Meghana Raj: ರಾಜಕೀಯಕ್ಕೆ ಕರುನಾಡಿನ ಅತ್ತಿಗೆ ಬರುತ್ತಾರೆ ಎನ್ನುವ ಸುದ್ದಿ ಬೆನ್ನಲ್ಲೇ, ಇರುವುದನ್ನು ಇದ್ದ ಹಾಗೆ ಒಪ್ಪಿಕೊಂಡ ಮೇಘನಾ ರಾಜ್. ಹೇಳಿದ್ದೇನು ಗೊತ್ತೇ??
Meghana Raj: ನಟಿ ಮೇಘನಾ ರಾಜ್ ಅವರು ಈಗ ಮಗು ರಾಯನ್ ರಾಜ್ ಸರ್ಜಾ ಅವರನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಇದೀಗ ನಟನೆಗೂ ಕಂಬ್ಯಾಕ್ ಮಾಡುತ್ತಿದ್ದಾರೆ. ಮೇಘನಾ ರಾಜ್ ಅವರ ಮುಂದಿನ ಸಿನಿಮಾ ಹೆಸರು ತತ್ಸಮ ತದ್ಭವ (Tatsama Tadbhava). ಫಸ್ಟ್ ಲುಕ್ ಪೋಸ್ಟರ್ ಇಂದಲೇ ಈ ಸಿನಿಮಾ ಬಹಳಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿತ್ತು. ಇದೀಗ ತತ್ಸಮ ತದ್ಭವ ಚಿತ್ರತಂಡದಿಂದ ಪ್ರೆಸ್ ಮೀಟ್ ನಡೆಸಿದ್ದಾರೆ..

ಪ್ರೆಸ್ ಮೀಟ್ ನಲ್ಲಿ ಮೇಘನಾ ರಾಜ್ ಅವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಚಿತ್ರರಂಗಕ್ಕೆ ಬಂದು ಬಹಳಷ್ಟು ವರ್ಷಗಳು ಕಳೆದಿವೆ. 8 ವರ್ಷಗಳ ಕಾಲ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಎರಡೇ ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದ ಕಾರಣ, ಒಂಟಿಯಾದ ಮೇಘನಾ ಅವರ ಜೀವನಕ್ಕೆ ಹೊಸ ಬೆಳಕು ತಂದಿದ್ದು ಮಗ ರಾಯನ್ ರಾಜ್ ಸರ್ಜಾ (Raayan Raj Sarja). ಇದನ್ನು ಓದಿ..Kannada News: ನೆಟ್ಟಿಗರನ್ನು ಸೋಲಿಸಿ, ಹಣ ಗಳಿಸಲು ಹೊಸ ಹಾದಿ ಹಿಡಿದ ಸಲ್ಮಾನ್ ಹಾಗೂ ಶಾರುಖ್ ಖಾನ್. ಬಾಲಿವುಡ್ ಖಾನ್ ಗಳಿಗೆ ಎಂತಹ ಪರಿಸ್ಥಿತಿ ಬಂದಿದೆ ಗೊತ್ತೇ?
ಈಗ ಮೇಘನಾ ರಾಜ್ ಅವರು ಹೆಚ್ಚಾಗಿ ಮಗನ ಜೊತೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಮಗು ಸ್ವಲ್ಪ ದೊಡ್ಡವನಾಗಿರುವ ಕಾರಣ, ಸಿನಿಮಾದಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ. ಮೇಘನಾ ರಾಜ್ ಅವರ ಈ ಸಿನಿಮಾವನ್ನು ಅವರ ಫ್ರೆಂಡ್ ಪನ್ನಗ ಭರಣ (Pannaga Bharana) ಅವರು ನಿರ್ಮಾಣ ಮಾಡಿದ್ದಾರೆ. ಪ್ರೆಸ್ ಮೀಟ್ ನಲ್ಲಿ ಮೇಘನಾ ರಾಜ್ ಅವರ ಬಗ್ಗೆ ಒಂದು ವಿಷಯದ ಬಗ್ಗೆ ಕುತೂಹಲ ಇತ್ತು. ಮೇಘನಾ ಅವರು ರಾಜಕೀಯಕ್ಕೆ ಬರುತ್ತಾರಾ ಎನ್ನುವ ಸುದ್ದಿಯೊಂದು ಈಗ ಹರಿದಾಡುತ್ತಿದೆ. ರಾಜ್ಯದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದು, ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುತ್ತಿದ್ದಾರೆ.
ಅದೇ ರೀತಿ ಮೇಘನಾ ಅವರು ಏನಾದರೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆ ಶುರುವಾಗಿದ್ದು, ಅದಕ್ಕೆ ಮೇಘನಾ ರಾಜ್ ಅವರೇ ಉತ್ತರ ಕೊಟ್ಟಿದ್ದು, “ಜನಸೇವೆ ಮಾಡುವುದು ತುಂಬಾ ಒಳ್ಳೆಯ ವಿಷಯ, ಜನರ ಸೇವೆ ಮಾಡಲು ರಾಜಕೀಯ ಒಳ್ಳೆಯ ವೇದಿಕೆ..ಆದರೆ ನಾನು ರಾಜಕೀಯಕ್ಕೆ ಬರುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ..” ಎಂದಿದ್ದಾರೆ ಮೇಘನಾ ರಾಜ್. ಇದನ್ನು ಓದಿ..Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?
Comments are closed.