿ ಅವರ ಜೀವನದ ಕಥೆಯನ್ನು ವೀಕ್ಷಕರ ಎದುರು ತೆರೆದಿಡಲಾಯಿತು. ಆದರೆ ಅವರ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದು ವೀಕ್ಷಕರಿಗೆ ಅನ್ನಿಸಿದೆ. ಇದನ್ನು ಓದಿ..Film News: ಯಶಸ್ಸಿನ ಹಾದಿ ಹಿಡಿಯಲು KGF ಚಿತ್ರದ ಕಾನ್ಸೆಪ್ಟ್ ಕದ್ದು ಬಿಟ್ಟ ಪುಷ್ಪ ಅಂಡ್ ಟೀಮ್: ಕೊನೆಗೆ ಬಹಿರಂಗವಾಯ್ತು ಅಸಲಿ ಸ್ಕೆಚ್. ಏನಾಗಿದೆ ಗೊತ್ತೇ??

ಡಾ.ಮಂಜುನಾಥ್ ಅವರ ಜೀವನದ ಕಥೆಗಳು, ಅವರ ಸಾಧನೆಯ ಹಾದಿ ಜನರಿಗೆ ಸ್ಪೂರ್ತಿದಾಯಕವಾಗಿತ್ತು. ಇನ್ನು ದತ್ತಣ್ಣ ಅವರ ಜೀವನದ ಕಥೆ ಕೂಡ ಹಾಗೆಯೇ ಇತ್ತು, ದತ್ತಣ್ಣ ಅವರು 10ನೇ ತರಗತಿಯಲ್ಲಿ ಸ್ಟೇಟ್ ಟಾಪರ್, ಪಿಯುಸಿಯಲ್ಲಿ ಎರಡನೇ ಟಾಪರ್, ದೊಡ್ಡ ಕಂಪನಿಯಲ್ಲಿ ಕೆಲಸ ಸಿಕಿದೆ, ಜೊತೆಗೆ ಸಿನಿಮಾ ರಂಗದಲ್ಲೂ ಇಷ್ಟು ಯಶಸ್ಸು ಪಡೆದಿದ್ದಾರೆ. ಜೊತೆಗೆ, ದತ್ತಣ್ಣ ಅವರು ಮದುವೆಯಾಗದೆ ಇರುವುದಕ್ಕೆ ಕಾರಣ ಏನು ಎಂದು ಎಲ್ಲರಲ್ಲೂ ಪ್ರಶ್ನೆ ಇತ್ತು..

ಅದಕ್ಕೆಲ್ಲಾ ವೀಕೆಂಡ್ ವಿತ್ ರಮೇಶ್ ಸಂಚಿಕೆಯಲ್ಲಿ ಉತ್ತರ ಸಿಕ್ಕಿದ್ದು, ಜನರಿಗೆ ಇವರಿಬ್ಬರ ಸಂಚಿಕೆಗಳನ್ನು ಇನ್ನಷ್ಟು ನೋಡಬೇಕು ಎಂದು ಅನ್ನಿಸಿ, “ಛೇ.. ಡಾ.ಮಂಜುನಾಥ್ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ 2 ದಿನ ಇರಬೇಕಿತ್ತು. ಚಿತ್ರನಟರ ಜೀವನ ಕಥೆಗಿಂತ ಇಂಥವರ ಜೀವನ ಸಾಧನೆ ಹೆಚ್ಚೆಚ್ಚು ಪ್ರೇರಣೆ. ದತ್ತಣ್ಣ ನವರ ಜೀವನಗಾಥೆ ಕೂಡ ಎರಡು ದಿನ ಬರಬೇಕಿತ್ತು..” ಎನ್ನುತ್ತಿದ್ದಾರೆ. ಹಾಗೆಯೇ, ಕಟ್ ಮಾಡಿರುವ ದೃಶ್ಯಗಳು ಇದ್ದರೆ ಅದನ್ನು ಟೆಲಿಕಾಸ್ಟ್ ಮಾಡಿ ಎನ್ನುತ್ತಿದ್ದಾರೆ. ಅಭಿಮಾನಿಗಳ ಬೇಡಿಕೆಯನ್ನು ಜೀವಾಹಿನಿ ಈಡೇರಿಸುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.