Balakrishna: ಬಾಲಯ್ಯ ಪ್ರೀತಿ ಮಾಡಿದ ಏಕೈಕ ನಟಿ ಯಾರು ಗೊತ್ತೇ?? ಈಕೆ ಎಂದರೇ ಬಾಲಯ್ಯಗೆ ಜೀವ. ಆದರೆ ಕೊನೆಗೆ ಏನಾಯ್ತು ಗೊತ್ತೇ??
Balakrishna: ತೆಲುಗು (Tollywood) ಚಿತ್ರರಂಗದ ಖ್ಯಾತ ನಟ ಬಾಲಯ್ಯ (Balayya) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ತೆಲುಗು ಚಿತ್ರರಂಗದ ಮೇರು ನಟ ಸೀನಿಯರ್ ಎನ್ಟಿಆರ್ ಅವರ ಮಗನಾಗಿ ಎಂಟ್ರಿ ಕೊಟ್ಟರು ಬಾಲಯ್ಯ. ಬಳಿಕ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ತಮಗೆಂದು ಒಳ್ಳೆಯ ಸ್ಥಾನ ಸೃಷ್ಟಿಸಿಕೊಂಡರು. ಇವರಿಗೆ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಬಾಲಯ್ಯ ಅವರು 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಹಳಷ್ಟು ಹೀರೋಯಿನ್ ಗಳ ಜೊತೆಗೆ ನಟಿಸಿದ್ದಾರೆ.

ಆದರೆ ಬಾಲಯ್ಯ ಅವರ ಬಗ್ಗೆ ಯಾವುದೇ ಒಂದು ರೂಮರ್ ಗಳು ಕೂಡ ಬರಲಿಲ್ಲ. ಅವರು ಯಾವುದೇ ಹೀರೋಯಿನ್ ಅನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಒಂದೇ ಒಂದು ರೂಮರ್ ಕೂಡ ಬಂದಿಲ್ಲ ಎಂದರೆ ಅವರ ಕೆರಿಯರ್ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಆ ಒಬ್ಬ ಹೀರೋಯಿನ್ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಬಾಲಯ್ಯ ಅವರು ಆ ಹೀರೋಯಿನ್ ಅನ್ನು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು.
ಆ ನಟಿ ಮತ್ಯಾರು ಅಲ್ಲ, ಸೌತ್ ಇಂಡಿಯಾದ ಎವರ್ ಗ್ರೀನ್ ಎನ್ನಿಸಿಕೊಂಡಿರುವ ಸುಹಾಸಿನಿ (Suhasini) ಅವರು. ಇವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ, ಸುಹಾಸಿನಿ ಅವರು ಹಾಗೂ ಬಾಲಯ್ಯ ಅವರು ಮಂಗಮ್ಮಗಾರಿ ಮನವಡು ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರೀಕರಣ ರಾಜಮಂಡ್ರಿ ಹತ್ತಿರದ ಊರುಗಳಲ್ಲಿ ನಡೆಯುತ್ತಿತ್ತು. ಆದರೆ ಆ ಸಮಯದಲ್ಲಿ ಶೂಟಿಂಗ್ ಕೊನೆಯ ದಿನ ಸುಹಾಸಿನಿ ಅವರಿಗೆ ದುಬಾರಿ ಬೆಲೆಯ ಡೈಮಂಡ್ ನೆಕ್ಲೆಸ್ ಅನ್ನು ಗಿಫ್ಟ್ ಆಗಿ ಕೊಡಲಾಗಿತ್ತು.
ಆ ವಿಚಾರ ಮಾಧ್ಯಮದವರಿಗೆ ಗೊತ್ತಾಗಿ, ಸುಹಾಸಿನಿ ಅವರು ಹಾಗೂ ಬಾಲಯ್ಯ ಅವರ ನಡುವೆ ಏನೋ ಇದೆ ಎಂದು ಮಾಧ್ಯಮದವರು ವರದಿ ಮಾಡಿದ್ದರು. ಆಗ ನಿರ್ದೇಶಕ ಕೋಡಿ ರಾಮಕೃಷ್ಣ (Kodi Ramakrishna) ಅವರು ಎಲ್ಲಾ ಪತ್ರಕರ್ತರನ್ನು ಕರೆದು, ನಿಮಗೆ ತೋಚಿದ ಹಾಗೆ ಯಾಕೆ ಬರೆಯುತ್ತೀರಾ, ಸೀನಿಯರ್ ಎನ್ಟಿಆರ್ (NTR) ಅವರಿಗೆ ಗೊತ್ತಾದರೆ ನಿಮ್ಮ ಪೇಪರ್ ಎತ್ತಂಗಡಿ ಆಗುವ ಹಾಗೆ ಮಾಡುತ್ತಾರೆ ಎಂದು ಹೇಳಿದರಂತೆ. ಆದರೆ ಈ ವಿಷಯ ಕೆಲವು ಸಾರಿ ಮಾಧ್ಯಮಗಳಲ್ಲಿ ಬಂದಿತ್ತಾದರು, ನಂತರ ಹಾಗೆಯೇ ಸೈಲೆಂಟ್ ಆಯಿತು.
Comments are closed.