Upasana Kammineni: ಅಪೋಲೋ ಆಸ್ಪತ್ರೆ ಒಡತಿ, ಸಾವಿರಾರು ಕೋಟಿಯ ಒಡತಿ: ಶ್ರೀಮಂತಕ್ಕೆ ಧರಿಸಿದ್ದ ಬೆಲೆ ಕೇಳಿದರೆ, ನಿಜಕ್ಕೂ ಮೈಯೆಲ್ಲಾ ಜುಮ್ ಅನ್ನುತ್ತದೆ. ಎಷ್ಟು ಗೊತ್ತೆ?
Upasana Kammineni: ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಮಗ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರು ತಂದೆ ತಾಯಿ ಆಗುತ್ತಿದ್ದಾರೆ ಎನ್ನುವ ವಿಷಯವನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ರಿವೀಲ್ ಮಾಡಿದರು. ಮದುವೆಯಾಗಿ 10 ವರ್ಷಗಳ ನಂತರ ಈ ಜೋಡಿ ತಂದೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದರು. ಇದೀಗ ಉಪಾಸನಾ ಅವರ ಸೀಮಂತ ಶಾಸ್ತ್ರ ನಡೆದಿದೆ.

ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರು ಕೂಡ ಈಗ ತಮ್ಮ ಕೆಲಸಗಳಿಂದ ಬಿಡುವು ಪಡೆದು ಬೇಬಿ ಶವರ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಈ ಜೋಡಿಗೆ ವಿಶ್ ಮಾಡಲು ಸಾಕಷ್ಟು ಗಣ್ಯರು ಬಂದಿದ್ದರು. ಚಿತ್ರರಂಗದ ಖ್ಯಾತರಾದ ಅಲ್ಲು ಅರ್ಜುನ್ ಹಾಗೂ ಇನ್ನಿತರರು ಬಂದಿದ್ದರು. ಹಾಗೆಯೇ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಸಿಂಗರ್ ಕನ್ನಿಕಾ ಕಪೂರ್ ಸೇರಿದಂತೆ ಬಹಳಷ್ಟು ಸೆಲೆಬ್ರಿಟಿಗಳು ಹಾಜರಿದ್ದರು. ಹಾಗೆಯೇ ಇಡೀ ಮೆಗಾ ಕುಟುಂಬ ಕೂಡ ಇತ್ತು.
ಈ ಕಾರ್ಯಕ್ರನ ಖಾಸಗಿಯಾಗಿ ಬಹಳ ಸುಂದರವಾಗಿ ನಡೆದಿದೆ. ಸೀಮಂತ ಶಾಸ್ತ್ರದಲ್ಲಿ ಉಪಾಸನಾ ಅವರು ಧರಿಸಿದ್ದ ಡ್ರೆಸ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಉಪಾಸನಾ ಅವರು ಪಿಂಕ್ ಬಣ್ಣದ ಫ್ರಾಕ್ ಥರದ ಡ್ರೆಸ್ ಧರಿಸಿದ್ದರು. ಈ ಡ್ರೆಸ್ ನಲ್ಲಿ ಬಹಳ ಸುಂದರವಾಗಿ ಜೊತೆಗೆ ರಿಚ್ ಲುಕ್ ನಲ್ಲಿ ಕಾಣಿಸಿಕೊಂಡರು ಉಪಾಸನಾ. ಈ ಪಿಂಕ್ ಬಣ್ಣದ ಡ್ರೆಸ್ ಗೆ ಅದೇ ಬಣ್ಣದಲ್ಲಿ ವರ್ಕ್ ಮಾಡಲಾಗಿತ್ತು. ನೋಡಲು ಒಳ್ಳೆಯ ಲುಕ್ ಕೊಡುತ್ತಿತ್ತು. ಇದು ಲಂಡನ್ ನ ಥ್ರೆಡ್ ಅಂಡ್ ನೀಡಲ್ಸ್ ಸಂಸ್ಥೆಯ ಉಡುಗೆ ಆಗಿದೆ.
ಇದೇ ಬ್ರ್ಯಾಂಡ್ ನ ಡ್ರೆಸ್ ಅನ್ನು ಗರ್ಭಿಣಿ ಆದಮೇಲೆ ಉಪಾಸನಾ ಅವರು ಹೆಚ್ಚಾಗಿ ಧರಿಸುತ್ತಿದ್ದಾರೆ. ಇದು ಗರ್ಭಿಣಿಯರಿಗೆ ಕಂಫರ್ಟಬಲ್ ಆಗಿರುವ ಡ್ರೆಸ್ ಆಗಿದ್ದು, ಧರಿಸಲು ಕಷ್ಟವಾಗದೆ, ಬಹಳ ಚೆನ್ನಾಗಿರುತ್ತದೆಯಂತೆ. ಈ ಡ್ರೆಸ್ ನ ಬೆಲೆ ಎಷ್ಟು ಎಂದು ನೋಡುವುದಾದರೆ, ನಮ್ಮ ಭಾರತ ರೂಪಾಯಿಯ ಬೆಲೆಯಲ್ಲಿ ₹96000 ರೂಪಾಯಿ ಎಂದು ಹೇಳಲಾಗುತ್ತಿದೆ. ಇಷ್ಟು ದುಬಾರಿ ಬೆಲೆಯ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಉಪಾಸನಾ.
Comments are closed.