Ram Charan: ಉಪಾಸನಾರವನ್ನು ಮದುವೆಯಾಗುವ ಮುನ್ನ ರಾಮ್ ಚರಣ್ ಪ್ರೀತಿಸಿ ಕೈ ಕೊಟ್ಟ ಬೆಣ್ಣೆಯಂತಹ ನಟಿ ಯಾರು ಗೊತ್ತೇ?? ನಿಜಕ್ಕೂ ಅಪ್ಸರೆ.
Ram Charan: ನಟ ರಾಮ್ ಚರಣ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಸಹ, ತಮ್ಮ ಸ್ವಂತ ಪರಿಶ್ರಮದಿಂದ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಇವರು ನಟನೆ ಶುರು ಮಾಡಿದ್ದು, ಚಿರುತ (Chirutha) ಸಿನಿಮಾ ಮೂಲಕ, ಈ ಸಿನಿಮಾ ಆವರೇಜ್ ಹಿಟ್ ಎನ್ನಿಸಿಕೊಂಡಿತು. ಆದರೆ ರಾಜಮೌಳಿ ಅವರ ಮಗಧೀರ ಸಿನಿಮಾ ರಾಮ್ ಚರಣ್ (Ram Charan) ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ತಂದುಕೊಟ್ಟಿತು.

ಮಗಧೀರ (Magadheera) ನಂತರ ರಾಮ್ ಚರಣ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ, ತೆಲುಗಿನ ಸ್ಟಾರ್ ಹೀರೋ ಆಗಿ ನಿಂತರು. ಅದರಲ್ಲೂ ಆರ್.ಆರ್.ಆರ್ (RRR) ಸಿನಿಮಾ ರಾಮ್ ಚರಣ್ ಅವರನ್ನು ಇನ್ನು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಗ್ಲೋಬಲ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ ರಾಮ್ ಚರಣ್. ರಾಮ್ ಚರಣ್ ಅವರು ಉಪಾಸನಾ (Upasana Kammineni) ಅವರನ್ನು ಪ್ರೀತಿಸಿ ಮದುವೆಯಾದರು ಎನ್ನುವ ವಿಷಯ ಎಲ್ಲರಿಗೂ ಗೊತ್ತು.
ಆದರೆ ಉಪಾಸನ ಅವರಿಗಿಂತ ಮೊದಲೇ ರಾಮ್ ಚರಣ್ ಅವರು ಮತ್ತೊಬ್ಬ ನಟಿಯನ್ನು ಪ್ರೀತಿಸಿದ್ದರು. ಆ ನಟಿ ಮತ್ಯಾರು ಅಲ್ಲ, ರಾಮ್ ಚರಣ್ ಅವರ ಮೊದಲ ಸಿನಿಮಾ ನಾಯಕಿ ನೇಹಾ ಶರ್ಮ (Neha Sharma). ಹೌದು, ಮೊದಲ ಸಿನಿಮಾದಲ್ಲಿ ರಾಮ್ ಚರಣ್ ಅವರು ನೇಹಾ ಅವರ ಬ್ಯೂಟಿಗೆ ಫಿದಾ ಆಗಿದ್ದರು, ಇಬ್ಬರ ನಡುವೆ ಪ್ರೀತಿ ಸಹ ಶುರುವಾಗಿತ್ತು ಎನ್ನಲಾಗಿದೆ. ಆದರೆ ಈ ಪ್ರೀತು ಹೆಚ್ಚು ಸಮಯ ಉಳಿಯಲು ಸಾಧ್ಯವಾಗಿಲ್ಲ.
ಚಿರಂಜೀವಿ ಅವರು ಈ ವಿಷಯಕ್ಕೆ ಎಂಟ್ರಿ ಕೊಟ್ಟು, ರಾಮ್ ಚರಣ್ ಹಾಗೂ ನೇಹಾ ಶರ್ಮ ಇಬ್ಬರಿಗೂ ವಾರ್ನಿಂಗ್ ಕೊಟ್ಟಿದ್ದರಂತೆ. ನೇಹಾ ಶರ್ಮ ಅವರಿಗೆ, ತಮ್ಮ ಮಗನಿಂದ ದೂರ ಉಳಿಯಬೇಕು ಎಂದು ವಾರ್ನಿಂಗ್ ಕೊಟ್ಟಿದ್ದರಂತೆ ಚಿರು. ಈ ಕಾರಣಕ್ಕೆ ರಾಮ್ ಚರಣ್ ಅವರ ಮೊದಲ ಲವ್ ಸ್ಟೋರಿ ಸಕ್ಸಸ್ ಆಗದೆ ಹಾಗೆಯೇ ಉಳಿದು ಹೋಯಿತು. ಈಗ ಉಪಾಸನಾ ಅವರೊಡನೆ ಸಂತೋಷವಾಗಿದ್ದಾರೆ ರಾಮ್ ಚರಣ್.
Comments are closed.