Pushpa 2: ಅಲ್ಲೂ ಅರ್ಜುನ್ ಗಿಂತ ಮುನ್ನ ಪುಷ್ಪ ಆಫರ್ ಬಂದಿದ್ದು ಯಾರಿಗೆ ಗೊತ್ತೇ?? ಬೇಡ ಅಂತ ರಿಜೆಕ್ಟ್ ಮಾಡಿದ ಟಾಪ್ ನಟ ಯಾರು ಗೊತ್ತೇ?
Pushpa 2: ಚಿತ್ರರಂಗದಲ್ಲಿ ಎಲ್ಲರು ಅಂದುಕೊಂಡ ಹಾಗೆ ಯಾವುದು ನಡೆಯುವುದಿಲ್ಲ. ಎಲ್ಲವೂ ಬೇರೆ ರೀತಿಯಲ್ಲೇ ನಡೆಯುತ್ತದೆ. ಕೆಲವೊಮ್ಮೆ ನಿರ್ದೇಶಕರು ಸಿನಿಮಾ ಕಥೆ ತಯಾರಿಸುವಾಗ, ಮನಸ್ಸಿನಲ್ಲಿ ಒಬ್ಬ ಹೀರೋ ಅನ್ನು ಚಿತ್ರಿಸಿ ಕಥೆ ಹೆಣೆಯುತ್ತಾರೆ, ಆದರೆ ಆ ಹೀರೊಗೆ ಕಥೆ ಹೇಳಿದಾಗ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳೋಕೆ ಆಗೋದಿಲ್ಲ, ಕೆಲವೊಮ್ಮೆ ಸ್ಟಾರ್ ಹೀರೋಗಳು ರಿಜೆಕ್ಟ್ ಮಾಡಿದ ಕಥೆ, ಮತ್ತೊಬ್ಬ ಸ್ಟಾರ್ ಹೀರೋ ಗೆ ಹೋಗಿ, ಆ ಸಿನಿಮಾ ಸೂಪರ್ ಹಿಟ್ ಆಗಿರುವ ಬಹಳಷ್ಟು ಉದಾಹರಣೆ ಇದೆ..

ಸಿನಿಮಾ ಹಿಟ್ ಆದ ಬಳಿಕ ರಿಜೆಕ್ಟ್ ಮಾಡಿದವರು, ಪಶ್ಚತಾಪ ಪಟ್ಟಿರುವುದು ಕೂಡ ನಡೆದಿದೆ. ಅದೇ ಸಾಲಿಗೆ ಸೇರುವ ಸಿನಿಮಾ ಪುಷ್ಪ. ಹೌದು, ತೆಲುಗಿನ ಪುಷ್ಪ ಸಿನಿಮಾ 2021ರ ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡು, ಎಷ್ಟು ದೊಡ್ಡ ಹಿಟ್ ಆಯಿತು ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಈಗ ಪುಷ್ಪ2 (Pushpa2) ಸಿನಿಮಾ ಸಿದ್ಧವಾಗುತ್ತಿದ್ದು, ಪುಷ್ಪ2 ನೋಡಲು ಭಾರತ ಸಿನಿಪ್ರಿಯರು ಕಾದು ಕುಳಿತಿದ್ದಾರೆ.
ಪುಷ್ಪ ನಿರ್ದೇಶಕ ಸುಕುಮಾರ್ (Sukumar) ಅವರು ಸಿನಿಮಾ ಕಥೆ ತಯಾರಿಸುವಾಗ, ಅವರ ಮನಸ್ಸಿನಲ್ಲಿ ಇದ್ದದ್ದು ಅಲ್ಲು ಅರ್ಜುನ್ (Allu Arjun) ಅವರಲ್ಲ, ಪುಷ್ಪ ಕಥೆ ಮಾಡಿದ ನಂತರ ನಟ ಮಹೇಶ್ ಬಾಬು (Mahesh Babu) ಅವರಿಗೆ ಈ ಕಥೆಯನ್ನು ಹೇಳಿದ್ದರಂತೆ ಸುಕುಮಾರ್, ಅವರ ಮಹೇಶ್ ಬಾಬು ಅವರು ಪಾತ್ರದ ಮ್ಯಾನರಿಸಮ್ ತಮಗೆ ಸೂಟ್ ಆಗುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದರು. ಆಗ ಆ ಕಥೆ ನಟ ಅಲ್ಲು ಅರ್ಜುನ್ ಅವರ ಬಳಿ ಹೋಯಿತು.
ಅಲ್ಲು ಅರ್ಜುನ್ ಅವರು ಕಥೆ ಕೇಳಿ, ಈ ಸಿನಿಮಾ ಮಾಡಬೇಕು ಎಂದು ಒಪ್ಪಿಕೊಂಡು, ದೊಡ್ಡ ಮಟ್ಟದಲ್ಲಿ ಪುಷ್ಪ ಸಿನಿಮಾ ತಯಾರಾಯಿತು. ಇದು ಅಲ್ಲು ಅರ್ಜುನ್ ಅವರ ಕೆರಿಯರ್ ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದರ ಜೊತೆಗೆ ಅವರ ಕೆರಿಯರ್ ನಲ್ಲಿ ಅತಿಹೆಚ್ಚು ಹಣಗಳಿಕೆ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಈಗ ಪುಷ್ಪ2 ಸಿನಿಮಾ ಮೇಲೆ ಕೂಡ ಅಷ್ಟೇ ನಿರೀಕ್ಷೆ ಇದೆ.
Comments are closed.