Kannada News: ನೆಟ್ಟಿಗರನ್ನು ಸೋಲಿಸಿ, ಹಣ ಗಳಿಸಲು ಹೊಸ ಹಾದಿ ಹಿಡಿದ ಸಲ್ಮಾನ್ ಹಾಗೂ ಶಾರುಖ್ ಖಾನ್. ಬಾಲಿವುಡ್ ಖಾನ್ ಗಳಿಗೆ ಎಂತಹ ಪರಿಸ್ಥಿತಿ ಬಂದಿದೆ ಗೊತ್ತೇ?

Kannada News: ಬಾಲಿವುಡ್ (Bollywood) ನ ಇಬ್ಬರು ಖಾನ್ ಗಳು ಶಾರುಖ್ ಖಾನ್ (Shahrukh Khan) ಹಾಗೂ ಸಲ್ಮಾನ್ ಖಾನ್ (Salman Khan), ಇವರಿಬ್ಬರು ಸಹ ಬಾಲಿವುಡ್ ನಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಇವರಿಬ್ಬರಿಗೆ, ಕ್ಲಾಸ್ ಮತ್ತು ಮಾಸ್ ಎರಡು ರೀತಿಯ ಅಭಿಮಾನಿಗಳಿದ್ದಾರೆ. ನಮ್ಮ ದೇಶ ಮಾತ್ರವಲ್ಲದೆ, ಹೊರದೇಶದಲ್ಲಿ ಸಹ ಅಭಿಮಾನಿಗಳಿದ್ದಾರೆ.

sharukh salman latest updates kannada news Kannada News:

ನಟ ಶಾರುಖ್ ಖಾನ್ ಅವರಿಗೆ ಬಹಳ ವರ್ಷಗಳಿಂದ ಒಳ್ಳೆಯ ಹಿಟ್ ಸಿಕ್ಕಿರಲಿಲ್ಲ, ಆದರೆ ಈ ವರ್ಷ ಜನವರಿ 25ರಂದು ತೆರೆಕಂಡ ಪಠಾಣ್ (Pathaan) ಸಿನಿಮಾ ಶಾರುಖ್ ಖಾನ್ ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ನೀಡಿತು. ಈ ಸಿನಿಮಾ ದುಬಾರಿ ಹಣಗಳಿಕೆ ಮಾಡಿತು. ಪಠಾಣ್ ನಲ್ಲಿ ನಟ ಸಲ್ಮಾನ್ ಖಾನ್ ಅವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಕೂಡ ಫುಲ್ ಧೂಳೆಬ್ಬಿಸಿದ್ದರು. ಇದನ್ನು ಓದಿ..Kannada News: ಇವರ ಸಾಧನೆಯ ಬದುಕು ತೋರಿಸಲು ಒಂದು ದಿನ ಸಾಕಾಗಿಲ್ಲ, ಮತ್ತೊಂದು ದಿನ ಎಪಿಸೋಡ್ ಮಾಡಿ ಎಂದ ಫ್ಯಾನ್ಸ್. ಅಭಿಮಾನಿಗಳ ಬೇಡಿಕೆ ಯಾರ ಬಗ್ಗೆ ಗೊತ್ತೇ??

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ ಎನ್ನುವ ವಿಚಾರ ನಮಗೆ ಈಗಾಗಲೇ ಗೊತ್ತೇ ಇದೆ, ಇನ್ನು ಸಲ್ಮಾನ್ ಖಾನ್ ಅವರ ಟೈಗರ್3 ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರನ್ನು ಟೈಗರ್3 ಸಿನಿಮಾದಲ್ಲಿ ಮತ್ತೆ ನೋಡೋದಕ್ಕೆ ಅಭಿಮಾನಿಗಳು ಕಾಯುತ್ತ ಇದ್ದಾರೆ, ಹಾಗಿದ್ದಾಗಲೇ ಈ ಜೋಡಿ ಮತ್ತೊಂದು ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ..

ಈ ಸಿನಿಮಾಗೆ ಪಠಾಣ್ ವರ್ಸಸ್ ಟೈಗರ್ (Pathaan vs Tiger) ಎಂದು ಹೆಸರಿಡಲಾಗುತ್ತಿದ್ದು, ಈ ಸಿನಿಮಾಗಾಗಿ ಇವರಿಬ್ಬರು ಸಂಭಾವನೆ ಪಡೆಯುತ್ತಿಲ್ಲ ಬದಲಾಗಿ ಇಬ್ಬರು ಕೂಡ ಲಾಭದಲ್ಲಿ ತಲಾ 40% ಶೇರ್ ಪಡೆಯುತ್ತಾರೆ ಎನ್ನಲಾಗಿದೆ, ಯಶ್ ರಾಜ್ ಫಿಲ್ಮ್ಸ್ (Yash Raj Films) ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈಗ ಹೀರೋಗಳು ಸಂಭಾವನೆಗಿಂತ ಲಾಭದಲ್ಲಿ ಶೇರ್ ಪಡೆಯುವುದು ಅಭ್ಯಾಸವಾಗುತ್ತಿದ್ದು, ಒಬ್ಬರಿಗೆ ಹೆಚ್ಚು, ಒಬ್ಬರಿಗೆ ಕಡಿಮೆ ಸಂಭಾವನೆ ಎನ್ನುವುದಕ್ಕಿಂತ, ಇದೇ ಸರಿ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.