King Kohli: ಕೊನೆಗೂ ನವೀನ್ ಹಾಗೂ ಕೊಹ್ಲಿ ನಡುವೆ ಜಗಳ ಶುರು ಆಗಲು ಕಾರಣ ಬಹಿರಂಗ: ಶುರು ಮಾಡಿದ್ದು ಯಾರು ಗೊತ್ತೇ? ಇವೆಲ್ಲ ಬೇಕಿತ್ತಾ??
King Kohli: ಮೊನ್ನೆ ನಡೆದ ಆರ್.ಸಿ.ಬಿ ವರ್ಸಸ್ ಎಲ್.ಎಸ್.ಜಿ (RCB vs LSG) ಪಂದ್ಯದಲ್ಲಿ ಆರ್ಸಿಬಿ (RCB) ತಂಡ 126 ಕಡಿಮೆ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಂಡು, ಭರ್ಜರಿ ಗೆಲುವು ಸಾಧಿಸಿತು. ಆದರೆ ಪಂದ್ಯ ಇನ್ನು ಮುಗಿಯುವುದಕ್ಕಿಂತ ಮೊದಲೇ ಮೈದಾನದಲ್ಲಿ ಜಗಳ ಶುರುವಾಗಿತ್ತು. ಒಂದು ಕಡೆ ವಿರಾಟ್ ಕೊಹ್ಲಿ (Virat Kohli) ಹಾಗೂ ಗೌತಮ್ ಗಂಭೀರ್ (Gautam Gambhir) ಅವರ ವಾರ್ ನಡೆಯುತ್ತಿದ್ದರೆ ಮತ್ತೊಂದು ಕಡೆ ವಿರಾಟ್ ಹಾಗೂ ನವೀನ್ ಉಲ್ ಹಕ್ (Naveen Ul Haq) ನಡುವೆ ಮ್ಯಾಚ್ ನಡೆಯುವಾಗಲೇ ಜಗಳ ಶುರುವಾಗಿತ್ತು. ಅಷ್ಟಕ್ಕೂ ಜಗಳ ಶುರುವಾಗಿದ್ದು ಯಾಕೆ ಎಂದು ನೋಡುವುದಾದರೆ..

ನಂತರ ಅಂಪೈರ್ ಗೆ ನಡೆದದ್ದೇನು ಎಂದು ವಿವರಣೆ ಕೊಡುವಾಗ, ವಿರಾಟ್ ಅವರು ತಮ್ಮ ಕಾಲಿನ ಮೇಲೆ ಇದ್ದ ಧೂಳನ್ನು ನವೀನ್ ಅವರ ಕಡೆಗೆ ತೋರಿಸಿದಾಗ, ಜಗಳ ಜಾಸ್ತಿಯಾಗಿದೆ. 18ನೇ ಓವರ್ ನಲ್ಲಿ ಕೂಡ ಕೊಹ್ಲಿ ಹಾಗೂ ನವೀನ್ ಜಗಳ ಮುಂದುವರೆಯಿತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂದ್ಯ ನಡೆಯುವಾಗ ಜಗಳವಾಯಿತು, ಆದರೆ ಪಂದ್ಯ ಮುಗಿದ ಮೇಲು ಕೂಡ ಜಗಳ ನಿಲ್ಲದೆ ಮುಂದುವರೆಯಿತು. ಪಂದ್ಯ ಮುಗಿದ ನಂತರ ಹ್ಯಾಂಡ್ ಶೇಕ್ ಮಾಡುವಾಗ, ಕೊಹ್ಲಿ ಎದುರು ನವೀನ್ಬ ಬಂದಾಗ ಮತ್ತೆ ಮಾತಿನ ಚಕಾಮಕಿ ಶುರುವಾಗಿದೆ.
ಆಗ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಬಂದು ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದರು. ಬಳಿಕ ಕೆ.ಎಲ್.ರಾಹುಲ್ (K L Rahul) ಅವರೊಡನೆ ವಿರಾಟ್ ಅವರು ಮಾತನಾಡುವಾಗ, ನವೀನ್ ಪಕ್ಕದಲ್ಲೇ ಹೋಗುವಾಗ ಕೆ.ಎಲ್.ರಾಹುಲ್ ಅವರು ನವೀನ್ ರನ್ನು ಕರೆದರು. ಆದರೆ ನವೀನ್ ಬರದೆ ಮುಖ ತಿರುಗಿಸಿಕೊಂಡು ಹೋದರು. ಇದೆಲ್ಲ ನಡೆದದ್ದಕ್ಕೆ ಕೊಹ್ಲಿ ಜೊತೆಗೆ ಗಂಭೀರ್ ಕೂಡ ಜಗಳಕ್ಕೆ ನಿಂತರು. ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗ, ಎರಡು ತಂಡಗಳ ಆಟಗಾರರು ಬಂದು ಇಬ್ಬರನ್ನು ಸಮಾಧಾನಪಡಿಸಿದ್ದಾರೆ.
ಹಾಗೆಯೇ ವಿರಾಟ್ ಅವರು ಎಲ್.ಎಸ್.ಜಿ ತಂದರ ಕೈಲ್ ಮೇಯರ್ಸ್ ಅವರೊಡನೆ ಮಾತನಾಡುವಾಗ ಗಂಭೀರ್ ಅವರು ಬಂದು ಕೈಲ್ ಅವರನ್ನು ಕರೆದುಕೊಂಡು ಹೋಗಿದ್ದಕ್ಕೆ ವಿರಾಟ್ ಅವರಿಗೆ ಮತ್ತೆ ಕೋಪ ಬಂದು ಜಗಳ ಶುರುವಾಯಿತು. ಒಟ್ಟಿನಲ್ಲಿ ಪಂದ್ಯದಲ್ಲಿ ಇಷ್ಟೆಲ್ಲಾ ಆಗಿದ್ದಕ್ಕೆ, ಐಪಿಎಲ್ ರೂಲ್ಸ್ ಬ್ರೇಕ್ ಆಗಿರುವ ಕಾರಣ, ನವೀನ್, ವಿರಾಟ್ ಹಾಗೂ ಗಂಭೀರ್ ಮೇಲೆ ದಂಡ ಹೇರಲಾಗಿದೆ.
Comments are closed.