Adipurush Sita: ಸೀತಾ ಮಾತೆಯ ಪಾತ್ರದಲ್ಲಿ ಕೃತಿ ಸನೋನ್ ಪೋಸ್ಟರ್ ನೋಡಿ, ನೆಟ್ಟಿಗರು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??
Adipurush Sita: ನಟ ಪ್ರಭಾಸ್ (Prabhas) ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ. ಇವರ ಸಿನಿಮಾಗಳು ಈಗ ಬ್ಯಾಕ್ ಟು ಬ್ಯಾಕ್ ರೆಡಿಯಾಗುತ್ತಿದೆ. ಲಿಸ್ಟ್ ನಲ್ಲಿ ಆದಿಪುರುಷ್, ಪ್ರಾಜೆಕ್ಟ್ ಕೆ, ರಾಜಾ ಡಿಲಕ್ಸ್, ಹಾಗೂ ಸ್ಪಿರಿಟ್ (Spirit) ಸಿನಿಮಾಗಳಿಗೆ. ಇಲ್ಲಿ ಆದಿಪುರುಷ್ (Adipurush) ಸಿನಿಮಾ 550 ಕೋಟಿ, ಪ್ರಾಜೆಕ್ಟ್ ಕೆ (Project K) 500 ಕೋಟಿ, ಸಲಾರ್ (Salaar) 250ಕೋಟಿ, ರಾಜಾ ಡಿಲಕ್ಸ್ (Raja Deluxe) 200 ಕೋಟಿ, ಸ್ಪಿರಿಟ್ 500 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ, ಬಹಳ ಬೇಗ ಶೂಟಿಂಗ್ ನಡೆಯುತ್ತಿದೆ. ಇನ್ನು ಆದಿಪುರುಷ್ ಸಿನಿಮಾ ಜೂನ್ 16ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುವುದಕ್ಕೆ ಸಿದ್ಧವಾಗಿದೆಮ್

ಇದು ರಾಮಾಯಣದ ಕಥೆಯ ಆಧಾರಿತ ಸಿನಿಮಾ ಆಗಿದ್ರೆ..ಆದಿಪುರುಷ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಟೀಕೆಗೆ ಗುರಿಯಾಗಿತ್ತು. ಸಿನಿಮಾದಲ್ಲಿ ರಾವಣಾಸುರ ಪಾತ್ರದಲ್ಲಿ ನಟ ಸೈಫ್ ಅಲಿ ಖಾನ್ ಅವರು ನಟಿಸಿದ್ದು, ಇವರ.ಪಾತ್ರವನ್ನು ಚಿತ್ರಿಸಿರುವ ರೀತಿಯನ್ನು ಜನರು ಟೀಕೆ ಮಾಡಿದ್ದರು. ಈ ಕಾರಣಕ್ಕೆ ಸೈನಿಕ ಗ್ರಾಫಿಕ್ಸ್ ಕೆಲಸವನ್ನು ಇನ್ನು ಬೆಟರ್ ಆಗಿ ಮಾಡಬೇಕು ಎಂದು ಚಿತ್ರತಂಡ ಕೆಲಸ ಮಾಡಿದೆ, ಹಾಗಾಗಿ ಕಳೆದ ವರ್ಷ ತೆರೆಕಾಣಬೇಕಿದ್ದ ಸಿನಿಮಾ ಈ ವರ್ಷ ಜೂನ್ 16ರಂದು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ.
ಸಿನಿಮಾ ಬಗ್ಗೆ ಈಗ ಬ್ಯಾಕ್ ಟು ಬ್ಯಾಕ್ ಅಪ್ಡೇಟ್ ಗಳು ಸಹ ಸಿಗುತ್ತಿದೆ. ಇತ್ತೀಚೆಗೆ ಶ್ರೀರಾಮನವಮಿ ದಿನ ವಿಶೇಷವಾದ ಪೋಸ್ಟರ್ ಹಾಗೂ ಇತ್ತಿಚೆಗೆ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಗ್ರಾಫಿಕ್ಸ್ ವಿಷಯಕ್ಕೆ ಟೀಕೆಗೆ ಒಳಗಾಗಿ, ಟ್ರೋಲ್ ಆಗಿದ್ದ ಆದಿಪುರುಷ್ ಚಿತ್ರತಂಡ ಈಗ ಪ್ರೇಕ್ಷಕರಿಗೆ ಇಷ್ಟ ಆಗುವುದಕ್ಕೆ ಶುರುವಾಗಿದೆ. ಇದೀಗ ನಾಯಕಿ ಕೃತಿ ಸನೊನ್ (Kriti Sanon) ಅವರ ಸೀತಾಮಾತೆಯ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರೂಪದಲ್ಲಿ ಬಿಡುಗಡೆ ಆಗಿದ್ದು, ಕೃತಿ ಅವರ ಈ ಲುಕ್ ಹೈಲೈಟ್ ಆಗಿದೆ.
ರಾವಣ ಅಪಹರಣೆ ಮಾಡಿರುವ ಸೀತಾಮಾತೇ, ತನ್ನ ಪತಿ ಶ್ರೀರಾಮ ಬರುತ್ತಾರೆ ಎಂದು ಕಣ್ಣೀರು ಹಾಕುತ್ತಾ, ಕಾದು ಕುಳಿತಿರುವ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಕೃತಿ ಸನೊನ್ ಅವರು ಬಹಳ ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸೀತಾ ಪಾತ್ರಕ್ಕೆ ಇವರೇ ಬೆಸ್ಟ್ ಎಂದು ಕೂಡ ಹೇಳುತ್ತಿದ್ದಾರೆ. ನಿರ್ದೇಶಕ ಓಂ ರಾವತ್ ಅವರ ಮೇಲೆ ಈಗ ಭರವಸೆ ಶುರುವಾಗಿದ್ದು, ಪ್ರಭಾಸ್ ಅವರಿಗೆ ಈ ಸಿನಿಮಾ ಇಂದ ಹಿಟ್ ಸಿಗಲಿ ಎನ್ನುತ್ತಿದ್ದಾರೆ ನೆಟ್ಟಿಗರು.
Comments are closed.