Suraj Randiv: ಒಂದು ಕಾಲದಲ್ಲಿ ಧೋನಿ ರವರ ನೆಚ್ಚಿನ ಬೌಲರ್ ಆಗಿದ್ದ ಈತ, ಇಂದು ಊಟಕ್ಕೆ ಕೂಡ ಕಷ್ಟ ಪಡುತ್ತಾ ಏನು ಮಾಡುತ್ತಿದ್ದಾನೆ ಗೊತ್ತೇ??
Suraj Randiv: ಜೀವನದಲ್ಲೋ ಯಾವಾಗ ಏನಾಗುತ್ತದೆ? ಯಾರ ಅದೃಷ್ಟ ಹೇಗೆ ಬೆಳಗುತ್ತದೆ? ಯಾರ ಅದೃಷ್ಟ ಕೈಕೊಡುತ್ತದೆ ಎಂದು ಹೇಳಲಾಗೋದಿಲ್ಲ. ಇದು ಕ್ರಿಕೆಟ್ ನಲ್ಲೂ ಕೂಡ ಇದೇ ರೀತಿ. ಒಂದು ಕಾಲದಲ್ಲಿ ಸ್ಟಾರ್ ಕ್ರಿಕೆಟರ್ ಎನ್ನಿಸಿಕೊಂಡವರು ಇಂದು ಏನು ಇಲ್ಲದ ಸ್ಥಿತಿ ತಲುಪಿದ್ದಾರೆ. ಇಂಥ ಉದಾಹರಣೆಗಳು ಆಗಾಗ ಸಿಗುತ್ತಲೇ ಇರುತ್ತದೆ. ಈ ಸಾಲಿಗೆ ಮತ್ತೊಂದು ಉದಾಹರಣೆ ಸಿ.ಎಸ್.ಕೆ (CSK) ತಂಡದಲ್ಲಿ ಧೋನಿ ಅವರ ಫೇವರೆಟ್ ಆಗಿದ್ದ ಆಟಗಾರ ಸೂರಜ್ ರಣದೀವ್.

ಇವರು ಮೂಲತಃ ಶ್ರೀಲಂಕಾದ ಆಟಗಾರ, 2012ರಲ್ಲಿ ಸಿ.ಎಸ್.ಕೆ ತಂಡದ ಭಾಗವಾಗಿದ್ದ ಇವರು, ಅದೇ ವರ್ಷ ಆಡಿದ 8 ಪಂದ್ಯಗಳಲ್ಲಿ 6 ವಿಕೆಟ್ಸ್ ಪಡೆದಿದ್ದರು. ಹಾಗೆಯೇ ಮ್ಯಾಚ್ ವಿನ್ನರ್ ಎಂದು ಹೆಸರು ಮಾಡಿದ್ದ ಇವರು ಎಂ.ಎಸ್.ಧೋನಿ (M S Dhoni) ಅವರ ಫೇವರೆಟ್ ಪ್ಲೇಯರ್ ಆಗಿದ್ದರು. ಅಂಥ ಆಟಗಾರ ಇಂದು ಆಸ್ಟ್ರೇಲಿಯಾದಲ್ಲಿ ಬಸ್ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ..
ಇವರು 2011ರ ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡದ ಪರವಾಗಿ ಆಡಿದ್ದರು. ಸೂರಜ್ ಅವರು 2010ರಲ್ಲಿ ನಡೆದ ಇಂಡಿಯಾ ವರ್ಸಸ್ ಶ್ರೀಲಂಕಾ ವಿರುದ್ಧದ ಓಡಿಐ ಪಂದ್ಯದಲ್ಲಿ ಭಾರತದ ವಿರುದ್ಧ ಮಾಡಿದ ಕುತಂತ್ರಕ್ಕೆ ಇಡೀ ಶ್ರೀಲಂಕಾ ತಂಡ ಅವಮಾನ ಅನುಭವಿಸಿದಾಗ, ಇವರು ಅಂದು ನೋ ಬಾಲ್ ಹಾಕಿ ಸೆಹ್ವಾಗ್ ಅವರು ಶತಕ ವಂಚಿತರಾಗುವ ಹಾಗೆ ಮಾಡಿದ್ದಕ್ಕೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಇವರ ವಿರುದ್ಧ ಆಕ್ರೋಶಗೊಂಡಿದ್ದರು..
ಐಪಿಎಲ್ ನಲ್ಲಿ ಸಿ.ಎಸ್.ಕೆ ತಂಡದ ಪರವಾಗಿ ಕೆಲ ಸಮಯ ಆಡಿದ ಬಳಿಕ ರಣದೀವ್ ಅವರು 2019ರಲ್ಲಿ ಆಸ್ಟ್ರೇಲಿಯಾಗೆ ತೆರಳಿದರು. ಅಲ್ಲಿ ಬಸ್ ಓಡಿಸುತ್ತಾ ಜೊತೆಗೆ ಅಲ್ಲಿನ ಲೀಗ್ ಗಳಲ್ಲಿ ಆಡುವುದಕ್ಕೆ ಶುರು ಮಾಡಿದರು..ಆದರೆ ಕ್ರಿಕೆಟ್ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಡಲಿಲ್ಲ. ಹಾಗಾಗಿ ಕ್ರಿಕೆಟ್ ಬಿಟ್ಟು ಈಗ ಬಸ್ ಓಡಿಸುತ್ತಿದ್ದಾರೆ. ಜೀವನ ನಡೆಸಲು ಹಾಗು ಊಟಕ್ಕೂ ಕಷ್ಟಪಡುತ್ತಿದ್ದಾರೆ.
Comments are closed.