Mobile Tricks: ನಿಮ್ಮ ಸ್ಮಾರ್ಟ್ ಫೋನ್ ದಿಡೀರ್ ಎಂದು ನೀರಿನಲ್ಲಿ ಬಿದ್ದರೇ, ಈ ಚಿಕ್ಕ ಕೆಲಸ ಮಾಡಿ, ಫೋನ್ ಉಳಿಸಿಕೊಳ್ಳಿ. ಹೇಗೆ ಗೊತ್ತೇ?
Mobile Tricks: ಈಗ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೆ. ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿ ಹೋಗಿದೆ, ಫೋನ್ ಇಲ್ಲದೆ ಇರಲು ಸಾಧ್ಯವಿಲ್ಲ ಎನ್ನುವ ಸಮಯ ಇದು. ಎಲ್ಲಾ ಕೆಲಸಗಳನ್ನು ಫೋನ್ ನಲ್ಲಿಯೇ ಮಾಡುತ್ತಾರೆ ಜನರು. ಆದರೆ ಕೆಲವೊಮ್ಮೆ ಫೋನ್ ಅನ್ನು ನೀರಿನಲ್ಲಿ ಬೀಳಿಸಿಬಿಡುತ್ತಾರೆ ಅಥವಾ ಮನೆಯಲ್ಲಿ ಮಳೆಯಲ್ಲಿ ಒದ್ದೆಯಾಗಿಬಿಡುತ್ತದೆ. ಹಾಗೆ ಆದಾಗ ಫೋನ್ ಅನ್ನು ಒಣಗಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದರೆ ಆ ರೀತಿ ಮಾಡದೆ ಕೆಲವು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ನಿಮ್ಮ ಫೋನ್ ಗೆ ಏನು ಆಗುವುದಿಲ್ಲ..

ಹಾಗಿದ್ದರೆ ನಿಮ್ಮ ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ.. ಒಂದು ವೇಳೆ ನಿಮ್ಮ ಫೋನ್ ನೀರಿಗೆ ಬಿದ್ದರೆ ಅಥವಾ ಮಳೆಯಿಂದ ಒದ್ದೆಯಾಗಿ ಹೋದರೆ, ಮೊದಲು ನೀವು ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕು, ಆನ್ ನಲ್ಲಿಯೇ ಬಿಟ್ಟರೆ ಹೆಚ್ಚು ತೊಂದರೆ ಆಗುತ್ತದೆ. ಹಾಗೆಯೇ ಫೋನ್ ಇಂದ ನೀರನ್ನು ಹೊರಹಾಕಲು ಹೆಚ್ಚು ಅಲ್ಲಾಡಿಸಬೇಡಿ, ಇದರಿಂದ ಫೋನ್ ಒಳಗೆ ನೀರು ಸೇರಬಹುದು. ಇನ್ನು ಕೆಲವು ಜನರು ತಮ್ಮ ಫೋನ್ ಒಣಗಿಸಲು ಹೇರ್ ಡ್ರೈಯರ್ ಬಳಸುತ್ತಾರೆ. ಆದರೆ ಇದು ಕೂಡ ಒಳ್ಳೆಯದಲ್ಲ.
ಹೇರ್ ಡ್ರೈಯರ್ ಬಳಸುವುದರಿಂದ ಹೆಚ್ಚು ನೀರು ಒಳಗೆ ಸೇರಿಕೊಳ್ಳಬಹುದು ಅಥವಾ ಒಂದೇ ಕಡೆಗೆ ನೀರು ಸೇರಿಕೊಳ್ಳಬಹುದು. ಫೋನ್ ನೀರಿನಲ್ಲಿ ಬಿದ್ದಾಗ ಮೊದಲು ನಿಮ್ಮ ಫೋನ್ ಅನ್ನು ಬಟ್ಟೆಯಿಂದ ಒರೆಸಿ, ನಂತರ ಸುಮಾರು 12 ಗಂಟೆಗಳ ಕಾಲ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸದೆ ಹಾಗೆಯೇ ಬಿಟ್ಟುಬಿಡಿ. ಫೋನ್ ಅನ್ನು ಮಿನಿಮಂ 6 ಗಂಟೆಗಳ ಕಾಲ ಅಕ್ಕಿ ಚೀಲದ ಒಳಗೆ ಇದೆ, ಇದರಿಂದ ನಿಮ್ಮ ಸ್ಮಾರ್ಟ್ ಫೋನ್ ಬೇಗ ಒಣಗುತ್ತದೆ.
ಆದರೆ ನಿಮ್ಮ ಫೋನ್ ಚಾರ್ಜಿಂಗ್ ಪೋರ್ಟ್ ಹಾಗೂ ಹೆಡ್ ಫೋನ್ ಜ್ಯಾಕ್ ಒಳಗೆ ಅಕ್ಕಿ ಕಾಳು ಹೋಗದ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಸಿಮ್ ಕಾರ್ಡ್ ಅನ್ನು ಹೊರತೆಗೆದು ಒಂದು ಟ್ರೇ ಗೆ ಹಾಕಿ. ನಿಮ್ಮ ಫೋನ್ ಪೂರ್ತಿಯಾಗಿ ಒಣಗಿದ ನಂತರ, ಆನ್ ಮಾಡಿ.. ಪೂರ್ತಿ ಒಣಗಿದ ಮೇಲೆ ಕೂಡ ಸ್ವಲ್ಪ ತೇವಾಂಶ ಇರುತ್ತದೆ. ಒಂದು ವೇಳೆ ಹೀಗಾಗಿ ನಿಮ್ಮ ಮೊಬೈಲ್ ಸರಿಯಾಗಿ ಕೆಲಸ ಮಾಡದೆ ಹೋದರೆ, ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಿ.
Comments are closed.