Shriya Saran: ನಟಿಯರನ್ನು ಅಷ್ಟೇ ಅಲ್ಲ, ತಾಕತ್ತಿದ್ದರೆ ಅದೇ ಪ್ರಶ್ನೆ ನಟರನ್ನು ಕೇಳಿ, ಎಂದು ಬಹಿರಂಗವಾಗಿ ತಾಳ್ಮೆ ಕಳೆದುಕೊಂಡ ನಟಿ. ಏನಾಗಿದೆ ಗೊತ್ತೇ??
Shriya Saran: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ ಬಂದು 20 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಎಲ್ಲಾ ಭಾಷೆಯ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡ ಶ್ರೀಯಾ ಅವರು ಬಹಳ ಬೇಗ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯ ಪಟ್ಟವನ್ನು ಬಹಳ ಬೇಗ ಪಡೆದುಕೊಂಡರು.

ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದವು. ದೊಡ್ಡ ದೊಡ್ಡ ಸ್ಟಾರ್ ಹೀರೋಗಳು, ಸ್ಟಾರ್ ನಿರ್ದೇಶಕರ ಸಿನಿಮಾಗಳಿಗೆ ನಾಯಕಿಯಾಗಿ ಶ್ರೀಯಾ ಅವರನ್ನೇ ಹಾಕಿಕೊಳ್ಳುವಷ್ಟು ಫೇಮಸ್ ಆಗಿದ್ದರು. ಕಳೆದ ವರ್ಷ ತೆರೆಕಂಡು ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ ಆರ್.ಆರ್.ಆರ್ (RRR) ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದರು. ಈ ವರ್ಷ ಇವರು ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ತೆರೆಕಂಡು ಸೂಪರ್ ಹಿಟ್ ಆಗಿವೆ.
ರಷ್ಯಾ ಕಡೆಯ ಉದ್ಯಮಿ ಆಂಡ್ರೂ ಕೊಚ್ಚಿನ್ ಅವರನ್ನು ಮದುವೆ ಆಗಿರುವ ಶ್ರೀಯಾ ಅವರಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ. ಹಾಗಿದ್ದರೂ ಸಹ ಶ್ರೀಯಾ ಅವರು ಈಗಲೂ ಸುಂದರವಾಗಿ ಕಾಣುತ್ತಾರೆ. ಇದೇ ವಿಷಯದ ಬಗ್ಗೆ ಪತ್ರಕರ್ತರೊಬ್ಬರು ಮದುವೆ ಆಗಿ ಮಗುವಾದಮೇಲು ಹೇಗೆ ಇಷ್ಟು ಸುಂದರವಾಗಿದ್ದೀರಾ ಎಂದು ಕೇಳಿದ್ದು, ಅದಕ್ಕೆ ಕೋಪಗೊಂಡು ಉತ್ತರ ಕೊಟ್ಟಿದ್ದಾರೆ, ಶ್ರೀಯಾ ಅವರ ಮಾತು ಈಗ ವೈರಲ್ ಆಗಿದೆ.
“ಹೀರೋಯಿನ್ ಗಳನ್ನು ಈ ಪ್ರಶ್ನೆ ಕೇಳ್ತೀರಾ, ಧೈರ್ಯ ಇದ್ದರೆ ಹೀರೋಗಳನ್ನು ಇದೇ ಪ್ರಶ್ನೆ ಕೇಳಿ.. ನಾನು ನನ್ನ ಸೌಂದರ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ.. ನನ್ನ ಸ್ನೇಹಿತರೆಲ್ಲರು ಅದೇ ವಿಷಯಕ್ಕೆ ನನ್ನನ್ನು ಹೊಗಳುತ್ತಾರೆ.. ನೀವು ಮೊದಲು ಹೀರೋಗಳ ಹತ್ತಿರ ಇದೇ ಪ್ರಶ್ನೆ ಕೇಳಿ, ಅವರು ಉತ್ತರ ಕೊಟ್ಟ ನಂತರ ನಾನು ಈ ಪ್ರಶ್ನೆಗೆ ಉತ್ತರ ಕೊಡುತ್ತೇನೆ..” ಎಂದಿದ್ದಾರೆ ನಟಿ ಶ್ರೀಯಾ. ಇದೀಗ ಹೀರೋಗಳ ವಿಚಾರಕ್ಕೆ ನಟಿ ಶ್ರೀಯಾ ಅವರು ಮಾಡಿರುವ ಕಮೆಂಟ್ಸ್ ವೈರಲ್ ಆಗಿದೆ.
Comments are closed.