Sudeep: ಸುದೀಪ್ ರವರಿಗೆ ಹೆದರಿಸಲು ಪತ್ರ ಬರೆದಿದ್ದು ಯಾಕೆ ಅಂತೇ ಗೊತ್ತೇ?? ನಿರ್ದೇಶಕ ರಮೇಶ್ ಕಿಟ್ಟಿ ಹೇಳಿದ್ದೇನು ಗೊತ್ತೇ?
Sudeep: ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ, ಬಿಜೆಪಿ ಪಕ್ಷಕ್ಕೆ ಪ್ರಚಾರ ಮಾಡುತ್ತಾರೆ ಎಂದು ಗೊತ್ತಾದಾಗ, ಹಲವು ಜನರು ಹಲವು ರೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗೆಯೇ ಸುದೀಪ್ ಅವರಿಗೆ ಅನಾಮಧೇಯ ಪತ್ರ ಕೂಡ ಬಂದಿತ್ತು, ಸುದೀಪ್ ಅವರ ಖಾಸಗಿ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಅವರ ಮ್ಯಾನೇಜರ್ ಜ್ಯಾಕ್ ಮಂಜು ಅವರು ಪೊಲೀಸರಲ್ಲಿ ದೂರು ನೀಡಿ, ಈ ರೀತಿ ಮಾಡಿರುವುದು ರಾಜಕೀಯದವರಲ್ಲ, ನಮ್ಮವರೇ, ಅದು ಯಾರು ಎಂದು ಗೊತ್ತಿದೆ, ಅವರಿಗೆ ಕಾನೂನಿನ ಕಡೆಯಿಂದ ಸರಿಯಾದ ಉತ್ತರ ಕೊಡುತ್ತೇವೆ ಎಂದಿದ್ದರು. ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಲಾಗಿತ್ತು, ತನಿಖೆ ನಡೆಯುವಾಗ, ಮುಖ ಮುಚ್ಚಿಕೊಂಡು ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ ಗೆ ಲೆಟರ್ ಹಾಕಿ ಹೋಗಿರುವುದು ಗೊತ್ತಾಗಿತ್ತು.
ಬಳಿಕ, ಕಾರಿನ ನಂಬರ್ ಪ್ಲೇಟ್ ಪರಿಶೀಲಿಸಿದಾಗ, ಫೇಕ್ ನಂಬರ್ ಪ್ಲೇಟ್ ಎಂದು ಗೊತ್ತಾಯಿತು. ಸುದೀಪ್ ಅವರಿಗು ಆಪ್ತ ವಲಯದವರ ಮೇಲೆಯೇ ಅನುಮಾನ ಇದ್ದ ಕಾರಣ ಎಲ್ಲರನ್ನು ತನಿಖೆ ನಡೆಸಿದ ನಂತರ ನಿರ್ದೇಶಕ ರಮೇಶ್ ಕಿಟ್ಟಿ ಈ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗಿದ್ದು, ಅವರನ್ನು ಅರೆಸ್ಟ್ ಮಾಡಲಾಗಿದೆ. ಇವರು ಸುದೀಪ್ ಅವರ ಆಪ್ತರೆ ಆಗಿದ್ದರು. ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ, 2004ರಲ್ಲಿ ಒಂದು ಸಿನಿಮಾ ಕೂಡ ಡೈರೆಕ್ಟ್ ಮಾಡಿದ್ದಾರೆ..
ನಂತರ, ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಇವರು ಟ್ರಸ್ಟ್ ಗೆ 2ಕೋಟಿ ನೀಡಿದ್ದು, ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಅವರು ಕೊಡಲಿಲ್ಲ ಎನ್ನುವ ಕಾರಣಕ್ಕೆ, ವೈಮನಸ್ಸು ಶುರುವಾಗಿದೆ. ಇದೇ ಕಾರಣಕ್ಕೆ ಸುದೀಪ್ ಅವರಿಗೆ ಆ ರೀತಿ ಪತ್ರ ಬರೆದಿದ್ದಾಗಿ ಪೊಲೀಸ್ ಅವರ ಬಳಿ ಒಪ್ಪಿಕೊಂಡಿದ್ದಾರೆ ನಿರ್ದೇಶಕ ರಮೇಶ್ ಕಿಟ್ಟಿ. ಇದೀಗ ಇವರನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.