Bhumika: ತೆಲುಗಿನಲ್ಲಿ ಭರ್ಜರಿಯಾಗಿ ಮಿಂಚಿದ್ದ ನಟಿಗೆ ಬಾಲಿವುಡ್ ಕರೆದು ಏನು ಮಾಡಿತ್ತು ಗೊತ್ತೆ? ಕರಾಳ ದಿನಗಳನ್ನು ನೆನೆದ ನಟಿ ಹೇಳಿದ್ದೇನು ಗೊತ್ತೇ?
Bhumika: ನಟಿ ಭೂಮಿಕಾ ಅವರು ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟಿ. ತಮಿಳು ತೆಲುಗಿನಲ್ಲಿ ಹೆಚ್ಚಾಗಿ ನಟಿಸಿರುವ ಇವರು ಕೆಲವು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಭೂಮಿಕಾ ಅವರು ತೆಲುಗು ಹಾಗೂ ತಮಿಳಿನಲ್ಲಿ ಸೂಪರ್ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡು ಸ್ಟಾರ್ ನಟಿಯಾಗಿ ಯಶಸ್ಸು ಪಡೆದಿದ್ದಾರೆ. ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿದ್ದ ಭೂಮಿಕಾ ಅವರು ಮದುವೆ ನಂತರ..

ಸಿನಿಮಾ ರಂಗದಿಂದ ಕೆಲ ವರ್ಷಗಳ ಕಾಲ ದೂರ ಉಳಿದಿದ್ದರು. ನಂತರ ಇವರು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಎಂಎಸ್ ಧೋನಿ ಸಿನಿಮಾದಲ್ಲಿ ಧೋನಿ ಅವರ ಅಕ್ಕನ ಪಾತ್ರದ ಮೂಲಕ. ಕನ್ನಡದಲ್ಲಿ ಲವ್ ಯು ಆಲಿಯಾ ಸಿನಿಮಾದಲ್ಲಿ ನಟಿಸಿದ್ದರು. ಭೂಮಿಕಾ ಅವರು ಈಗ ಪಾತ್ರಗಳ ಆಯ್ಕೆ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ. ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ನಾಯಕಿಯಾಗಿ ಎಂಟ್ರಿಯಾಗಿದ್ದು ಹಿಂದಿ ಸಿನಿಮಾ ಮೂಲಕ ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ..
ನಟ ಸಲ್ಮಾನ್ ಖಾನ್ (Salman Khan) ಅವರ ತೇರೇ ನಾಮ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಆದರೆ ಬಾಲಿವುಡ್ ಇವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರ ಬಗ್ಗೆ ಖುದ್ದು ಭೂಮಿಕಾ ಅವರೇ ಮಾತನಾಡಿದ್ದಾರೆ.. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಭೂಮಿಕಾ, “ತೇರೇ ನಾಮ್ ಸಿನಿಮಾ ಸೂಪರ್ ಹಿಟ್ ಆದಾಗ ಬಾಲಿವುಡ್ ಇಂದ ಸಾಕಷ್ಟು ಅವಕಾಶಗಳು ಬಂದವು. ನಾನು ಎರಡನೇ ಸಿನಿಮಾ ಸೈನ್ ಮಾಡಿದೆ, ಆದರೆ ನಿರ್ಮಾಪಕರು ಬದಲಾಗಿ, ನನ್ನನ್ನು ಬದಲಾಯಿಸಿ, ಹೀರೋ, ಟೈಟಲ್ ಎಲ್ಲವೂ ಬದಲಾಯಿತು.. ಆ ಸಿನಿಮಾ ಮಾಡಿದ್ದರೆ ನನ್ನ ಕೆರಿಯರ್ ಹಾಳಾಗುತ್ತಿತ್ತು..
ಅದಾದ ನಂತರ ಜಬ್ ವಿ ಮೆಟ್ ಸಿನಿಮಾ ಹೀರೋಯಿನ್ ರೋಲ್ ಸೈನ್ ಮಾಡಿದೆ, ಆದರೆ ನನ್ನನ್ನು ಆ ಸಿನಿಮಾ ಇಂದ ತೆಗೆದು ಹಾಕಿದರು. ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಸೈನ್ ಮಾಡಿದೆ, ಆ ಸಿನಿಮಾಗೆ ಡೇಟ್ಸ್ ಕೂಡ ಕೊಟ್ಟಿದ್ದೆ. ಡೇಟ್ಸ್ ಕೊಟ್ಟಮೇಲು ನನ್ನನ್ನು ತೆಗೆದು ಹಾಕಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು..” ಎಂದು ಬಾಲಿವುಡ್ ನಲ್ಲಿ ತಮಗೆ ಆದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ ನಟಿ ಭೂಮಿಕಾ ಚಾವ್ಲಾ.
Comments are closed.