Sumalatha: ಬಿಟ್ಟಿ ಯೋಜನೆಗಳನ್ನು ಕೊಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸುಮಲತಾ ರವರು ಕೊಟ್ಟ ಟಾಂಗ್ ಹೇಗಿದೆ ಗೊತ್ತೇ?? ಈ ಪ್ರಶ್ನೆ ಕಾಂಗ್ರೆಸ್ಸಿಗರ ಬಳಿ ಉತ್ತರವಿದೆಯೇ?
Sumalatha: ನಮ್ಮ ರಾಜ್ಯದಲ್ಲಿ ಈಗ ಚುನಾವಣೆ ಬಿಸಿ ಜಾಸ್ತಿಯಾಗಿದೆ, ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬರಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಇತ್ತ ಬಿಜೆಪಿ (BJP) ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದೆ. ಇತ್ತ ನಟಿ ಹಾಗೂ ಸಂಸದೆ ಆಗಿರುವ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷಾವನ್ನು ಟೀಕಿಸಿ ಮದ್ದೂರಿನಲ್ಲಿ ಪ್ರಚಾರ ಮಾಡಿದ್ದಾರೆ. ಸುಮಲತಾ ಅಂಬರೀಶ್ (Sumalatha Ambarish) ಅವರು ಹೇಳಿರುವುದು ಎಂದು ತಿಳಿಸುತ್ತೇವೆ ನೋಡಿ..

“ನಮ್ಮ ಜನರಿಗೆ ಸ್ವಾವಲಂಬಿಯಾಗಿ ಜೀವನ ಕಟ್ಟುವುದು ಹೇಗೆ ಎಂದು ಕಲಿಸಬೇಕು. ಹಸಿವಲ್ಲಿರುವ ವ್ಯಕ್ತಿಗೆ ಮೀನು ಕೊಟ್ಟರೆ, ಹಸಿವು ನೀಗುತ್ತದೆ. ಆದರೆ ಮೀನು ಹಿಡಿಯುವುದನ್ನು ಹೇಳಿಕೊಟ್ಟರೆ, ಬದುಕು ಕಟ್ಟಿಕೊಳ್ಳುತ್ತಾನೆ. ಜನರು ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡಬೇಕು, ಅದನ್ನು ಬಿಟ್ಟು ಎರಡು ಸಾವಿರ ಕೊಡ್ತೀವಿ, ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡ್ತೀವಿ ಅಂತಿದ್ದಾರೆ. ಮೊದಲೆಲ್ಲಾ ನೀರಿಗೆ ತುಂಬಾ ದೂರ ಹೋಗಬೇಕಿತ್ತು, ಈಗ ಮೋದಿ ಅವರು ಜಲ ಜೀವನ್ ಮಿಷನ್ ಇಂದ ಎಲ್ಲರ ಮನೆಗೆ ನೀರು ಒದಗಿಸಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಆಳ್ವಿಕೆ ನೋಡಿದ್ದೇವೆ, ಈಗ ಬಿಜೆಪಿಗೆ ಪ್ರೋತ್ಸಾಹ ಕೊಡಿ..” ಎಂದು ಹೇಳಿದ್ದಾರೆ ಸುಮಲತಾ ಅಂಬರೀಶ್.
ನರೇಂದ್ರ ಮೋದಿ ಅವರು ಮುನ್ನಡೆಸುತ್ತಿರುವ ಬಿಜೆಪಿ ಸರ್ಕಾರ ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದೆ, ಮಹಿಳೆಯರಿಗೆ ಬಹಳಷ್ಟು ಸೌಲಭ್ಯ ನೀಡಿದೆ. ಆಶಾ ಕಾರ್ಯಕರ್ತೆಯರಿಗೆ 6000 ಕೊಡಲಾಗುತ್ತಿತ್ತು, ಕೋವಿಡ್ ಸಮಯದಲ್ಲಿ ಅದರಲ್ಲಿ 50% ಹೆಚ್ಚಿಸಿದ್ದಾರೆ. ಗರ್ಭಿಣಿ ಹೆಣ್ಣುಮಕ್ಕಳಿಗೆ ಫ್ರೀಯಾಗಿ ಸ್ಕ್ಯಾನಿಂಗ್, ತಾಯಿ ಮತ್ತು ಮಗು ಆರೋಗ್ಯ ತಪಾಸಣೆ, ತಾಯಿಯ ಆರೋಗ್ಯ ಚೆನ್ನಾಗಿರಲಿ ಎಂದು ಪೌಷ್ಟಿಕ ಆಹಾರ, ಇನ್ನು ಹೆಚ್ಚಿನ ಸೌಲಭ್ಯ ನೀಡುತ್ತಿದ್ದಾರೆ. ನಾನು ಮದ್ದೂರಿಗೆ ಬಂದಾಗ ಒಬ್ಬ ಸಂಸದೆಯಾಗಿ ಬರೋದಿಲ್ಲ, ಇಲ್ಲಿನ ಸೊಸೆಯಾಗಿ ಬರ್ತೀನಿ, ಇಲ್ಲಿನ ಜನ ಮತದಾರರಲ್ಲ, ಇವರ ಜೊತೆ ನನಗೆ ಅಧಿಕಾರ ಇದೆ, ಸಂಬಂಧ ಇದೆ. ಆತ್ಮೀಯತೆ ಇದೆ.. ಇಲ್ಲಿ ಇಷ್ಟು ವರ್ಷಗಳು ಕೇವಲ ಎರಡೇ ಪಕ್ಷಗಳನ್ನ ಗೆಲ್ಲಿಸಿ, ನಮಗೆ ಸಿಕ್ಕಿರೋದೇನು? ಮೊದಲು ನಾನು ಪರ್ಸನಲ್ ಆಗಿ ನನಗೆ ಆಗಿರುವ ನೋವಿನ ಬಗ್ಗೆ ಹೇಳುತ್ತೇನೆ..
4 ವರ್ಷಗಳ ಹಿಂದೆ ಅಂಬರೀಶ್ ಅವರು ವಿಧಿವಶರಾದಾಗ, ಎರಡು ತಿಂಗಳು ಕಳೆಯುವ ಮೊದಲೇ ನಮಗೆ ಅವಮಾನ ಆಗಿತ್ತು. ಆ ಸಮಯದಲ್ಲಿ ಗುರು ಎನ್ನುವ ಸೈನಿಕ ಹುತಾತ್ಮರಾದಾಗ, ನಾನು ಬಂದಿದ್ದೆ. ನಾನು ಆಗ ಸಂಸದೆ ಆಗಿರಲಿಲ್ಲ, ಆ ಸಮಯದಲ್ಲಿ ಅವರ ಅಂತಿಮ ಸಂಸ್ಕಾರ ಮಾಡಲು ಸರ್ಕಾರ ಬರಲಿಲ್ಲ. ಆಗ ಇದ್ದಿದ್ದು ಯಾರ ಸರ್ಕಾರ ಅಂತ ಗೊತ್ತಿದೆ, ಆ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ಅಂಬರೀಷ್ ಅವರು, ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಾಗ ಕೊಟ್ಟೆವು. ನಾನು ಸಂಸದೆಯಾದ ಮೇಲೆ ಕೂಡ ಬಹಳಷ್ಟು ಕೆಲಸಗಳಿಗೆ ಕಾಟ ಕೊಟ್ಟಿದ್ದಾರೆ, ಅವರು ಹೆಣ್ಣಿಗೆ ಗೌರವ ಕೊಡುವುದಿಲ್ಲ. ಒಂದೇ ಕುಟುಂಬವನ್ನ ಬೆಳೆಸೋದು ಬಿಡಬೇಕು.. ಎಂದು ಹೇಳಿದ್ದಾರೆ ಸುಮಲತಾ.
Comments are closed.