Nethra: ಕಿರುತೆರೆಯಲ್ಲಿ ಅದ್ಭುತವಾಗಿ ನಟನೆ ಮಾಡಿ ಮಿಂಚುತ್ತಿರುವ ನೇತ್ರ ರವರು ಇದೀಗ ಎಲ್ಲರಿಗೂ ಇಷ್ಟ: ವಯಸ್ಸಿಗೂ ಮೀರಿದ ಪಾತ್ರ. ಹೇಗಿದೆ ಗೊತ್ತೇ ಇವರ ಹವಾ?
Nethra: ಜೀಕನ್ನಡ (Zee Kannadda) ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರುವ ಧಾರವಾಹಿ ಶ್ರೀರಸ್ತು ಶುಭಮಸ್ತು (Shrirasthu Shubhamasthu). ಈ ಧಾರವಾಹಿಯಲ್ಲಿ ವಿಲ್ಲನ್ ಶಾರ್ವರಿ ಪಾತ್ರದ ಬಗ್ಗೆ ಜನರಿಗೆ ಹೊಸದಾಗಿ ಹೇಳಬೇಕಿಲ್ಲ. ಈ ಪಾತ್ರದ ಅಭಿನಯ, ಗತ್ತು ಇದೆಲ್ಲವೂ ಜನರಿಗೆ ಮೆಚ್ಚುಗೆಯಾಗಿದೆ. ವಿಲ್ಲನ್ ಪಾತ್ರವಾದರು ಅಭಿನಯ ಅದ್ಭುತವಾಗಿರುವುದರಿಂದ ಜನರಿಗೆ ಈ ಪಾತ್ರ ಇಷ್ಟವಾಗಿದೆ. ಶಾರ್ವರಿ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿಯ ಬಗ್ಗೆ ನಿಮಗೆ ಗೊತ್ತಾ? ಇವರ ಹವಾ ಹೇಗಿದೆ ಗೊತ್ತಾ?

ಶ್ರೀರಸ್ತು ಶುಭಮಸ್ತು ಧಾರವಾಹಿಯ ಸುಂದರವಾದ ವಿಲ್ಲನ್ ಶಾರ್ವರಿ ಪಾತ್ರದಲ್ಲಿ ನಟಿಸುತ್ತಿರುವವರು ನಟಿ ನೇತ್ರ ಜಾಧವ್ (Nethra Jadhav). ಈ ಮೊದಲು ಇವರು ಆಕೃತಿ, ಸುಂದರಿ, ರಥಸಪ್ತಮಿ ಸೇರಿದಂತೆ ಹಲವು ಕನ್ನಡ ಹಾಗೂ ಕೆಲವು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಹೆಚ್ಚಿನ ಬೇಡಿಕೆ ಮತ್ತು ಯಶಸ್ಸು ಎರಡನ್ನು ತಂದುಕೊಟ್ಟಿರೋದು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಶಾರ್ವರಿ ಪಾತ್ರ ಎಂದರೆ ತಪ್ಪಾಗುವುದಿಲ್ಲ. ಶಾರ್ವರಿ ಪಾತ್ರದಲ್ಲಿ ಇವರ ಅಭಿನಯ ಅಚ್ಚುಕಟ್ಟಾಗಿದೆ.
ಈ ಧಾರವಾಹಿ ಇಂದ ನೇತ್ರ ಅವರಿಗೆ ಅಭಿಮಾನಿ ಬಳಗ ಕೂಡ ಹೆಚ್ಚಾಗಿದೆ. ನಿಜವಾಗಿ ಹೇಳಬೇಕು ಎಂದರೆ ನೇತ್ರಾ ಅವರಿಗೆ ಇದು ವಯಸ್ಸಿಗೆ ಮೀರಿದ ಪಾತ್ರ. ನಿಜ ಜೀವನದಲ್ಲಿ ಇವರಿಗೆ ಮದುವೆಯಾಗಿ ಇಬ್ಬರು ಸುಂದರವಾದ ಮಕ್ಕಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ನೇತ್ರಾ ಜಾಧವ್ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಧಾರವಾಹಿ ತಂಡದ ಜೊತೆಗೆ ಒಳ್ಳೆಯ ಫ್ರೆಂಡ್ಶಿಪ್ ಇಟ್ಟುಕೊಂಡಿರುವ ನೇತ್ರಾ ಅವರು ಆಗಾಗ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.
ಇನ್ನು ಧಾರವಾಹಿಯಲ್ಲಿ ಇವರ ಪಾತ್ರ ರೋಚಕತೆಯಿಂದ ಕೂಡಿದೆ. ಶಾರ್ವರಿ ಪಾತ್ರ ಮಾಧವ್ ಸಂತೋಷವನ್ನು ಹಾಳು ಮಾಡಲು ಒಂದಲ್ಲಾ ಒಂದು ಕುತಂತ್ರಗಳನ್ನು ಮಾಡುತ್ತಲೇ ಇದು, ಈಗ ಮಾಧವ್ ಜೊತೆಗೆ ಕ್ಲೋಸ್ ಆಗಿರುವ ತುಳಸಿಯನ್ನು ಹುಡುಕಿ, ಅವರಿಬ್ಬರ ಸ್ನೇಹವನ್ನು ದೂರ ಮಾಡಿ ಮಾಧವ್ ಗೆ ಸಂತೋಷ ಸಿಗದ ಹಾಗೆ ಮಾಡುವ ಪ್ರಯತ್ನದಲ್ಲಿ ತುಳಸಿಯ ಹುಡುಕಾಟದಲ್ಲಿದ್ದಾಳೆ ಶಾರ್ವರಿ. ಕಥೆ ಯಾವ ರೀತಿ ಮುಂದಕ್ಕೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ.
Comments are closed.