Prabhudeva: ನಯನತಾರ ಮೋಸ ಮಾಡಿದ ಬಳಿಕವೂ, ಕಷ್ಟದಲ್ಲಿ ಇದ್ದರೂ ಪ್ರಭುದೇವ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತೇ?? ಅದೊಂದು ಕಾರಣ ಏನು ಗೊತ್ತೇ?
Prabhudeva: ಪ್ರಭುದೇವ ಅವದ ಬಗ್ಗೆ ಗೊತ್ತಿಲ್ಲ ಎನ್ನುವವರು ಇರೋದಕ್ಕೆ ಸಾಧ್ಯವಿಲ್ಲ..ತಮ್ಮ ನೃತ್ಯ, ನಿರ್ದೇಶನ, ನಟನೆ, ಕೋರಿಯಾಗ್ರಾಫಿ ಇವುಗಳಿಂದ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾಗಿದ್ದಾರೆ. ಪ್ರಭುದೇವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದ. ವೃತ್ತಿಯಲ್ಲಿ ದೊಡ್ಡ ಮಟ್ಟದ ಹೆಸರು, ಸಾಧನೆ ಎಲ್ಲವನ್ನು ಮಾಡಿದ್ದಾರೆ. ಆದರೆ ಪರ್ಸನಲ್ ಲೈಫ್ ನಲ್ಲಿ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ..

ಪ್ರಭುದೇವ ಅವರಿಗೆ ಮದುವೆ ಆಗಿ ಹೆಂಡತಿ ಇದ್ದರು ಸ್ಟಾರ್ ನಟಿ ಜೊತೆಗೆ ಸಂಬಂಧ ಇಟ್ಟುಕೊಂಡು ಸುದ್ದಿಯಾಗಿದ್ದರು. ಪ್ರಭುದೇವ ಅವರು ಮೊದಲಿಗೆ ರಮಲತಾ ಎನ್ನುವವರ ಜೊತೆಗೆ ಮದುವೆಯಾದರು. ಇವರಿಗೆ ಮೂವರು ಮಕ್ಕಳಿದ್ದರು. ಆದರೆ ಪ್ರಭುದೇವ ಅವರ ಮಗ 13ನೇ ವಯಸ್ಸಿನಲ್ಲಿದ್ದಾಗ, ಅನಾರೋಗ್ಯವಾಗಿ ಕ್ಯಾನ್ಸರ್ ರೋಗದಿಂದ ವಿಧಿವಶರಾದರು. ಬಹಳ ಸಮಯದವರೆಗೂ ಪ್ರಭುದೇವ ಅವರು ಅದೇ ನೋವಿನಲ್ಲಿದ್ದರು. ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು..
ಆಗ ನಟಿ ನಯನತಾರ ಅವರನ್ನು ಪ್ರೀತಿಸಿ ಅವರನ್ನು ಮದುವೆಯಾಗಬೇಕು ಎಂದುಕೊಂಡರು. ಆದರೆ ಹೆಚ್ಚು ದಿನ ಈ ಪ್ರೀತಿ ಉಳಿಯಲಿಲ್ಲ. ಕೊನೆಗೆ ಮೊದಲ ಪತ್ನಿಗೆ ವಿಚ್ಛೇದನ ಪಡೆದರು. ಆದರೆ ನಯನತಾರ ಅವರೊಡನೆ ಮದುವೆ ನಡೆಯಲಿಲ್ಲ. ನಂತರ ಪ್ರಭುದೇವ ಅವರು ಒಂಟಿಯಾಗಿದ್ದರು. ಚಿಕಿತ್ಸೆ ಪಡೆಯುವಾಗ, ಮುಂಬೈನ ಫಿಸಿಯೋಥೆರಪಿಸ್ಟ್ ಡಾ.ಹಿಮಾನಿ ಅವರನ್ನು ಭೇಟಿ ಮಾಡಿದರು, ಅವರಿಬ್ಬರ ಭೇಟಿ ಪ್ರೀತಿಯಾಗಿ ಆಕೆಯ ಜೊತೆಗೆ ಗುಟ್ಟಾಗಿ ಮದುವೆ ಆಗಿದ್ದರು.
ಈ ವಿಚಾರದ ಬಗ್ಗೆ ಕೆಲವು ಸಾರಿ ಸುದ್ದಿಗಳು ಸಹ ಕೇಳಿಬಂದಿದ್ದವು. ಆದರೆ ಪ್ರಭುದೇವ ಅವರು ಆ ಮದುವೆ ಬಗ್ಗೆ ಏನನ್ನೂ ಮಾತನಾಡಿರಲಿಲ್ಲ. ಆದರೆ ಇತ್ತೀಚೆಗೆ ಡಾ.ಹಿಮಾನಿ ಅವರು ಪ್ರಭುದೇವ ಅವರ ಹುಟ್ಟುಹಬ್ಬದ ದಿನ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮವಾಗಿ ಪೋಸ್ಟ್ ಬರೆದಿದ್ದರು, “ನಿಮ್ಮ ಜೊತೆಗೆ ಮೂರು ವರ್ಷಗಳ ಪಯಣ ಸಾಗಿದೆ.. ನೀವು ಎಲ್ಲವನ್ನು ಎಂಜಾಯ್ ಮಾಡುವ ವ್ಯಕ್ತಿ.. ನಿಮ್ಮನ್ನು ಮದುವೆಯಾಗಿದ್ದು ನನ್ನ ಅದೃಷ್ಟ..” ಎಂದು ಬರೆದು ಪ್ರಭುದೇವ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. ಈ ಪೋಸ್ಟ್ ನೋಡಿದರೆ ಅವರಿಬ್ಬರ ಬಾಂಧವ್ಯ ಎಂಥದ್ದು ಎಂದು ಅರ್ಥವಾಗುತ್ತದೆ.
Comments are closed.