Virat Kohli: ನೂರಾರು ಕೋಟಿಯ ಒಡೆಯ ಕೊಹ್ಲಿ, ಅನುಷ್ಕಾ ಶರ್ಮ ರವರು ತಿಂದ ಐಸ್ ಕ್ರೀಮ್ ಬೆಲೆ ಎಷ್ಟು ಗೊತ್ತೇ? ಈ ಚಿಲ್ಲರೆ ಹಣದ ಐಸ್ ಕ್ರೀಮ್ ಬೇಕಿತ್ತಾ ಎಂದ ನೆಟ್ಟಿಗರು.
Virat Kohli: ಸೆಲೆಬ್ರಿಟಿ ಕಪಲ್ ಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ಇಬ್ಬರು ಈಗ ಹೆಚ್ಚಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುಟ್ಟಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಐಪಿಎಲ್ (IPL) ಪಂದ್ಯಗಳು ಈ ವರ್ಷ ಹೋಮ್ ಗ್ರೌಂಡ್ ನಲ್ಲೇ ನಡೆಯುತ್ತಿದೆ. ಆರ್ಸಿಬಿ ತಂಡದ ಕೆಲವು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುತ್ತಿದೆ. ಈ ಕಾರಣಕ್ಕೆ ಮ್ಯಾಚ್ ಇರುವಾಗಲೆಲ್ಲಾ ಅನುಷ್ಕಾ ಅವರು ಕೂಡ ಬೆಂಗಳೂರಿಗೆ ಬರುತ್ತಿದ್ದಾರೆ.

ಮ್ಯಾಚ್ ಇದ್ದ ದಿನ ಸ್ಟೇಡಿಯಂ ಗೆ ಬಂದು ಪತಿ ವಿರಾಟ್ ಕೊಹ್ಲಿ ಅವರು ಹಾಗೂ ತಂಡಕ್ಕೆ ಸಪೋರ್ಟ್ ಮಾಡುತ್ತಾರೆ. ಅನುಷ್ಕಾ ಅವರು ಓದಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ಅನುಷ್ಕಾ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷವಾದ ಪ್ರೀತಿ ಇದೆ. ಬೆಂಗಳೂರಿನ ಹಲವು ಜಾಗಗಳು ಅವರಿಗೆ ಇಷ್ಟ. ಇತ್ತೀಚೆಗೆ ಅನುಷ್ಕಾ ಅವರು ಪತಿ ವಿರಾಟ್ ಕೋಹ್ಲಿ, ಅವರ ತಾಯಿ ಹಾಗೂ ಕೆಲವು ಸ್ನೇಹಿತರ ಜೊತೆಗೆ ಮಲ್ಲೇಶ್ವರಂ ನಲ್ಲಿ ಕಾಣಿಸಿಕೊಂಡಿದ್ದರು.
ಸೆಂಟ್ರಲ್ ಟಿಫನ್ ರೂಮ್ (CTR) ನಲ್ಲಿ ಮಸಾಲೆ ದೋಸೆ, ಕೇಸರಿಭಾತ್, ಮಂಗಳೂರು ಬಜ್ಜಿ ಇದೆಲ್ಲವನ್ನು ಸವಿದರು. ಇದೀಗ ಈ ಜೋಡಿ ಬೆಂಗಳೂರಿನಲ್ಲಿ ಬಹಳ ಫೇಮಸ್ ಆಗಿರುವ ಕಾರ್ನರ್ ಹೌಸ್ (Corner House) ಐಸ್ ಕ್ರೀಮ್ ಹತ್ತಿರ ಕಾಣಿಸಿಕೊಂಡಿದ್ದಾರೆ. ಮನೆಗೆ ಹೋಗುವ ಸಮಯದಲ್ಲಿ ಕಾರ್ನರ್ ಹೌಸ್ ಇಂದ ಐಸ್ ಕ್ರೀಮ್ ತೆಗೆದುಕೊಂಡು ಹೋಗುವುದಕ್ಕೆ ಕಾರ್ನರ್ ಹೌಸ್ ಹತ್ತಿರ ಬಂದಿತ್ತು ಈ ಜೋಡಿ. ಇನ್ನು ಇವರಿಬ್ಬರು ಸವಿದಿರುವ ಐಸ್ ಕ್ರೀಮ್ ನ ಬೆಲೆ ಎಷ್ಟು ಎಂದು ಈಗ ಚರ್ಚೆಯಾಗುತ್ತಿದೆ.
ಕಾರ್ನರ್ ಹೌಸ್ ನ ಮೆನು ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ ವಿರುಷ್ಕ ಜೋಡಿ ಎಂಜಾಯ್ ಮಾಡಿ ತಿಂದ ಐಸ್ ಕ್ರೀಮ್ ನ ಬೆಲೆ ಒಂದು ಐಸ್ ಕ್ರೀಮ್ ಗೆ ₹230 ರೂಪಾಯಿ ಆಗಿದೆ. ಈ ಬೆಲೆ ಕೇಳಿದ ನೆಟ್ಟಿಗರು, ಇಷ್ಟು ಕಡಿಮೆ ಹಣದ ಐಸ್ ಕ್ರೀಮ್ ತಿನ್ನಬೇಕಾ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಇದೀಗ ಈ ಜೋಡಿ ಹೆಚ್ಚಾಗಿಯೇ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿ ಅಭಿಮಾನಿಗಳಿಗೆ ಕೂಡ ಬಹಳ ಸಂತೋಷ ಆಗಿದೆ.
Comments are closed.